ಮಧು ಬಂಗಾರಪ್ಪ ರಾಷ್ಟ್ರಪತಿಗಳ ಬಳಿ ಕ್ಷಮೆ ಕೇಳಬೇಕು: ಜೆಡಿಎಸ್ ಆಗ್ರಹ
ಬೆಂಗಳೂರು: ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರ ಬಗ್ಗೆ ಅಗೌರವದ ಮಾತಾಡಿರುವ ಸಚಿವ ಮಧು ಬಂಗಾರಪ್ಪ (Madhu Bangarappa) ಕೂಡಲೇ ರಾಷ್ಟ್ರಪತಿಗಳ ಕ್ಷಮೆ ಕೇಳಬೇಕು ಅಂತ ಜೆಡಿಎಸ್ ಆಗ್ರಹಿಸಿದೆ. ಈ ಸಂಬಂಧ ಎಕ್ಸ್ನಲ್ಲಿ ಸಚಿವ ಮಧು ಬಂಗಾರಪ್ಪ ಹೇಳಿಕೆಯನ್ನ ಜೆಡಿಎಸ್ ಖಂಡಿಸಿದೆ. ಇದನ್ನೂ ಓದಿ: CJP ನಾಯಕನಿಗೆ ಆಘಾತ – ಅಭಿಜಿತ್ ದೀಪ್ಕೆ ವಶಕ್ಕೆ ಪಡೆದ

ಬೆಂಗಳೂರು: ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರ ಬಗ್ಗೆ ಅಗೌರವದ ಮಾತಾಡಿರುವ ಸಚಿವ ಮಧು ಬಂಗಾರಪ್ಪ (Madhu Bangarappa) ಕೂಡಲೇ ರಾಷ್ಟ್ರಪತಿಗಳ ಕ್ಷಮೆ ಕೇಳಬೇಕು ಅಂತ ಜೆಡಿಎಸ್ ಆಗ್ರಹಿಸಿದೆ. ಈ ಸಂಬಂಧ ಎಕ್ಸ್ನಲ್ಲಿ ಸಚಿವ ಮಧು ಬಂಗಾರಪ್ಪ ಹೇಳಿಕೆಯನ್ನ ಜೆಡಿಎಸ್ ಖಂಡಿಸಿದೆ. ಇದನ್ನೂ ಓದಿ: CJP ನಾಯಕನಿಗೆ ಆಘಾತ – ಅಭಿಜಿತ್ ದೀಪ್ಕೆ ವಶಕ್ಕೆ ಪಡೆದ ಕೆಲವೇ ಗಂಟೆಗಳಲ್ಲಿ ಅಜ್ಜಿ ನಿಧನ ಎಕ್ಸ್ನಲ್ಲಿ ಏನಿದೆ? ದೇಶದ ಅತ್ಯುನ್ನತ ಸಾಂವಿಧಾನಿಕ ಹುದ್ದೆಯಲ್ಲಿರುವ ಗೌರವಾನ್ವಿತ ರಾಷ್ಟ್ರಪತಿಗಳ ಕುರಿತು ಶಿಕ್ಷಣ ಸಚಿವ ಮಧು ಬಂಗಾರಪ್ಪ ನೀಡಿರುವ ಅಗೌರವದ ಹೇಳಿಕೆ ತೀವ್ರ ಖಂಡನೀಯ. ಬುಡಕಟ್ಟು ಸಮುದಾಯದಿಂದ ಬಂದು ದೇಶದ ಪ್ರಥಮ ಪ್ರಜೆಯಾಗಿರುವ ಮಹಿಳಾ ರಾಷ್ಟ್ರಪತಿಗಳಿಗೆ `ಮೌನ ರಾಷ್ಟ್ರಪತಿ’ ಎಂದು ಅಪಮಾನಿಸಿರುವುದು ಕಾಂಗ್ರೆಸ್ ಪಕ್ಷದ ಸಂವಿಧಾನ ವಿರೋಧಿ ಹಾಗೂ ಅಹಂಕಾರದ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ಕಿಡಿಕಾರಿದೆ. ನಕಲಿ ಗಾಂಧಿ ಕುಟುಂಬದ ಗುಲಾಮಗಿರಿಯಲ್ಲಿ ತೊಡಗಿರುವ ಇಂತಹ ಕಾಂಗ್ರೆಸ್ ನಾಯಕರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ. ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಗಾಳಿಗೆ ತೂರಿ ಅಪಮಾನಿಸಿರುವ ಸಚಿವ ಮಧು ಬಂಗಾರಪ್ಪ ಅವರು ತಕ್ಷಣವೇ ರಾಷ್ಟ್ರಪತಿಗಳ ಕ್ಷಮೆಯಾಚಿಸಬೇಕು ಅಂತ ಆಗ್ರಹಿಸಿದೆ. ಇದನ್ನೂ ಓದಿ: ಮೈಸೂರು ದಸರಾ 2026ಕ್ಕೆ ನಾಳೆ ಅಧಿಕೃತ ಚಾಲನೆ – ಚಾಮುಂಡಿ ಬೆಟ್ಟದಲ್ಲಿ ಭರದ ಸಿದ್ಧತೆ