ಹಾವೇರಿ| ಗ್ರಾ.ಪಂ ಕಾರ್ಯದರ್ಶಿ ಪ್ಯಾಂಟ್ ಬಿಚ್ಚಿಸಿ ಆಣೆವಾರಿ; ಗ್ರಾಮಸ್ಥರ ಆಕ್ರೋಶ
ಹಾವೇರಿ: ರಾಣೆಬೆನ್ನೂರು ತಾಲ್ಲೂಕಿನ ಚಳಗೇರಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಫಕ್ಕೀರಪ್ಪ ಅವರ ಪ್ಯಾಂಟ್ ಬಿಚ್ಚಿಸಿ ನೀರಿಗಿಳಿಸಿ ಆಣೆವಾರಿ (ಬೆಳೆ ವಿಮೆಯ ಕ್ರಾಪ್ ಕಟಿಂಗ್ ಎಕ್ಸ್ಪೆರಿಮೆಂಟ್) ಮಾಡಿಸಿ ಅವಮಾನ ಮಾಡಿರುವ ಆರೋಪ ವ್ಯಕ್ತವಾಗಿದೆ. ಘಟನೆಗೆ ಕಾರಣರಾದ ವಿಮೆ ಕಂಪನಿಯ ಪ್ರತಿನಿಧಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರಹಾಕುತ್ತಿದ್ದಾರೆ.ಕಾರ್ಯದರ್ಶಿಗೆ ಅವಮಾನ ಮಾ

ಹಾವೇರಿ: ರಾಣೆಬೆನ್ನೂರು ತಾಲ್ಲೂಕಿನ ಚಳಗೇರಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಫಕ್ಕೀರಪ್ಪ ಅವರ ಪ್ಯಾಂಟ್ ಬಿಚ್ಚಿಸಿ ನೀರಿಗಿಳಿಸಿ ಆಣೆವಾರಿ (ಬೆಳೆ ವಿಮೆಯ ಕ್ರಾಪ್ ಕಟಿಂಗ್ ಎಕ್ಸ್ಪೆರಿಮೆಂಟ್) ಮಾಡಿಸಿ ಅವಮಾನ ಮಾಡಿರುವ ಆರೋಪ ವ್ಯಕ್ತವಾಗಿದೆ. ಘಟನೆಗೆ ಕಾರಣರಾದ ವಿಮೆ ಕಂಪನಿಯ ಪ್ರತಿನಿಧಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರಹಾಕುತ್ತಿದ್ದಾರೆ.ಕಾರ್ಯದರ್ಶಿಗೆ ಅವಮಾನ ಮಾಡಿರುವ ವಿಮೆ ಕಂಪನಿ ಸಿಬ್ಬಂದಿ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ. ಶುಕ್ರವಾರ ಗ್ರಾಮದಲ್ಲಿ ಸಂಧಾನ ಸಭೆ ನಡೆಸಿದ ತಹಶೀಲ್ದಾರ್, ಜಿಲ್ಲಾಧಿಕಾರಿಗೆ ವರದಿ ನೀಡುವುದಾಗಿ ಹೇಳಿದರು.ಚಳಗೇರಿ ರೈತರು, ಬೆಳೆ ವಿಮೆಗೆ ನೋಂದಣಿ ಮಾಡಿಸಿದ್ದಾರೆ. ಪ್ರಾಥಮಿಕ ಹಂತದ ಅಧಿಕಾರಿಗಳು (ಗ್ರಾ.ಪಂ. ಕಾರ್ಯದರ್ಶಿ ಹಾಗೂ ಇತರರು) ಬೆಳೆ ಹಾನಿಯ ಬಗ್ಗೆ ಜಿಲ್ಲಾಡಳಿತಕ್ಕೆ ವರದಿ ನೀಡಿದ್ದಾರೆ. ಇತ್ತೀಚೆಗೆ ಸುರಿದ ಮಳೆಯಿಂದಾಗಿ ಚಳಗೇರಿಯ ಹಲವು ಜಮೀನಿನಲ್ಲಿ ನೀರು ನಿಂತುಕೊಂಡಿದೆ. ಆಣೆವಾರಿಗಾಗಿ ಗ್ರಾಮಕ್ಕೆ ಬಂದಿದ್ದ ವಿಮೆ ಕಂಪನಿ ಪ್ರತಿನಿಧಿ, ಕಾರ್ಯದರ್ಶಿಯವರ ಪ್ಯಾಂಟ್ ಬಿಚ್ಚಿಸಿ ಸೊಂಟದಷ್ಟಿದ್ದ ನೀರಿಗೆ ಇಳಿಸಿ ಜಮೀನು ಅಳತೆ ಮಾಡಿಸಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಕಾರ್ಯದರ್ಶಿ ಫಕ್ಕೀರಪ್ಪ, ‘ವಿಮೆ ಕಂಪನಿ ಪ್ರತಿನಿಧಿ, ನೀರಿನಲ್ಲಿಯೇ ಇಳಿದು ಅಳತೆ ಮಾಡಿ ತೋರಿಸುವಂತೆ ಹೇಳಿದರು. ರೈತರಿಗಾಗಿ ಅನಿವಾರ್ಯವಾಗಿ ಪ್ಯಾಂಟ್ ಬಿಚ್ಚಿ ನೀರಿಗಿಳಿದೆ. ನನಗಾದ ಅವಮಾನವನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದೇನೆ. ಅವರೇ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ’ ಎಂದರು.ಪಿಡಿಒ ಶಹನಾಬಿ ಕಲಕೋಟೆ, ‘ವಿಮಾ ಸಿಬ್ಬಂದಿ ನಡೆಸಿಕೊಂಡ ರೀತಿಯ ಬಗ್ಗೆ ಕಾರ್ಯದರ್ಶಿ ಫಕ್ಕೀರಪ್ಪ ಯತ್ನಳ್ಳಿ ಅವರು ತಹಶೀಲ್ದಾರ ಹಾಗೂ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ನಾವು ಕೂಡ ಮೌಖಿಕವಾಗಿ ದೂರು ನೀಡಿ ಕ್ರಮಕ್ಕೆ ಆಗ್ರಹಿಸಿದ್ದೇವೆ. ಜಿಲ್ಲಾಧಿಕಾರಿಗೆ ವರದಿ ನೀಡುವುದಾಗಿಯೂ ತಹಶೀಲ್ದಾರ್ ಭರವಸೆ ನೀಡಿದ್ದಾರೆ’ ಎಂದರು.