ಸಿಜೆಪಿ ಪ್ರತಿಭಟನೆಯ ನೇತೃತ್ವ ವಹಿಸಿದ ಅಜಿಂಕ್ಯ ಶಿಂಧೆ ಯಾರು?
ನವದೆಹಲಿ: ಕಾಕ್ರೋಚ್ ಜನತಾ ಪಾರ್ಟಿ ಸಂಸ್ಥಾಪಕ ಅಭಿಜಿತ್ ದೀಪ್ಕೆ (Abhijeet Dipke) ಸೇರಿದಂತೆ ಪಕ್ಷದ ಪ್ರಮುಖ ನಾಯಕರು ಪೊಲೀಸ್ ವಶದಲ್ಲಿರುವ ಹಿನ್ನೆಲೆಯಲ್ಲಿ, ಇದೀಗ ಪ್ರತಿಭಟನೆಯ ನೇತೃತ್ವದ ಜವಾಬ್ದಾರಿ ಅಜಿಂಕ್ಯ ಶಿಂಧೆ (Ajinkya Shinde) ಅವರ ಹೆಗಲೇರಿದೆ. ಚುನಾವಣಾ ಅಕ್ರಮಗಳ ಆರೋಪದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯನ್ನು ಇತರ ನಾಯಕರು ಬಿಡುಗಡೆಯಾಗುವವರೆಗೆ

ನವದೆಹಲಿ: ಕಾಕ್ರೋಚ್ ಜನತಾ ಪಾರ್ಟಿ ಸಂಸ್ಥಾಪಕ ಅಭಿಜಿತ್ ದೀಪ್ಕೆ (Abhijeet Dipke) ಸೇರಿದಂತೆ ಪಕ್ಷದ ಪ್ರಮುಖ ನಾಯಕರು ಪೊಲೀಸ್ ವಶದಲ್ಲಿರುವ ಹಿನ್ನೆಲೆಯಲ್ಲಿ, ಇದೀಗ ಪ್ರತಿಭಟನೆಯ ನೇತೃತ್ವದ ಜವಾಬ್ದಾರಿ ಅಜಿಂಕ್ಯ ಶಿಂಧೆ (Ajinkya Shinde) ಅವರ ಹೆಗಲೇರಿದೆ. ಚುನಾವಣಾ ಅಕ್ರಮಗಳ ಆರೋಪದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯನ್ನು ಇತರ ನಾಯಕರು ಬಿಡುಗಡೆಯಾಗುವವರೆಗೆ ಮುನ್ನಡೆಸುವಂತೆ ಅವರಿಗೆ ಸೂಚಿಸಲಾಗಿದೆ. ಮುಂಬೈನಿಂದ ಬಂದ ವಿಮಾನದಲ್ಲಿದ್ದ ಅಭಿಜಿತ್ ದೀಪ್ಕೆ, ಸೌರವ್ ದಾಸ್ ಮತ್ತು ಅಶುತೋಷ್ ರಂಕಾ ಅವರನ್ನು ಶನಿವಾರ ಬೆಳಗ್ಗೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರತಿಭಟನಾಕಾರರು ದೆಹಲಿಯ ಜಂತರ್ಮಂತರ್ ತಲುಪುವುದನ್ನು ತಡೆಯುವ ಪ್ರಯತ್ನಗಳ ನಡುವೆಯೇ ಈ ಬೆಳವಣಿಗೆ ನಡೆದಿದೆ. ಇದಕ್ಕೂ ಮುನ್ನವೇ ತಮ್ಮನ್ನು ಬಂಧಿಸುವ ಸಾಧ್ಯತೆಯನ್ನು ನಿರೀಕ್ಷಿಸಿದ್ದ ಅಭಿಜಿತ್, ಮುನ್ನೆಚ್ಚರಿಕೆಯಾಗಿ ಶುಕ್ರವಾರ ರಾತ್ರಿಯೇ ವೀಡಿಯೋವನ್ನು ಮೊದಲೇ ರೆಕಾರ್ಡ್ ಮಾಡಿಕೊಂಡಿದ್ದರು. ವೀಡಿಯೋದಲ್ಲಿ ಅಜಿಂಕ್ಯ ಶಿಂಧೆ ಪ್ರತಿಭಟನೆಯ ನೇತೃತ್ವ ವಹಿಸಿಕೊಳ್ಳಲಿದ್ದಾರೆ ಎಂದು ದೀಪ್ಕೆ ತಿಳಿಸಿದ್ದಾರೆ. ಇದನ್ನೂ ಓದಿ: CJP ನಾಯಕನಿಗೆ ಆಘಾತ – ಅಭಿಜಿತ್ ದೀಪ್ಕೆ ವಶಕ್ಕೆ ಪಡೆದ ಕೆಲವೇ ಗಂಟೆಗಳಲ್ಲಿ ಅಜ್ಜಿ ನಿಧನ ಜಂತರ್ಮಂತರ್ನಲ್ಲಿ ಪ್ರತಿಭಟನೆಗೆ ಕರೆ: ಇತ್ತ, ಪ್ರತಿಭಟನಾಕಾರರು ಜಂತರ್ಮಂತರ್ ತಲುಪಲು ಪ್ರಯತ್ನ ಮುಂದುವರಿಸಬೇಕು ಎಂದು ಅಜಿಂಕ್ಯ ಶಿಂಧೆ ಕರೆ ನೀಡಿದ್ದಾರೆ. ಪೊಲೀಸರು ಎಲ್ಲಿಯಾದರೂ ಪ್ರತಿಭಟನಾಕಾರರನ್ನು ತಡೆದರೆ, ಅದೇ ಸ್ಥಳದಲ್ಲಿ ಪ್ರತಿಭಟನೆ ನಡೆಸುವಂತೆ ಮನವಿ ಮಾಡಿದ್ದಾರೆ. ನಮ್ಮ ಒಗ್ಗಟ್ಟನ್ನು ಕಂಡು ಸರ್ಕಾರ ಹೆದರಿದೆ. ದಯವಿಟ್ಟು ಜಂತರ್ಮಂತರ್ಗೆ ಬನ್ನಿ. ಪೊಲೀಸರು ನಿಮ್ಮನ್ನು ತಡೆದರೆ, ಆ ಸ್ಥಳವನ್ನೇ ಜಂತರ್ಮಂತರ್ ಆಗಿ ಪರಿವರ್ತಿಸಿ ಎಂದು ಶಿಂಧೆ ಹೇಳಿರುವುದಾಗಿ ವರದಿಯಾಗಿದೆ. ಇದನ್ನೂ ಓದಿ: ಮೈಸೂರು ದಸರಾ 2026ಕ್ಕೆ ನಾಳೆ ಅಧಿಕೃತ ಚಾಲನೆ – ಚಾಮುಂಡಿ ಬೆಟ್ಟದಲ್ಲಿ ಭರದ ಸಿದ್ಧತೆ ಅಜಿಂಕ್ಯ ಶಿಂಧೆ ಯಾರು? ಅಜಿಂಕ್ಯ ಶಿಂಧೆ ಅವರಿಗೆ 35 ವರ್ಷ ವಯಸ್ಸು. ಮಹಾರಾಷ್ಟ್ರದವರಾದ ಅವರು ಕಂಪ್ಯೂಟರ್ ಸೈನ್ಸ್ನಲ್ಲಿ ಪದವಿ ಪಡೆದಿದ್ದಾರೆ. ಪುಣೆಯ ಅಂತರರಾಷ್ಟ್ರೀಯ ಐಟಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡಿದ್ದ ಅವರು, ಬಳಿಕ ಆಮ್ ಆದ್ಮಿ ಪಾರ್ಟಿ ಸೇರಿ ಪೂರ್ಣಾವಧಿ ಕಾರ್ಯಕರ್ತರಾಗಿ ರಾಜಕೀಯ ಕ್ಷೇತ್ರದಲ್ಲಿ ತೊಡಗಿಸಿಕೊಂಡರು. ಇದನ್ನೂ ಓದಿ: ದೇಶ ವಿರೋಧಿ ಶಕ್ತಿಗಳು ಸಿಜೆಪಿ ಜೊತೆಗೆ ದೆಹಲಿಯಲ್ಲಿ ಹೋರಾಟ ಮಾಡ್ತಿವೆ: ಛಲವಾದಿ ನಾರಾಯಣಸ್ವಾಮಿ ಅವರ ಪೋಷಕರು ಅಲಿಬಾಗ್ನಲ್ಲಿ ಕೃಷಿ ಮಾಡುತ್ತಿದ್ದರು. ಬಳಿಕ ಲಾತೂರ್ಗೆ ಸ್ಥಳಾಂತರಗೊಂಡಿದ್ದರು. ಅಭಿಜಿತ್ ದೀಪ್ಕೆ ಅವರ ಆಪ್ತ ಸಹವರ್ತಿಯಾಗಿರುವ ಅಜಿಂಕ್ಯ ಶಿಂಧೆ, ಹಲವು ವರ್ಷಗಳಿಂದ ಅವರೊಂದಿಗೆ ಕೆಲಸ ಮಾಡುತ್ತಿದ್ದಾರೆ. ಇವರಿಬ್ಬರು ಮೊದಲ ಬಾರಿಗೆ 2016ರಲ್ಲಿ ಗೋವಾದಲ್ಲಿ ಭೇಟಿಯಾಗಿದ್ದರು ಎನ್ನಲಾಗಿದೆ. ಆ ಬಳಿಕ ಇಬ್ಬರೂ ಒಟ್ಟಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದನ್ನೂ ಓದಿ: ಯಾರು, ಯಾರ ವಿರುದ್ಧ ಸ್ಟಿಂಗ್ ಮಾಡುತ್ತಾರೆ ಪಟ್ಟಿ ಬಿಡುಗಡೆ ಮಾಡಿ: ಗೋವಿಂದ ಕಾರಜೋಳ ಎಎಪಿಯಲ್ಲಿ ಪ್ರಮುಖ ಜವಾಬ್ದಾರಿ ನಿರ್ವಹಿಸಿದ್ದ ಶಿಂಧೆ: ಸಿಜೆಪಿಗೆ ಸೇರುವ ಮೊದಲು ಅಜಿಂಕ್ಯ ಶಿಂಧೆ ಅವರು ಆಮ್ ಆದ್ಮಿ ಪಾರ್ಟಿಯ ಪಿಂಪ್ರಿ-ಚಿಂಚ್ವಾಡ್ ಘಟಕದ ಸಂಚಾಲಕರಾಗಿ ಕಾರ್ಯನಿರ್ವಹಿಸಿದ್ದರು. ಬಳಿಕ ಉದ್ಯೋಗಕ್ಕೆ ರಾಜೀನಾಮೆ ನೀಡಿ, ಗೋವಾ ವಿಧಾನಸಭಾ ಚುನಾವಣೆಯ ಪಕ್ಷದ ಕಾರ್ಯಗಳಲ್ಲಿ ಒಂದು ವರ್ಷ ತೊಡಗಿಸಿಕೊಂಡಿದ್ದರು. ಆದರೆ ಅಲ್ಲಿ ಎಎಪಿಗೆ ಸ್ಥಾನ ಗೆಲ್ಲಿಸಿಕೊಡುವಲ್ಲಿ ಯಶಸ್ವಿಯಾಗಲಿಲ್ಲ. ನಂತರ ಮಹಾರಾಷ್ಟ್ರದ ಎಎಪಿ ತಂಡಕ್ಕೆ ಸೇರ್ಪಡೆಯಾದ ಅವರು, ಸಾಮಾಜಿಕ ಜಾಲತಾಣಗಳ ಸಂಯೋಜಕರಾಗಿ ಹಾಗೂ ಪಕ್ಷದ ಮಹಾರಾಷ್ಟ್ರ ಯುವ ಘಟಕದ ಸಂಚಾಲಕರಾಗಿ ಜವಾಬ್ದಾರಿ ನಿರ್ವಹಿಸಿದ್ದರು. ಇದನ್ನೂ ಓದಿ: ಅಭಿಜಿತ್ ದೀಪ್ಕೆ ಪೊಲೀಸ್ ವಶಕ್ಕೆ – ಜಂತರ್ ಮಂತರ್ನಲ್ಲಿ ಪ್ರತಿಭಟನೆಗೆ ಅಜಿಂಕ್ಯ ಶಿಂಧೆ ಸಾರಥ್ಯ ಸಿಜೆಪಿಯಲ್ಲಿ ರಾಷ್ಟ್ರೀಯ ಸಂಘಟನಾ ಉಸ್ತುವಾರಿ: ಕಳೆದ ಆಗಸ್ಟ್ನಲ್ಲಿ ಅಭಿಜಿತ್ ದೀಪ್ಕೆ ಅವರು ಅಜಿಂಕ್ಯ ಶಿಂಧೆ ಅವರನ್ನು