ದೆಹಲಿಯಲ್ಲಿ ರಾತ್ರೋರಾತ್ರಿ 1,000ಕ್ಕೂ ಹೆಚ್ಚು ಜನ ವಶಕ್ಕೆ
ನವದೆಹಲಿ: ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್(Gyanesh Kumar) ಅವರ ರಾಜೀನಾಮೆಗೆ ಆಗ್ರಹಿಸಿ ಕಾಕ್ರೋಚ್ ಜನತಾ ಪಾರ್ಟಿ(CJP) ಮತ್ತು ಅಖಿಲ ಭಾರತ ವಿದ್ಯಾರ್ಥಿ ಸಂಘಟನೆ (ಎಐಎಸ್ಎ) ಶನಿವಾರ ಕರೆ ನೀಡಿರುವ ಪ್ರತಿಭಟನೆಯ ಹಿನ್ನೆಲೆಯಲ್ಲಿ, ದೆಹಲಿ ಪೊಲೀಸರು ರಾಜಧಾನಿಯಾದ್ಯಂತ ರಾತ್ರೋರಾತ್ರಿ ಕನಿಷ್ಠ 1,000 ಜನರನ್ನು ವಶಕ್ಕೆ ಪಡೆದಿದ್ದಾರೆ. ಶನಿವಾರ ಮಧ್ಯ

ನವದೆಹಲಿ: ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್(Gyanesh Kumar) ಅವರ ರಾಜೀನಾಮೆಗೆ ಆಗ್ರಹಿಸಿ ಕಾಕ್ರೋಚ್ ಜನತಾ ಪಾರ್ಟಿ(CJP) ಮತ್ತು ಅಖಿಲ ಭಾರತ ವಿದ್ಯಾರ್ಥಿ ಸಂಘಟನೆ (ಎಐಎಸ್ಎ) ಶನಿವಾರ ಕರೆ ನೀಡಿರುವ ಪ್ರತಿಭಟನೆಯ ಹಿನ್ನೆಲೆಯಲ್ಲಿ, ದೆಹಲಿ ಪೊಲೀಸರು ರಾಜಧಾನಿಯಾದ್ಯಂತ ರಾತ್ರೋರಾತ್ರಿ ಕನಿಷ್ಠ 1,000 ಜನರನ್ನು ವಶಕ್ಕೆ ಪಡೆದಿದ್ದಾರೆ. ಶನಿವಾರ ಮಧ್ಯರಾತ್ರಿ 12:30ರ ಸುಮಾರಿಗೆ ವಶಕ್ಕೆ ಪಡೆಯಲಾದವರ ಪೈಕಿ ಸುಮಾರು 250 ಮಂದಿ ದೆಹಲಿಯ ಆಗ್ನೇಯ (ಸೌತ್ ಈಸ್ಟ್) ಜಿಲ್ಲೆಗೆ ಸೇರಿದವರಾಗಿದ್ದಾರೆ. ವಿಶೇಷವಾಗಿ 2020ರ ಸಿಎಎ ವಿರೋಧಿ ಪ್ರತಿಭಟನೆಯ(CAA Protest) ಕೇಂದ್ರಬಿಂದುವಾಗಿದ್ದ ಶಾಹೀನ್ ಬಾಗ್ ಸುತ್ತಮುತ್ತಲಿನ ಪ್ರದೇಶಗಳಿಂದ ಈ ಜನರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇದನ್ನೂ ಓದಿ: ದೆಹಲಿಯಲ್ಲಿ ಹೈ ಅಲರ್ಟ್- 45 ಮೆಟ್ರೋ ನಿಲ್ದಾಣಗಳು ಬಂದ್, ಜಂತರ್ ಮಂತರ್ನಲ್ಲಿ 7 ಹಂತದ ಬ್ಯಾರಿಕೇಡ್ #WATCH | Delhi Police detain a few protesters who had started gathering at Jantar Mantar for the Cockroach Janta Party (CJP) protest here. https://t.co/QqZtF4Jswd — ANI (@ANI) October 10, 2026 ಇನ್ನುಳಿದಂತೆ ಉತ್ತರ ಪ್ರದೇಶದ ಗಡಿಭಾಗಕ್ಕೆ ಹೊಂದಿಕೊಂಡಿರುವ ಶಹದಾರಾ ಹಾಗೂ ಪೂರ್ವ ದೆಹಲಿ ಜಿಲ್ಲೆಗಳಿಂದ 100ಕ್ಕೂ ಹೆಚ್ಚು ಜನರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. #WATCH | Delhi: Heavy security deployed around the roundabout near Hotel Le Méridien, ahead of the Cockroach Janta Party (CJP) protest today. RAF, Pink Force of Delhi Police and CRPF are also here, besides the Delhi Police personnel. https://t.co/4RyN6Af07d — ANI (@ANI) October 10, 2026 ಈ ಕ್ರಮಗಳು ಸಂಪೂರ್ಣ ಮುಂಜಾಗ್ರತಾ ದೃಷ್ಟಿಯಿಂದ ಕೈಗೊಂಡಿರುವಂಥದ್ದಾಗಿದ್ದು, ಈ ಹಿಂದೆ ಪ್ರತಿಭಟನಾಕಾರರನ್ನು ಒಗ್ಗೂಡಿಸಿ ಕಾನೂನುಬಾಹಿರ ಪರಿಸ್ಥಿತಿ ಸೃಷ್ಟಿಸಿದ ಇತಿಹಾಸ ಹೊಂದಿರುವ ವ್ಯಕ್ತಿಗಳನ್ನು ಗುರುತಿಸಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.