ನಮ್ಮದು ಸಮಾಜ ಒಗ್ಗೂಡಿಸುವ ಧರ್ಮ; ವಿಭಜನೆ ಮಾಡುವುದಲ್ಲ: ಡಿ.ಕೆ. ಶಿವಕುಮಾರ್
ಬೆಂಗಳೂರು: ‘ಈ ಹಿಂದೆ ವೀರಶೈವ, ಲಿಂಗಾಯತ ಬೇರೆ ಮಾಡಲು ಹೋದಾಗ ಸಮುದಾಯದ ಗುರುಗಳ ಕ್ಷಮೆ ಕೇಳಿದ್ದೆ. ನಮ್ಮದು ಸಮಾಜ ಒಗ್ಗೂಡಿಸುವ ಧರ್ಮ. ವಿಭಜನೆ ಮಾಡುವುದಲ್ಲ’ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.ಗೃಹ ಕಚೇರಿ ಕೃಷ್ಣಾದಲ್ಲಿ ಗದಗ ಜಿಲ್ಲೆ ಶಿರಹಟ್ಟಿಯ ಭಾವೈಕ್ಯತಾ ಫಕೀರೇಶ್ವರ ಮಠದ ದಿಂಗಾಲೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ತಮ್ಮನ್ನು ಭೇಟಿಯಾದ ಉತ್ತರ ಕರ್

ಬೆಂಗಳೂರು: ‘ಈ ಹಿಂದೆ ವೀರಶೈವ, ಲಿಂಗಾಯತ ಬೇರೆ ಮಾಡಲು ಹೋದಾಗ ಸಮುದಾಯದ ಗುರುಗಳ ಕ್ಷಮೆ ಕೇಳಿದ್ದೆ. ನಮ್ಮದು ಸಮಾಜ ಒಗ್ಗೂಡಿಸುವ ಧರ್ಮ. ವಿಭಜನೆ ಮಾಡುವುದಲ್ಲ’ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.ಗೃಹ ಕಚೇರಿ ಕೃಷ್ಣಾದಲ್ಲಿ ಗದಗ ಜಿಲ್ಲೆ ಶಿರಹಟ್ಟಿಯ ಭಾವೈಕ್ಯತಾ ಫಕೀರೇಶ್ವರ ಮಠದ ದಿಂಗಾಲೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ತಮ್ಮನ್ನು ಭೇಟಿಯಾದ ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಭಾಗದ 25ಕ್ಕೂ ಹೆಚ್ಚು ಮಠಗಳ ಸ್ವಾಮೀಜಿಗಳ ನಿಯೋಗವನ್ನು ಉದ್ದೇಶಿಸಿ ಶನಿವಾರ ಅವರು ಮಾತನಾಡಿದರು.‘ನಾವು ಸೂಜಿಯಂತೆ ಹೊಲಿಯುವ ಕೆಲಸ ಮಾಡುತ್ತೇವೆ. ಕತ್ತರಿಯಂತೆ ಕತ್ತರಿಸುವ ಕೆಲಸ ಮಾಡುವುದಿಲ್ಲ. ಒಗ್ಗಟ್ಟಿನಲ್ಲಿ ಶಕ್ತಿ ಇದೆ’ ಎಂದರು.‘ಸರ್ಕಾರ ಏನೇ ಮಾಡಬಹುದು. ಆದರೆ, ಗುರುಗಳ ಹಾಗೂ ಗುರುಮಠಗಳ ಕಾರ್ಯಗಳು ಶ್ಲಾಘನೀಯ. ಗುರು ಇಲ್ಲದೇ ಒಂದು ಹೆಜ್ಜೆ ಮುಂದೆ ಇಡಲು ಆಗದು’ ಎಂದು ಅವರು ಅಭಿಪ್ರಾಯಪಟ್ಟರು.‘ಬಾಳೆ ಹೊನ್ನೂರು ಮಠ ಸೇರಿದಂತೆ ಅನೇಕ ಮಠಗಳಿಗೆ ಭೇಟಿ ಕೊಟ್ಟಿದ್ದೇನೆ. ಅಲ್ಲಿನ ಆಚಾರ ವಿಚಾರ ಗಮನಿಸಿದ್ದೇನೆ. ನಾನು ವೀರ ಗಂಗಾಧರ ಅಜ್ಜಯ್ಯನವರ ಹೆಸರಲ್ಲಿ ಪ್ರಮಾಣ ವಚನ ಸ್ವೀಕಾರಿಸಿದ್ದೇನೆ. ಇದಕ್ಕೆ ಇಡೀ ದೇಶದ ನಾಯಕರು ಅಚ್ಚರಿಪಟ್ಟರು’ ಎಂದರು.‘ಚೆನ್ನೈನ ಆಸ್ಪತ್ರೆಯಲ್ಲಿ ಸಿದ್ದಗಂಗಾ ಶ್ರೀಗಳಿಗೆ ಮುಸ್ಲಿಂ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿದರು. ಆಗ ನಾನು ಧರ್ಮ, ಜಾತಿ ಎಂಬುದು ಮಾನವೀಯತೆಯಲ್ಲಿ ಇದೆ. ಎಲ್ಲರೂ ಒಂದೇ ಎಂದು ಹೇಳಿದಾಗ ಬಹಳ ಜನ ಟೀಕೆ ಮಾಡಿದರು. ಆದರೆ ನಾನು ತಲೆ ಕೆಡಿಸಿಕೊಳ್ಳಲಿಲ್ಲ’ ಎಂದು ಹೇಳಿದರು.‘ದಸರಾ ಉದ್ಘಾಟನೆಯನ್ನು ಕೊಪ್ಪಳ ಗವಿಸಿದ್ದೇಶ್ವರ ಮಠಗಳ ಶ್ರೀಗಳು ನೆರವೇರಿಸಲಿದ್ದಾರೆ. ಆ ಮಠದ ಕೆಲಸ ನೋಡಿದ್ದೇನೆ. ಅವರ ವ್ಯಕ್ತಿತ್ವ ದೊಡ್ಡದು. ಅವರನ್ನು ಇಡೀ ರಾಜ್ಯ ಒಪ್ಪಿದೆ. ಸ್ವಾಮಿಗಳೂ ಉದ್ಘಾಟನೆಗೆ ಒಪ್ಪಿದ್ದಾರೆ. ಅವರ ಜತೆ ಮಾತಾಡಿಯೇ ಅವರ ಹೆಸರನ್ನು ಅಂತಿಮಗೊಳಿಸಲಾಯಿತು. ಆದರೆ, ಕೆಲವರು ಅದರಲ್ಲೂ ರಾಜಕೀಯ ಮಾಡಲು ನೋಡಿದರು. ಸ್ವಾಮಿಗಳು ಒಪ್ಪಿಲ್ಲವೆಂದು ಸುಳ್ಳು ಸುದ್ದಿ ಹಬ್ಬಿಸಿದರು’ ಎಂದರು.‘ನನಗೆ ಸಿಕ್ಕಿರುವ ಅವಕಾಶದಲ್ಲಿ ಜನರ ಹೃದಯ ಗೆದ್ದು, ಕೆಲಸ ಮಾಡುವೆ. ಅದೇ ನನ್ನ ಗುರಿ. ಗುರುಗಳೆಲ್ಲರೂ ಮಾಡಿರುವ ಆಶೀರ್ವಾದ ನನಗೆ ಮಾತ್ರವಲ್ಲ, ಇಡೀ ಸರ್ಕಾರಕ್ಕೆ. ನಿಮ್ಮ ಸಹಕಾರ ಹೀಗೇ ಇರಲಿ’ ಎಂದರು.