ಗದಗ | ಲಕ್ಕುಂಡಿ ಗ್ರಾಮ ಪಂಚಾಯತ ಮಾಜಿ ಸದಸ್ಯನ ಭೀಕರ ಕೊಲೆ
ಗದಗ: ಗದಗ (Gadag) ಜಿಲ್ಲೆ ಲಕ್ಕುಂಡಿ ಗ್ರಾಮದ ಹೊರವಲಯದಲ್ಲಿ ಮಾಜಿ ಗ್ರಾಮ ಪಂಚಾಯಿತಿ ಸದಸ್ಯನನ್ನು ಭೀಕರವಾಗಿ ಕೊಲೆ ಮಾಡಲಾಗಿದೆ. ಬಸವಣ್ಣೆಪ್ಪ ಮಾಡಲಗೇರಿ (62) ಕೊಲೆಯಾದ ದುರ್ದೈವಿ. ಜಮೀನಿನಿಂದ ಮನೆಗೆ ವಾಪಸ್ ಬರುತ್ತಿದ್ದ ವೇಳೆ ದುಷ್ಕರ್ಮಿಗಳು ಬೈಕ್ ಅಡ್ಡಗಟ್ಟಿ ಹತ್ಯೆ ಮಾಡಿದ್ದಾರೆ. ರಾತ್ರಿ ವೇಳೆ ಜಮೀನಿನಿಂದ ಮನೆಗೆ ಬರುತ್ತಿದ್ದ ಬಸವಣ್ಣೆಪ್ಪ ಅವರನ್ನು ಲಕ್ಕು

ಗದಗ: ಗದಗ (Gadag) ಜಿಲ್ಲೆ ಲಕ್ಕುಂಡಿ ಗ್ರಾಮದ ಹೊರವಲಯದಲ್ಲಿ ಮಾಜಿ ಗ್ರಾಮ ಪಂಚಾಯಿತಿ ಸದಸ್ಯನನ್ನು ಭೀಕರವಾಗಿ ಕೊಲೆ ಮಾಡಲಾಗಿದೆ. ಬಸವಣ್ಣೆಪ್ಪ ಮಾಡಲಗೇರಿ (62) ಕೊಲೆಯಾದ ದುರ್ದೈವಿ. ಜಮೀನಿನಿಂದ ಮನೆಗೆ ವಾಪಸ್ ಬರುತ್ತಿದ್ದ ವೇಳೆ ದುಷ್ಕರ್ಮಿಗಳು ಬೈಕ್ ಅಡ್ಡಗಟ್ಟಿ ಹತ್ಯೆ ಮಾಡಿದ್ದಾರೆ. ರಾತ್ರಿ ವೇಳೆ ಜಮೀನಿನಿಂದ ಮನೆಗೆ ಬರುತ್ತಿದ್ದ ಬಸವಣ್ಣೆಪ್ಪ ಅವರನ್ನು ಲಕ್ಕುಂಡಿ-ಸಂಭಾಪೂರ ಮಾರ್ಗದಲ್ಲಿ ಅಡ್ಡಗಟ್ಟಲಾಗಿದೆ. ಬಳಿಕ ಅವರ ಕತ್ತು ಸೀಳಿ, ತಲೆಗೆ ಬಲವಾಗಿ ಹೊಡೆದು ಕೊಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಹತ್ಯೆ ಮಾಡಿದ ಬಳಿಕ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.ಇದನ್ನೂ ಓದಿ: ದೊಡ್ಮನೆಯಲ್ಲಿ ಬೀಪ್ಗಳದ್ದೇ ಸದ್ದು; ಮಂಜು ಜೊತೆ ಈ ಮೂರು ಸ್ಪರ್ಧಿಗಳಿಗೂ ಎಲಿಮಿನೇಷನ್ ಭೀತಿ ಕೊಲೆಗೆ ನಿಖರ ಕಾರಣ ಏನು ಎಂಬುದು ಇನ್ನೂ ತಿಳಿದುಬಂದಿಲ್ಲ. ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಇದನ್ನೂ ಓದಿ: CJP Protest Live Update| ವಿಮಾನದಲ್ಲೇ ದೀಪ್ಕೆ, ರಾಂಕಾ ವಶಕ್ಕೆ