ನ್ಯಾಮತಿ | ಪೊಲೀಸರ ಕರ್ತವ್ಯಕ್ಕೆ ಅಡ್ಡಿ: 12 ಜನರ ಮೇಲೆ ಪ್ರಕರಣ ದಾಖಲು
ನ್ಯಾಮತಿ: ತಾಲ್ಲೂಕಿನ ಸೋಗಿಲು ಗ್ರಾಮದಲ್ಲಿ ಶುಕ್ರವಾರ ಎರಡು ಸಮುದಾಯಗಳ ನಡುವೆ ಜಾಗದ ವಿಚಾರವಾಗಿ ನಡೆಯುತ್ತಿದ್ದ ಗಲಾಟೆ ಬಿಡಿಸಲು ಹೋದ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿ, ಹಲ್ಲೆ ಮಾಡಿದ್ದಾರೆ ಎಂದು ಎರಡೂ ಸಮುದಾಯಗಳ ವಿರುದ್ಧ ನ್ಯಾಮತಿ ಪೊಲೀಸ್ ಠಾಣೆ ಪಿಎಸ್ಐ ಕೆ.ಎಸ್. ಶೋಭಾರಾಣಿ ದೂರು ನೀಡಿದ್ದಾರೆ.ಸೋಗಿಲು ಗ್ರಾಮದ ಎ.ಕೆ. ಜನಾಂಗದ ