ಲಿಂಗನಮಕ್ಕಿ 2ನೇ ವಿದ್ಯುತ್ ಘಟಕ ಗುರುವಾರದಿಂದ ಪುನಃ ಕಾರ್ಯಾರಂಭ
ಕಾರ್ಗಲ್ (ಶಿವಮೊಗ್ಗ): 30 ತಿಂಗಳಿನಿಂದ ನಿಷ್ಕ್ರಿಯಗೊಂಡು ವಿದ್ಯುತ್ ಉತ್ಪಾದನೆ ಸ್ಥಗಿತಗೊಳಿಸಿದ್ದ ಲಿಂಗನಮಕ್ಕಿ ಜಲ ವಿದ್ಯುದಾಗರದ ಎರಡನೇ ಘಟಕ ಗುರುವಾರದಿಂದ ಪುನಃ ಕಾರ್ಯಾರಂಭ ಮಾಡಿದೆ.ಸಿ.ಕೆ. ಎಂಜಿನಿಯರ್ಸ್ ತಂಡದ ಸತತ ಪರಿಶ್ರಮದ ಫಲವಾಗಿ ಘಟಕವು ದುರಸ್ತಿಯಾಗಿದೆ. ಒಟ್ಟು 27.5 ಮೆಗಾವಾಟ್ ಉತ್ಪಾದನಾ ಸಾಮರ್ಥ್ಯದ ಈ ಘಟಕದಲ್ಲಿ 24 ಮೆಗಾವಾಟ್ ವಿದ್ಯುತ್ ಉತ್ಪಾದನೆ

ಕಾರ್ಗಲ್ (ಶಿವಮೊಗ್ಗ): 30 ತಿಂಗಳಿನಿಂದ ನಿಷ್ಕ್ರಿಯಗೊಂಡು ವಿದ್ಯುತ್ ಉತ್ಪಾದನೆ ಸ್ಥಗಿತಗೊಳಿಸಿದ್ದ ಲಿಂಗನಮಕ್ಕಿ ಜಲ ವಿದ್ಯುದಾಗರದ ಎರಡನೇ ಘಟಕ ಗುರುವಾರದಿಂದ ಪುನಃ ಕಾರ್ಯಾರಂಭ ಮಾಡಿದೆ.ಸಿ.ಕೆ. ಎಂಜಿನಿಯರ್ಸ್ ತಂಡದ ಸತತ ಪರಿಶ್ರಮದ ಫಲವಾಗಿ ಘಟಕವು ದುರಸ್ತಿಯಾಗಿದೆ. ಒಟ್ಟು 27.5 ಮೆಗಾವಾಟ್ ಉತ್ಪಾದನಾ ಸಾಮರ್ಥ್ಯದ ಈ ಘಟಕದಲ್ಲಿ 24 ಮೆಗಾವಾಟ್ ವಿದ್ಯುತ್ ಉತ್ಪಾದನೆ ಮಾಡಲಾಗಿದೆ.ಕೆಪಿಸಿ ಮುಖ್ಯ ಎಂಜಿನಿಯರ್ ಬಿ. ಆನಂದ್ ಕುಮಾರ್, ಸೂಪರಿಂಟೆಂಡೆಂಟ್ ಎಂಜಿನಿಯರ್ ರಂಗನಾಥ್, ಕಾರ್ಯನಿರ್ವಾಹಕ ಎಂಜಿನಿಯರ್ ಅಲ್ಲಮಪ್ರಭು ಮತ್ತಿತರರ ನೇತೃತ್ವದಲ್ಲಿ ಸ್ಥಳೀಯ ಯುವಕರ ಸಿ.ಕೆ. ಎಂಜಿನಿಯರ್ಸ್ ತಂಡವು ಘಟಕ ಯಶಸ್ವಿಯಾಗಿ ದುರಸ್ತಿ ಕಾರ್ಯ ಕೈಗೊಂಡಿದ್ದು, ಘಟಕವು ಕಾರ್ಯಾರಂಭಗೊಂಡಿದೆ ಎಂದು ಕೆಪಿಸಿ ಮೂಲಗಳು ತಿಳಿಸಿದೆ. ‘2ನೇ ಘಟಕವನ್ನು ಅತ್ಯಂತ ಯಶಸ್ವಿಯಾಗಿ ದುರಸ್ತಿಪಡಿಸಿ, ಮರು ಜೋಡಿಸಿದ ನಂತರವೂ ನಿಗಮದ ಎಂಜಿನಿಯರ್ಗಳ ಸಮ್ಮುಖದಲ್ಲಿ ಸತತ 3 ದಿನ ವಿವಿಧ ರೀತಿಯ ಪರೀಕ್ಷೆಗಳನ್ನು ನಡೆಸಲಾಯಿತು. ಯಾವುದೇ ರೀತಿಯ ತೊಂದರೆಗಳು ಎದುರಾಗದೇ ಈಗಿರುವ ಜಲ ಸಾಮರ್ಥ್ಯಕ್ಕೆ ಅನುಗುಣವಾಗಿ 24 ಮೆಗಾವಾಟ್ ವಿದ್ಯುತ್ ಉತ್ಪಾದನೆಯಲ್ಲಿ ತೊಡಗಿದೆ’ ಎಂದು ಸಿ.ಕೆ. ಎಂಜಿನಿಯರ್ಸ್ ಸಿ.ಇ.ಒ ಉಮೇಶ್ ಮಾಹಿತಿ ನೀಡಿದ್ದಾರೆ.ರಷ್ಯಾ ನಿರ್ಮಿತ ಈ ಜಲವಿದ್ಯುತ್ ಘಟಕ 1979-80ನೇ ಸಾಲಿನಲ್ಲಿ ಲೋಕಾರ್ಪಣೆಗೊಂಡಿತ್ತು. 45 ವರ್ಷ ಯಾವುದೇ ಅಡಚಣೆಯಿಲ್ಲದೇ ವಿದ್ಯುತ್ ಉತ್ಪಾದನೆಯಲ್ಲಿ ತೊಡಗಿದ್ದ ಈ ಘಟಕದ ರನ್ನರ್ ಬ್ಲೇಡ್ 2024ರ ವರ್ಷಾರಂಭದಲ್ಲಿ ಬಿರುಕುಗೊಂಡು ಸ್ಥಗಿತಗೊಂಡಿತ್ತು. ದುರಸ್ತಿ ಕಾರ್ಯಕ್ಕಾಗಿ ಕೆಪಿಸಿ ನಿಗಮ ಜಾಗತಿಕ ಟೆಂಡರ್ ಕರೆದಿತ್ತು.