ಚಿಂತಾಮಣಿ | ನಾಡಬಂದೂಕು, 150ಕ್ಕೂ ಹೆಚ್ಚು ನಾಡಬಾಂಬ್ ಜಪ್ತಿ: ಆರೋಪಿ ಬಂಧನ
ಚಿಂತಾಮಣಿ: ತಾಲ್ಲೂಕಿನ ಮುರುಗಮಲ್ಲ ಹೋಬಳಿಯ ಬೋಡಗುಂಡ್ಲಹಳ್ಳಿ ಗ್ರಾಮದ ಮನೆ ಮೇಲೆ ಬಟ್ಲಹಳ್ಳಿ ಠಾಣೆಯ ಪೊಲೀಸರು ಗುರುವಾರ ದಾಳಿ ನಡೆಸಿ ಒಂದು ನಾಡಬಂದೂಕು ಹಾಗೂ 150ಕ್ಕೂ ಹೆಚ್ಚು ನಾಡಬಾಂಬ್ ಜಪ್ತಿ ಮಾಡಿದ್ದಾರೆ.ಗ್ರಾಮದ ನಿವಾಸಿ ನರಸಿಂಹಪ್ಪ ಬಂಧಿತ ಆರೋಪಿ. ನರಸಿಂಹಪ್ಪ ತಮ್ಮ ಮನೆಯಲ್ಲಿ ಅಕ್ರಮವಾಗಿ ನಾಡಬಂದೂಕು ಮತ್ತು ನಾಡಬಾಂಬ್ ಸಂಗ್ರಹಿಸಿದ್ದಾರೆಂಬ ಖಚಿತ ಮಾಹಿತಿ ಮೇ

ಚಿಂತಾಮಣಿ: ತಾಲ್ಲೂಕಿನ ಮುರುಗಮಲ್ಲ ಹೋಬಳಿಯ ಬೋಡಗುಂಡ್ಲಹಳ್ಳಿ ಗ್ರಾಮದ ಮನೆ ಮೇಲೆ ಬಟ್ಲಹಳ್ಳಿ ಠಾಣೆಯ ಪೊಲೀಸರು ಗುರುವಾರ ದಾಳಿ ನಡೆಸಿ ಒಂದು ನಾಡಬಂದೂಕು ಹಾಗೂ 150ಕ್ಕೂ ಹೆಚ್ಚು ನಾಡಬಾಂಬ್ ಜಪ್ತಿ ಮಾಡಿದ್ದಾರೆ.ಗ್ರಾಮದ ನಿವಾಸಿ ನರಸಿಂಹಪ್ಪ ಬಂಧಿತ ಆರೋಪಿ. ನರಸಿಂಹಪ್ಪ ತಮ್ಮ ಮನೆಯಲ್ಲಿ ಅಕ್ರಮವಾಗಿ ನಾಡಬಂದೂಕು ಮತ್ತು ನಾಡಬಾಂಬ್ ಸಂಗ್ರಹಿಸಿದ್ದಾರೆಂಬ ಖಚಿತ ಮಾಹಿತಿ ಮೇರೆಗೆ ಕೆಂಚಾರ್ಲಹಳ್ಳಿ ಠಾಣೆಯ ಇನ್ಸ್ಪೆಕ್ಟರ್ ನಾರಾಯಣಸ್ವಾಮಿ, ಬಟ್ಲಹಳ್ಳಿ ಠಾಣೆಯ ಸಬ್ ಇನ್ಸ್ಪೆಕ್ಟರ್ ಶಿವಕುಮಾರ್, ಸಹಾಯಕ ಸಬ್ ಇನ್ಸ್ಪೆಕ್ಟರ್ ಮುಕ್ತಿಯಾರ್ ಪಾಷಾ ನೇತೃತ್ವದ ತಂಡ ದಾಳಿ ನಡೆಸಿ, ಆರೋಪಿಯನ್ನು ಬಂಧಿಸಿ ನ್ಯಾಯಾಂಗಕ್ಕೆ ಬಂಧನಕ್ಕೆ ಒಳಪಡಿಸಿದ್ದಾರೆ.ಬಟ್ಲಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.261009-16-571822683
Read the complete story at Prajavani