ಸಿಜೆಪಿಯ ರಾಷ್ಟ್ರೀಯ ತಂಡಕ್ಕೆ ಸೇರಿಸಿಕೊಂಡು, ರಾಷ್ಟ್ರೀಯ ಸಂಘಟನಾ ಉಸ್ತುವಾರಿ ಜವಾಬ್ದಾರಿ ನೀಡಿದ್ದರು. ಆದರೆ, ಸಿಜೆಪಿಯ ರಾಷ್ಟ್ರೀಯ ಕಾರ್ಯಕಾರಿ ಸಮಿತಿಗೆ ಅವರ ಸೇರ್ಪಡೆಯ ಸಂದರ್ಭದಲ್ಲಿ ವಿವಾದವೂ ಉಂಟಾಗಿತ್ತು. ಪಕ್ಷದಲ್ಲಿ ತಮ್ಮ ಆಪ್ತರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ಗುಜರಾತ್ನ ಇಬ್ಬರು ಸ್ವಯಂಸೇವಕರು ಅಭಿಜಿತ್ ದೀಪ್ಕೆ ವಿರುದ್ಧ ಆರೋಪ ಮಾಡಿದ್ದರು. ಇದನ್ನೂ ಓದಿ: ಈ ಸರ್ಕಾರ ಬೀಳುತ್ತೆ, ಪ್ರಜಾಪ್ರಭುತ್ವ ಮರುಸ್ಥಾಪನೆಯಾಗಲಿದೆ: CJP ಪ್ರತಿಭಟನೆ ಬೆನ್ನಲ್ಲೇ ರಾಹುಲ್ ಗಾಂಧಿ ಪ್ರತಿಕ್ರಿಯೆ ಪಕ್ಷದ ನಾಯಕತ್ವದಲ್ಲಿ ಅಭಿಜಿತ್ ದೀಪ್ಕೆ, ಅಶುತೋಷ್ ರಂಕಾ ಮತ್ತು ಸೌರವ್ ದಾಸ್ ಅವರ ನಂತರದ ಸ್ಥಾನದಲ್ಲಿ ಅಜಿಂಕ್ಯ ಶಿಂಧೆ ಗುರುತಿಸಿಕೊಂಡಿದ್ದಾರೆ. ಈ ಮೂವರು ನಾಯಕರು ಈ ವರ್ಷದ ಜುಲೈನಲ್ಲಿ ನಡೆದ ಪೇಪರ್ ಲೀಕ್ ವಿರೋಧಿ ಪ್ರತಿಭಟನೆಗಳ ಸಂದರ್ಭದಲ್ಲಿ ಪಕ್ಷದ ಪ್ರಮುಖ ಮುಖಗಳಾಗಿ ಕಾಣಿಸಿಕೊಂಡಿದ್ದರು. ಇದನ್ನೂ ಓದಿ: ದೆಹಲಿ ಕನ್ನಾಟ್ ಪ್ಲೇಸ್ನಲ್ಲಿ ಪೊಲೀಸರ ಮೇಲೆ ಕಲ್ಲು ತೂರಾಟ – ಇಬ್ಬರಿಗೆ ಗಾಯ, 50 ಪ್ರತಿಭಟನಾಕಾರರು ವಶಕ್ಕೆ ಇದೀಗ ಪಕ್ಷದ ಪ್ರಮುಖ ಮೂವರು ನಾಯಕರು ಪೊಲೀಸ್ ವಶದಲ್ಲಿರುವ ಹಿನ್ನೆಲೆಯಲ್ಲಿ ಪ್ರತಿಭಟನೆಯ ನೇತೃತ್ವವನ್ನು ಅಜಿಂಕ್ಯ ಶಿಂಧೆ ಅವರಿಗೆ ವಹಿಸಲಾಗಿದೆ. ಇತರ ನಾಯಕರು ಬಿಡುಗಡೆಯಾಗುವವರೆಗೆ ಸಿಜೆಪಿಯ ಪ್ರತಿಭಟನೆ ಮತ್ತು ಚಳವಳಿಯನ್ನು ಮುನ್ನಡೆಸುವ ಜವಾಬ್ದಾರಿ ಅವರ ಮೇಲಿದೆ. ಇದನ್ನೂ ಓದಿ: ಕೇರಳದಲ್ಲಿ ಭಾರೀ ಗಾಳಿಗೆ ಹಾರಿಬಿದ್ದ ಶಾಲೆಯ ಮೇಲ್ಛಾವಣಿ – ಮೂರು ಕಾರುಗಳು ಜಖಂ