ಬೆಂಗಳೂರು | ಪಬ್/ಬಾರ್, ಡಾನ್ಸ್ ಬಾರ್ಗಳ ದಾಳಿ: ಒಂದೇ ದಿನ 651 ಪ್ರಕರಣ ದಾಖಲು
ಬೆಂಗಳೂರು: ನಗರದ ಪಬ್/ಬಾರ್, ಡಾನ್ಸ್ ಬಾರ್ ಹಾಗೂ ಕ್ಲಬ್ಗಳ ಮೇಲೆ ವಿವಿಧ ವಿಭಾಗಗಳ ಪೊಲೀಸರು, ಶುಕ್ರವಾರ ತಡರಾತ್ರಿ ದಾಳಿ ನಡೆಸಿ ನಿಯಮ ಉಲ್ಲಂಘಿಸಿದ್ದವರಿಗೆ ಬಿಸಿ ಮುಟ್ಟಿಸಿದರು.ನಗರ ಪೊಲೀಸ್ ಕಮಿಷನರ್ ಸೀಮಾಂತ್ ಕುಮಾರ್ ಸಿಂಗ್ ಅವರೇ ಖುದ್ದು ಕೆಲವು ಪಬ್ ಹಾಗೂ ಕ್ಲಬ್ಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ನಿಯಮ ಉಲ್ಲಂಘಿಸಿದವರ ವಿರುದ್ಧ ಒಂದೇ ದಿನ 651 ಪ್ರ
ಬೆಂಗಳೂರು: ನಗರದ ಪಬ್/ಬಾರ್, ಡಾನ್ಸ್ ಬಾರ್ ಹಾಗೂ ಕ್ಲಬ್ಗಳ ಮೇಲೆ ವಿವಿಧ ವಿಭಾಗಗಳ ಪೊಲೀಸರು, ಶುಕ್ರವಾರ ತಡರಾತ್ರಿ ದಾಳಿ ನಡೆಸಿ ನಿಯಮ ಉಲ್ಲಂಘಿಸಿದ್ದವರಿಗೆ ಬಿಸಿ ಮುಟ್ಟಿಸಿದರು.ನಗರ ಪೊಲೀಸ್ ಕಮಿಷನರ್ ಸೀಮಾಂತ್ ಕುಮಾರ್ ಸಿಂಗ್ ಅವರೇ ಖುದ್ದು ಕೆಲವು ಪಬ್ ಹಾಗೂ ಕ್ಲಬ್ಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ನಿಯಮ ಉಲ್ಲಂಘಿಸಿದವರ ವಿರುದ್ಧ ಒಂದೇ ದಿನ 651 ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.ವಿಶೇಷ ಕಾರ್ಯಾಚರಣೆಯ ವೇಳೆ 843 ಪಬ್/ಬಾರ್ಗಳು, 42 ಡಾನ್ಸ್ ಬಾರ್ಗಳು ಹಾಗೂ ಕ್ಲಬ್ಗಳು, 53 ಮನರಂಜನಾ ಸ್ಥಳಗಳು, 522 ಹೋಟೆಲ್ ಹಾಗೂ ರೆಸ್ಟೊರೆಂಟ್ಗಳನ್ನು ಪರಿಶೀಲನೆ ನಡೆಸಲಾಯಿತು. ಬ್ರಿಗೇಡ್ ರಸ್ತೆಯಲ್ಲಿರುವ ಪಬ್ಗಳೂ ಸೇರಿ ಹಲವು ಕ್ಲಬ್ಗಳ ಮೇಲೂ ದಾಳಿ ನಡೆಸಿ, ಪರಿಶೀಲನೆ ನಡೆಸಲಾಗಿದೆ.‘ವಿವಿಧ ಪೊಲೀಸ್ ತಂಡಗಳು ಮನರಂಜನಾ ಕೇಂದ್ರಗಳ ಮೇಲೆ ದಾಳಿ ನಡೆಸಿ ನಿಯಮ ಪಾಲನೆಯ ಕುರಿತು ತಪಾಸಣೆ ನಡೆಸಿದವು. ನಿಗದಿತ ಸಮಯದ ನಂತರವೂ ಕಾರ್ಯ ನಿರ್ವಹಿಸುತ್ತಿದ್ದ ಪಬ್ಗಳನ್ನು ಬಂದ್ ಮಾಡಿಸಲಾಯಿತು. ನಗರದ ಪ್ರಮುಖ ರಸ್ತೆಗಳಲ್ಲಿ ನಾಕಾಬಂದಿ ಹಾಕಿ 2,584 ದ್ವಿಚಕ್ರ ವಾಹನಗಳು, 692 ತ್ರಿ–ಚಕ್ರ ವಾಹನಗಳು, 748 ನಾಲ್ಕು ಚಕ್ರದ ವಾಹನಗಳನ್ನು ತಪಾಸಣೆ ನಡೆಸಲಾಯಿತು. ಅವುಗಳಲ್ಲಿ 187 ದ್ವಿಚಕ್ರ ವಾಹನಗಳು, ಎರಡು ತ್ರಿಚಕ್ರ ವಾಹನಗಳನ್ನು ವಶಕ್ಕೆ ಪಡೆದುಕೊಳ್ಳಲಾಯಿತು’ ಎಂದು ಮೂಲಗಳು ಹೇಳಿವೆ.ಇನ್ನು ಸಂಚಾರ ವಿಭಾಗದಿಂದ ವಿವಿಧ ಮಾದರಿಯ 8,780 ವಾಹನಗಳನ್ನು ತಪಾಸಣೆ ಮಾಡಲಾಯಿತು. ಮದ್ಯಪಾನ ಮಾಡಿ, ವಾಹನ ಚಾಲನೆ ಮಾಡುತ್ತಿದ್ದ 113 ಚಾಲಕರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ. ಏಕಮುಖ ಸಂಚಾರ ರಸ್ತೆಯಲ್ಲಿ ವಿರುದ್ಧ ದಿಕ್ಕಿನಿಂದ ವಾಹನ ಚಾಲನೆ ಮಾಡುತ್ತಿದ್ದವರ ವಿರುದ್ಧ 364 ಹಾಗೂ ನಂಬರ್ ಪ್ಲೇಟ್ ಇಲ್ಲದೇ ವಾಹನ ಚಾಲನೆ ಮಾಡುತ್ತಿದ್ದವರ ವಿರುದ್ಧ 34 ಪ್ರಕರಣ ದಾಖಲು ಮಾಡಲಾಗಿದೆ. 