ದೆಹಲಿಯಲ್ಲಿ ಸಿಜೆಪಿ ಪ್ರತಿಭಟನೆ ಸೇರಿದಂತೆ ಈ ದಿನದ ಟಾಪ್ 10 ಸುದ್ದಿಗಳು
ದೆಹಲಿಯಲ್ಲಿ ಸಿಜೆಪಿ ಪ್ರತಿಭಟನೆ ಸೇರಿದಂತೆ ರಾಜ್ಯ, ರಾಷ್ಟ್ರೀಯ, ಅಂತರರಾಷ್ಟ್ರೀಯ ವಿದ್ಯಮಾನಗಳಿಗೆ ಸಂಬಂಧಿಸಿದ ಈ ದಿನದ ಟಾಪ್ 10 ಸುದ್ದಿಗಳು ಇಲ್ಲಿವೆ...ಸಿಜೆಪಿ ಪ್ರತಿಭಟನೆ: ಮಮತಾ, ಸಿಪಿಎಂ ನಾಯಕರು, ಕೇಜ್ರಿವಾಲ್ ಸೇರಿ ಹಲವರು ವಶಕ್ಕೆಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಕರೆ ನೀಡಿದ್

ದೆಹಲಿಯಲ್ಲಿ ಸಿಜೆಪಿ ಪ್ರತಿಭಟನೆ ಸೇರಿದಂತೆ ರಾಜ್ಯ, ರಾಷ್ಟ್ರೀಯ, ಅಂತರರಾಷ್ಟ್ರೀಯ ವಿದ್ಯಮಾನಗಳಿಗೆ ಸಂಬಂಧಿಸಿದ ಈ ದಿನದ ಟಾಪ್ 10 ಸುದ್ದಿಗಳು ಇಲ್ಲಿವೆ...ಸಿಜೆಪಿ ಪ್ರತಿಭಟನೆ: ಮಮತಾ, ಸಿಪಿಎಂ ನಾಯಕರು, ಕೇಜ್ರಿವಾಲ್ ಸೇರಿ ಹಲವರು ವಶಕ್ಕೆಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಕರೆ ನೀಡಿದ್ದ ಪ್ರತಿಭಟನೆಗೂ ಮುನ್ನ ರಾಜಕೀಯ ನಾಯಕರು, ಕಾರ್ಯಕರ್ತರು, ವಕೀಲರು, ಪತ್ರಕರ್ತರು ಹಾಗೂ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಸಿಜೆಪಿ ಪ್ರತಿಭಟನೆ: ಮಮತಾ, ಸಿಪಿಎಂ ನಾಯಕರು, ಕೇಜ್ರಿವಾಲ್ ಸೇರಿ ಹಲವರು ವಶಕ್ಕೆಮೋದಿ, ಶಾ ವ್ಯಕ್ತಿತ್ವದ ಮೂಲ ಸ್ವಭಾವವೇ ಹೇಡಿತನ: ರಾಹುಲ್ ವಾಗ್ದಾಳಿ‘ಕಳೆದ ಒಂದು ದಶಕದಿಂದ ನರೇಂದ್ರ ಮೋದಿ ಮತ್ತು ಆರ್ಎಸ್ಎಸ್ನವರ ವಿರುದ್ಧ ನಾನು ಹೋರಾಡುತ್ತಿದ್ದು, ಅವರ ಮನಸ್ಥಿತಿ ಬಗ್ಗೆ ಚೆನ್ನಾಗಿ ಅರಿಯಬಲ್ಲೆ. ಅವರ ವ್ಯಕ್ತಿತ್ವದ ಮೂಲ ಸ್ವಭಾವವೇ ಹೇಡಿತನ’ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಮೋದಿ, ಶಾ ವ್ಯಕ್ತಿತ್ವದ ಮೂಲ ಸ್ವಭಾವವೇ ಹೇಡಿತನ: ರಾಹುಲ್ ವಾಗ್ದಾಳಿಅ.12ರಂದು ಮತದಾನದ ಹಕ್ಕಿನ ರಕ್ಷಣೆಗಾಗಿ ಇಂಡಿಯಾ ಮೈತ್ರಿಕೂಟದಿಂದ ಬೃಹತ್ ಪ್ರತಿಭಟನೆಮತದಾರರ ಹಕ್ಕುಗಳ ರಕ್ಷಣೆಗಾಗಿ ‘ಇಂಡಿಯಾ’ ಮೈತ್ರಿಕೂಟದಿಂದ ಸೋಮವಾರ (ಅ.12) ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಮಾಹಿತಿ ನೀಡಿದ್ದಾರೆ. ಅ.12ರಂದು ಮತದಾನದ ಹಕ್ಕಿನ ರಕ್ಷಣೆಗಾಗಿ ಇಂಡಿಯಾ ಮೈತ್ರಿಕೂಟದಿಂದ ಬೃಹತ್ ಪ್ರತಿಭಟನೆದೀಪ್ಕೆ ಗೈರಿನಲ್ಲಿ ಸಿಜೆಪಿ ಪ್ರತಿಭಟನೆ ನೇತೃತ್ವ ವಹಿಸಿರುವ ಅಜಿಂಕ್ಯ ಶಿಂಧೆ ಯಾರು?ಮಹಾರಾಷ್ಟ್ರ ಮೂಲದ ಸಾಮಾಜಿಕ ಹಾಗೂ ರಾಜಕೀಯ ಹೋರಾಟಗಾರರಾಗಿ ಗುರುತಿಸಿಕೊಂಡಿರುವ 35 ವರ್ಷದ ಅಜಿಂಕ್ಯ ಶಿಂಧೆ, ಕಾಕ್ರೋಚ್ ಜನತಾ ಪಾರ್ಟಿಯ(ಸಿಜೆಪಿ) ಪ್ರಮುಖ ನಾಯಕರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ.ದೀಪ್ಕೆ ಗೈರಿನಲ್ಲಿ ಸಿಜೆಪಿ ಪ್ರತಿಭಟನೆ ನೇತೃತ್ವ ವಹಿಸಿರುವ ಅಜಿಂಕ್ಯ ಶಿಂಧೆ ಯಾರು?ಅಂಬಾನಿ ವಿರುದ್ಧ ವಾಗ್ದಾಳಿ: ಬಿಜೆಪಿ ಪ್ರಚಾರ, ದೇಣಿಗೆಯ ನಂಟಿನ ವರದಿ ಹಂಚಿದ ಮಸ್ಕ್ಭಾರತದಲ್ಲಿ ಸ್ಟಾರ್ಲಿಂಕ್ ಸ್ಯಾಟಲೈಟ್ ಬ್ರಾಡ್ಬ್ಯಾಂಡ್ ಸೇವೆಗಳ ಆರಂಭ ವಿಳಂಬವಾಗುತ್ತಿರುವ ವಿವಾದದ ಬೆನ್ನಲ್ಲೇ, ಉದ್ಯಮಿ ಮುಕೇಶ್ ಅಂಬಾನಿ ವಿರುದ್ಧ ಟೆಕ್ ದಿಗ್ಗಜ ಇಲಾನ್ ಮಸ್ಕ್ ಶನಿವಾರ ವಾಗ್ದಾಳಿ ಮುಂದುವರಿಸಿದ್ದಾರೆ. ಅಂಬಾನಿ ವಿರುದ್ಧ ವಾಗ್ದಾಳಿ: ಬಿಜೆಪಿ ಪ್ರಚಾರ, ದೇಣಿಗೆಯ ನಂಟಿನ ವರದಿ ಹಂಚಿದ ಮಸ್ಕ್ಎಕಾನಮಿ 360 | ಬೆಲೆ ಏರಿಕೆಯ ಬಿಸಿ: