ಅಭಿಲೇಖಾಲಯ: ‘ಜನಸಾಮಾನ್ಯ’ಗೆ ಸಿಗದ ದಾಖಲೆ
ಭಟ್ಕಳ: ಇಲ್ಲಿನ ತಹಶೀಲ್ದಾರ್ ಕಚೇರಿಯ ಗಣಕೀಕೃತ ಅಭಿಲೇಖಾಲಯದಲ್ಲಿ ಸಾರ್ವಜನಿಕರಿಗೆ ಸಕಾಲದಲ್ಲಿ ದಾಖಲೆಗಳು ದೊರೆಯುತ್ತಿಲ್ಲ ಎಂಬ ದೂರುಗಳು ಕೇಳಿಬರುತ್ತಿವೆ.ತಹಶೀಲ್ದಾರ್ ಕಚೇರಿಯ ನೆಲಮಹಡಿಯಲ್ಲಿರುವ ಗಣಕೀಕೃತ ಅಭಿಲೇಖಾಲಯದಲ್ಲಿ ಪಹಣಿಗೆ ಸಂಬಂಧಿಸಿದ ಎಂಟ್ರಿ ಉತಾರ, ಫಾರಂ ನಂಬರ್–7, ಎಂ.ಆರ್. ಹಾಗೂ ಪಟ್ಟಾ ಆದೇಶಗಳ ಪ್ರತಿಗಳು, ಹಳೆಯ ಕೈಬರಹದ ಪಹಣಿಗಳು ಸೇರಿದಂತೆ ವಿವಿಧ

ಭಟ್ಕಳ: ಇಲ್ಲಿನ ತಹಶೀಲ್ದಾರ್ ಕಚೇರಿಯ ಗಣಕೀಕೃತ ಅಭಿಲೇಖಾಲಯದಲ್ಲಿ ಸಾರ್ವಜನಿಕರಿಗೆ ಸಕಾಲದಲ್ಲಿ ದಾಖಲೆಗಳು ದೊರೆಯುತ್ತಿಲ್ಲ ಎಂಬ ದೂರುಗಳು ಕೇಳಿಬರುತ್ತಿವೆ.ತಹಶೀಲ್ದಾರ್ ಕಚೇರಿಯ ನೆಲಮಹಡಿಯಲ್ಲಿರುವ ಗಣಕೀಕೃತ ಅಭಿಲೇಖಾಲಯದಲ್ಲಿ ಪಹಣಿಗೆ ಸಂಬಂಧಿಸಿದ ಎಂಟ್ರಿ ಉತಾರ, ಫಾರಂ ನಂಬರ್–7, ಎಂ.ಆರ್. ಹಾಗೂ ಪಟ್ಟಾ ಆದೇಶಗಳ ಪ್ರತಿಗಳು, ಹಳೆಯ ಕೈಬರಹದ ಪಹಣಿಗಳು ಸೇರಿದಂತೆ ವಿವಿಧ ದಾಖಲೆಗಳನ್ನು ಪಡೆಯಲು ಸಾರ್ವಜನಿಕರು ಅರ್ಜಿ ಸಲ್ಲಿಸಬೇಕಾಗುತ್ತದೆ. ನಿತ್ಯವೂ ದಾಖಲೆಗಳಿಗಾಗಿ ಕಚೇರಿಗೆ ಆಗಮಿಸುವ ಜನರ ದಟ್ಟಣೆ ಕಂಡುಬರುತ್ತದೆ.ಜಮೀನು ಖರೀದಿ ಮತ್ತು ಮಾರಾಟ, ಸ್ವತ್ತಿನ ಮೇಲೆ ಅಡಮಾನ ಸಾಲ ಪಡೆಯುವುದು ಹಾಗೂ ಆಸ್ತಿಯ ನೈಜತೆ ಪರಿಶೀಲಿಸುವುದು ಸೇರಿದಂತೆ ವಿವಿಧ ಉದ್ದೇಶಗಳಿಗೆ ಈ ದಾಖಲೆಗಳು ಅಗತ್ಯವಾಗಿವೆ. ಆದರೆ, ದಾಖಲೆ ಕೋರಿ ಅರ್ಜಿ ಸಲ್ಲಿಸಿದರೂ ವಾರಗಳು ಕಳೆದರೂ ಅವು ಕೈಗೆ ಸಿಗುತ್ತಿಲ್ಲ ಎಂಬುದು ಸಾರ್ವಜನಿಕರ ಆರೋಪವಾಗಿದೆ.ಅಭಿಲೇಖಾಲಯದಲ್ಲಿ ಪ್ರತಿದಿನ ಹತ್ತಾರು ಮಂದಿ ದಾಖಲೆಗಳಿಗಾಗಿ ಅರ್ಜಿ ಸಲ್ಲಿಸುತ್ತಾರೆ. ಆದರೆ, ಸಲ್ಲಿಕೆಯಾಗುವ ಎಲ್ಲ ಅರ್ಜಿಗಳನ್ನು ಸಕಾಲದಲ್ಲಿ ಪರಿಶೀಲಿಸಿ ವಿಲೇವಾರಿ ಮಾಡಲು ಅಗತ್ಯ ಸಿಬ್ಬಂದಿ ಇಲ್ಲ. ಹಲವು ವರ್ಷಗಳ ಹಿಂದಿನ ದಾಖಲೆಗಳನ್ನು ಹುಡುಕಲು