114 ವಾಹನಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ’ ಎಂದು ಮೂಲಗಳು ಹೇಳಿವೆ.ವಿಶೇಷ ಕಾರ್ಯಾಚರಣೆ ವೇಳೆ, ನಿಯಮ ಉಲ್ಲಂಘಿಸಿದವರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ. 292 ಲಘು ಪ್ರಕರಣಗಳು, ಕೊಟ್ಪಾ ಕಾಯ್ದೆ ಅಡಿ 355, ಅಬಕಾರಿ ಕಾಯ್ದೆ ಉಲ್ಲಂಘಿಸಿದವರ ವಿರುದ್ಧ ಮೂರು ಹಾಗೂ ಕರ್ನಾಟಕ ಪೊಲೀಸ್ ಕಾಯ್ದೆಯಡಿ ಒಂದು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ಹೇಳಿದರು.‘ಸಾರ್ವಜನಿಕರ ಸುರಕ್ಷತೆ, ಮಹಿಳೆಯರ ಭದ್ರತೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವುದು ಪೊಲೀಸ್ ಇಲಾಖೆಯ ಪ್ರಮುಖ ಆದ್ಯತೆ. ಪಬ್, ಬಾರ್, ಕ್ಲಬ್, ಹೋಟೆಲ್ ಹಾಗೂ ಇತರೆ ಮನರಂಜನಾ ಕೇಂದ್ರಗಳ ಮಾಲೀಕರು, ವ್ಯವಸ್ಥಾಪಕರು ನಿಯಮಗಳನ್ನು ಪಾಲಿಸಬೇಕು. ನಿಗದಿತ ಸಮಯದ ಒಳಗಾಗಿ ಬಾಗಿಲು ಬಂದ್ ಮಾಡಬೇಕೆಂದು ಸೂಚಿಸಲಾಗಿದೆ’ ಎಂದು ಅಧಿಕಾರಿಯೊಬ್ಬರು ಹೇಳಿದರು.ಮನರಂಜನಾ ಸ್ಥಳಗಳ ಮೇಲೆ ದಾಳಿ ನಡೆಸಿ ಪರಿಶೀಲಿಸಿದ ಪೊಲೀಸರು ಸೀಮಾಂತ್ ಕುಮಾರ್ ಸಿಂಗ್ ಸಾಮಾಜಿಕ ಜಾಲತಾಣಗಳ ಮೇಲೂ ನಿಗಾಎಲ್ಲಾ ಪಬ್ ಹಾಗೂ ರೆಸ್ಟೊರೆಂಟ್ಗಳು ನಿಗದಿತ ಸಮಯ ಅಂದರೆ ತಡರಾತ್ರಿ 1 ಗಂಟೆಯ ಒಳಗಾಗಿ ಬಾಗಿಲು ಮುಚ್ಚಬೇಕು. ನಿಯಮ ಉಲ್ಲಂಘಿಸಿದರೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು ಎಂದು ಸೀಮಾಂತ್ ಕುಮಾರ್ ಸಿಂಗ್ ಎಚ್ಚರಿಕೆ ನೀಡಿದರು. ‘ಪಬ್ಗಳಲ್ಲಿ ಬಾಲಕರಿಗೆ ಪ್ರವೇಶ ನೀಡುತ್ತಿರುವ ಮತ್ತು ಕೆಲವೆಡೆ ಬಾಲಕರು ಕೆಲಸ ಮಾಡುತ್ತಿರುವ ಕುರಿತು ದೂರುಗಳು ಬಂದಿವೆ. ತೀವ್ರ ವಿಚಾರಣೆ ನಡೆಸಲಾಗಿದೆ. ಗೃಹ ಸಚಿವರ ಸೂಚನೆಯಂತೆ ಸ್ಥಾಪಿಸಲಾಗಿರುವ ರೌಡಿ ನಿಗ್ರಹ ದಳ ಸಕ್ರಿಯವಾಗಿದ್ದು ಸಾಮಾಜಿಕ ಜಾಲತಾಣಗಳ ಮೇಲೂ ನಿಗಾ ಇಡಲಾಗಿದೆ’ ಎಂದು ಹೇಳಿದರು. ‘ಜನಸಾಮಾನ್ಯರಿಗೆ ಯಾವುದೇ ರೀತಿಯ ತೊಂದರೆ ಆಗಬಾರದು. ಕಾನೂನು ಚೌಕಟ್ಟಿನಲ್ಲಿ ಎಲ್ಲವೂ ಇದ್ದರೆ ನಮ್ಮ ಅಭ್ಯಂತರ ಇಲ್ಲ. ಆದರೆ. ನಿಯಮ ಮೀರಿ ಅಕ್ರಮ ಎಸಗುವವರಿಗೆ ತಕ್ಕ ಶಿಕ್ಷೆ ಕಟ್ಟಿಟ್ಟಬುತ್ತಿ’ ಎಂದು ಕಮಿಷನರ್ ಎಚ್ಚರಿಕೆ ನೀಡಿದರು.