ಹರಗಿ ಗ್ರಾಮದಿಂದ ಕಲಿಯಬೇಕಿದೆ ಆರ್ಥಿಕ ಪಾಠಇತ್ತೀಚೆಗೆ ಕರ್ನಾಟಕದ ಮಲೆನಾಡು ಮತ್ತು ದಕ್ಷಿಣ ಒಳನಾಡಿನ ಒಂದಿಷ್ಟು ಜಿಲ್ಲೆಗಳಲ್ಲಿ ಸುತ್ತಾಡಿದಾಗ ಕಣ್ಣಿಗೆ ಕಂಡ ದೃಶ್ಯಗಳು ಗಾಬರಿ ಬೀಳಿಸುವಂತಿದ್ದವು. ಸದಾ ಹಸಿರಿನಿಂದ ಕಂಗೊಳಿಸುತ್ತಿದ್ದ ಗದ್ದೆಗಳು ಬೇಸಾಯವಿಲ್ಲದೆ ಬಿರುಕು ಬಿಟ್ಟು ನಿಂತಿದ್ದವು. ಅಲ್ಲೊಂದು ಇಲ್ಲೊಂದು ಕಡೆ ಹಿಂಗಾರು ಮಳೆ ಆರಂಭವಾಗುವ ಹೊತ್ತಿಗೆ ಜನರು ನಾಟಿ ಮುಗಿಸಿದ್ದರು. ಮಳೆ ಕೊರತೆಯಿಂದ ರಾಜ್ಯದ ಹಲವು ಭಾಗಗಳಲ್ಲಿ ಕೃಷಿ ಚಟುವಟಿಕೆಗಳು ಕುಂಠಿತವಾಗಿರುವುದನ್ನು ಇದು ಸ್ಪಷ್ಟವಾಗಿ ಹೇಳುತ್ತಿತ್ತು. ಪರಿಸ್ಥಿತಿ ಎಷ್ಟು ಗಂಭೀರವಾಗಿದೆಯೆಂದರೆ, ಅಪ್ಪಟ ಮಲೆನಾಡಿನ ತಾಲ್ಲೂಕುಗಳೂ ಬರಪೀಡಿತ ಪಟ್ಟಿಗೆ ಸೇರಿವೆ. ಮಳೆ ಕೊರತೆಯ ನಡುವೆ ಮುಂಗಾರು ಮುಗಿದಿದೆ. ಈಗ ಆಗೊಮ್ಮೆ ಈಗೊಮ್ಮೆ ಹಿಂಗಾರು ಮಳೆ ಸುರಿಯುತ್ತಿದ್ದರೂ, ಕೃಷಿ ಮತ್ತು ಜಲಮೂಲಗಳ ಮೇಲೆ ಉಂಟಾಗಿರುವ ಒತ್ತಡ ತಕ್ಷಣಕ್ಕೆ ಕಡಿಮೆಯಾಗುವ ಲಕ್ಷಣಗಳಿಲ್ಲ.ಎಕಾನಮಿ 360 | ಬೆಲೆ ಏರಿಕೆಯ ಬಿಸಿ: ಹರಗಿ ಗ್ರಾಮದಿಂದ ಕಲಿಯಬೇಕಿದೆ ಆರ್ಥಿಕ ಪಾಠಸಿನಿಸಿಪ್: ಎಡರುಗಳ ದಾಟಿ ಬಣ್ಣದ ರೂಪದಲ್ಲಿ ‘ಜಗ ಮೆಚ್ಚಿದ ಮಗ’ ತೆರೆಗೆ ಬರಲು ಸಿದ್ಧ‘ಜಗ ಮೆಚ್ಚಿದ ಮಗ’ ಕನ್ನಡ ಸಿನಿಮಾ ನವೆಂಬರ್ನಲ್ಲಿ ಬಣ್ಣದ ಚಿತ್ರದ ರೂಪದಲ್ಲಿ ತೆರೆಗೆ ಬರಲಿದೆ. ಈಗ ನಾಯಕನಟರು ತಮ್ಮ ಅಂಗಸೌಷ್ಟವ ತೋರಿಸುವ ಚಿತ್ರಗಳನ್ನು ಕಣ್ಣೆವೆಯಿಕ್ಕದೆ ನೋಡುವ ಪ್ರೇಕ್ಷಕರ ಸಂಖ್ಯೆ ಹೆಚ್ಚಾಗಿದೆ. ‘ಜಗ ಮೆಚ್ಚಿದ ಮಗ’ ಚಿತ್ರದಲ್ಲಿ ರಾಜ್ಕುಮಾರ್ ಆಗಲೇ ಮೈಕಟ್ಟು ಪ್ರದರ್ಶಿಸಿ ಜನಮನ ಗೆದ್ದಿದ್ದರು.