ಮನೆಮುಂದೆ ಆಟವಾಡುತ್ತಿದ್ದ ಬಾಲಕನ ಮೇಲೆ ಸಾಕು ನಾಯಿ ದಾಳಿ – ಗಂಭೀರ ಗಾಯ
ಬೆಂಗಳೂರು: ಮನೆಮುಂದೆ ಆಟವಾಡುತ್ತಿದ್ದ ಬಾಲಕನ ಮೇಲೆ ಸಾಕು ನಾಯಿ (Pet Dog) ದಾಳಿ ನಡೆಸಿದ ಪರಿಣಾಮ ಬಾಲಕ ಗಂಭೀರ ಗಾಯಗೊಂಡಿರುವ ಘಟನೆ ನೆಲಮಂಗಲ (Nelamangala) ತಾಲೂಕಿನ ದಾಬಸ್ ಪೇಟೆಯ ನಿಡುವಂದದಲ್ಲಿ ನಡೆದಿದೆ. ಅಕ್ಷಯ್ (14) ನಾಯಿಯಿಂದ ದಾಳಿಗೊಳಗಾದ ಬಾಲಕ. ಶುಕ್ರವಾರ ಸಂಜೆ 6 ಗಂಟೆ ಸುಮಾರಿಗೆ ಘಟನೆ ನಡೆದಿದೆ. ಅದೇ ಏರಿಯಾದ ನಿವಾಸಿಯೊಬ್ಬರ ಸಾಕು ನಾಯಿ ಬಾಲಕನ ಮೇಲ

ಬೆಂಗಳೂರು: ಮನೆಮುಂದೆ ಆಟವಾಡುತ್ತಿದ್ದ ಬಾಲಕನ ಮೇಲೆ ಸಾಕು ನಾಯಿ (Pet Dog) ದಾಳಿ ನಡೆಸಿದ ಪರಿಣಾಮ ಬಾಲಕ ಗಂಭೀರ ಗಾಯಗೊಂಡಿರುವ ಘಟನೆ ನೆಲಮಂಗಲ (Nelamangala) ತಾಲೂಕಿನ ದಾಬಸ್ ಪೇಟೆಯ ನಿಡುವಂದದಲ್ಲಿ ನಡೆದಿದೆ. ಅಕ್ಷಯ್ (14) ನಾಯಿಯಿಂದ ದಾಳಿಗೊಳಗಾದ ಬಾಲಕ. ಶುಕ್ರವಾರ ಸಂಜೆ 6 ಗಂಟೆ ಸುಮಾರಿಗೆ ಘಟನೆ ನಡೆದಿದೆ. ಅದೇ ಏರಿಯಾದ ನಿವಾಸಿಯೊಬ್ಬರ ಸಾಕು ನಾಯಿ ಬಾಲಕನ ಮೇಲೆ ದಾಳಿ ಮಾಡಿದ್ದು, ಕೈ, ಕಾಲು ಹಾಗೂ ಎದೆಗೆ ಗಂಭೀರ ಗಾಯಗಳಾಗಿವೆ. ಇದನ್ನೂ ಓದಿ: ದೆಹಲಿ ಪೊಲೀಸರ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಕೆ ಬಾಲಕ ಗಂಭೀರ ಗಾಯಕ್ಕೊಳಗಾದ ಹಿನ್ನೆಲೆ ಪೋಷಕರಲ್ಲಿ ಆತಂಕ ಮನೆಮಾಡಿದೆ. ಸದ್ಯ ಬಾಲಕನಿಗೆ ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಬಳಿಕ ಕುಟುಂಬಸ್ಥರು ದಾಬಸ್ ಪೇಟೆ ಠಾಣೆಗೆ ತೆರಳಿ ದೂರು ನೀಡಲಿದ್ದಾರೆ. ಇದನ್ನೂ ಓದಿ: 283 ಔಷಧಿಗಳ ದರ ಇಳಿಕೆಗೆ ಕೇಂದ್ರ ಸರ್ಕಾರ ಮುಂದಾಗಿದೆ: ಯು.ಟಿ ಖಾದರ್
Read the complete story at Public TV Kannada