ಹೊಸದಾಗಿ ನೇಮಕಗೊಂಡ ಸಿಬ್ಬಂದಿಗೆ ಅನುಭವದ ಕೊರತೆಯೂ ಇದೆ. ಇದರಿಂದಾಗಿ ದಾಖಲೆಗಳನ್ನು ವಿತರಿಸುವಲ್ಲಿ ವಿಳಂಬವಾಗುತ್ತಿದೆ. ಸಾರ್ವಜನಿಕರು ದಾಖಲೆಗಳಿಗಾಗಿ ದಿನನಿತ್ಯ ಕಚೇರಿಗೆ ಅಲೆದಾಡುವಂತಾಗಿದೆ ಎಂದು ಸ್ಥಳೀಯ ಮಂಜುನಾಥ ನಾಯ್ಕ ದೂರಿದ್ದಾರೆ.ಅರ್ಜಿ ಸ್ವೀಕರಿಸಲು ಹಾಗೂ ವಿಲೇವಾರಿಯಾದ ದಾಖಲೆಗಳನ್ನು ವಿತರಿಸಲು ಒಂದೇ ಕೌಂಟರ್ ಇರುವುದರಿಂದ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ಅರ್ಜಿ ಸಲ್ಲಿಸಲು ಬರುವವರು ಹಾಗೂ ದಾಖಲೆಗಳನ್ನು ಪಡೆಯಲು ಆಗಮಿಸುವವರು ಕೆಲವೊಮ್ಮೆ ಗಂಟೆಗಟ್ಟಲೆ ಸರದಿಯಲ್ಲಿ ನಿಲ್ಲಬೇಕಾಗುತ್ತದೆ. ವೃದ್ಧರು ಮತ್ತು ಮಹಿಳೆಯರು ಕಚೇರಿ ಆವರಣದಲ್ಲಿ ದೀರ್ಘಕಾಲ ಕಾಯಬೇಕಾದ ಪರಿಸ್ಥಿತಿ ಇದೆ.ಸಂಬಂಧಪಟ್ಟ ಅಧಿಕಾರಿಗಳು ಅಭಿಲೇಖಾಲಯಕ್ಕೆ ಅಗತ್ಯ ಸಿಬ್ಬಂದಿಯನ್ನು ನೇಮಿಸಿ, ಅರ್ಜಿಗಳ ತ್ವರಿತ ವಿಲೇವಾರಿಗೆ ಕ್ರಮ ಕೈಗೊಳ್ಳಬೇಕು. ಸಾರ್ವಜನಿಕರು ಅನಗತ್ಯವಾಗಿ ಕಚೇರಿಗೆ ಅಲೆದಾಡುವುದನ್ನು ತಪ್ಪಿಸಲು ಹೆಚ್ಚುವರಿ ಕೌಂಟರ್ ತೆರೆಯಬೇಕು ಎಂಬುದು ಜನರ ಆಗ್ರಹವಾಗಿದೆ.ದಲ್ಲಾಳಿಗಳ ಕಾರುಬಾರು; ಆರೋಪ‘ತಹಶೀಲ್ದಾರ್ ಕಚೇರಿಯ ಅಭಿಲೇಖಾಲಯದಲ್ಲಿ ದಲ್ಲಾಳಿಗಳಿಗೆ ಮಣೆ ಹಾಕಲಾಗುತ್ತದೆ. ಅವರು ನೀಡಿದ ಅರ್ಜಿಗಳ ದಾಖಲೆಗಳನ್ನು ತ್ವರಿತವಾಗಿ ಹುಡುಕಿ ಕೊಡುವ ಸಿಬ್ಬಂದಿ, ಜನ ಸಾಮಾನ್ಯರು ನೀಡಿದ ಅರ್ಜಿಗಳ ದಾಖಲೆ ಹುಡುಕಿಕೊಡಲು ವಾರಗಳ ತನಕ ಸತಾಯಿಸುತ್ತಾರೆ.ಗಟ್ಟಿಯಾಗಿ ಕೇಳಿದರೆ ಆನ್ಲೈನ್ನಲ್ಲಿ ದಾಖಲೆ ಹುಡುಕಿಕೊಳ್ಳಿ ಎನ್ನುವ ಉತ್ತರ ಕೊಡತ್ತಾರೆ’ ಎಂಬುದು ಸ್ಥಳೀಯ ವಸಂತ ನಾಯ್ಕ ಅವರ ಆರೋಪ.ಪ್ರವೀಣ ಕರಾಂಡೆ, ತಹಶೀಲ್ದಾರ್ಅಭಿಲೇಖಾಲಯದಲ್ಲಿ ದಾಖಲೆ ಸಕಾಲಕ್ಕೆ ಸಿಗದ ಬಗ್ಗೆ ದೂರು ಬಂದಿದೆ. ಪರಿಶೀಲನೆ ನಡೆಸಿ, ಸಿಬ್ಬಂದಿ ಬದಲಾವಣೆ ಮಾಡಾಗುವುದು 261010-20-1388274262