ಸಿನಿಸಿಪ್: ಎಡರುಗಳ ದಾಟಿ ಬಣ್ಣದ ರೂಪದಲ್ಲಿ ‘ಜಗ ಮೆಚ್ಚಿದ ಮಗ’ ತೆರೆಗೆ ಬರಲು ಸಿದ್ಧಪೊಲೀಸರ ವಿರುದ್ಧ ಎಫ್ಐಆರ್ ದಾಖಲಿಸಲು ಕೋರಿ ನ್ಯಾಯಾಲಯಕ್ಕೆ ಸಿಜೆಪಿ ಅರ್ಜಿಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದನ್ನು ತಡೆಯಲಾಗಿದೆ, ಅಕ್ರಮವಾಗಿ ಗೃಹಬಂಧನದಲ್ಲಿಡಲಾಗಿದೆ ಎಂದು ಆರೋಪಿಸಿ ಕಾಕ್ರೋಚ್ ಜನತಾ ಪಾರ್ಟಿಯ (ಸಿಜೆಪಿ) ಕಾನೂನು ವ್ಯವಹಾರಗಳ ಮುಖ್ಯಸ್ಥೆ ರತ್ನಾ ಸಿಂಗ್ ಅವರು ಪೊಲೀಸರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಕೋರಿ ಶನಿವಾರ (ಅಕ್ಟೋಬರ್ 10) ದೆಹಲಿ ನ್ಯಾಯಾಲಯದ ಮೊರೆ ಹೋಗಿದ್ದಾರೆ.ಪೊಲೀಸರ ವಿರುದ್ಧ ಎಫ್ಐಆರ್ ದಾಖಲಿಸಲು ಕೋರಿ ನ್ಯಾಯಾಲಯಕ್ಕೆ ಸಿಜೆಪಿ ಅರ್ಜಿನವರಾತ್ರಿಯ ಮೊದಲ ದಿನ ಶೈಲಪುತ್ರಿಯ ಪೂಜೆ ಹೇಗಿರಬೇಕು?ಪ್ರತಿ ಸಂವತ್ಸರದಲ್ಲಿಯೂ ಆಶ್ವಯುಜ ಮಾಸದ ಶುಕ್ಲಪಕ್ಷದ ಪಾಡ್ಯದಂದು ನವರಾತ್ರಿಯು ಆರಂಭವಾಗುತ್ತದೆ. ದಶಮಿಯ ದಿನದಂದು ನವರಾತ್ರಿಯ ಆಚರಣೆಯು ಸಂಪೂರ್ಣವಾಗುತ್ತದೆ.ನವರಾತ್ರಿಯ ಮೊದಲ ದಿನ ಶೈಲಪುತ್ರಿಯ ಪೂಜೆ ಹೇಗಿರಬೇಕು?ಬಹುಕಾಲದ ಗೆಳತಿಯೊಂದಿಗೆ ಮದುವೆಯಾದ RCB ಮಾಜಿ ಆಟಗಾರ ಲಿಯಾಮ್ ಲಿವಿಂಗ್ಸ್ಟೋನ್ಇಂಗ್ಲೆಂಡ್ ಕ್ರಿಕಟ್ನ ಆಲ್ರೌಂಡರ್, ಆರ್ಸಿಬಿ ಮಾಜಿ ಆಟಗಾರ ಲಿಯಾಮ್ ಲಿವಿಂಗ್ಸ್ಟೋನ್ ಬಹುಕಾಲದ ಗೆಳತಿ ಒಲಿವಿಯಾರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.ಬಹುಕಾಲದ ಗೆಳತಿಯೊಂದಿಗೆ ಮದುವೆಯಾದ RCB ಮಾಜಿ ಆಟಗಾರ ಲಿಯಾಮ್ ಲಿವಿಂಗ್ಸ್ಟೋನ್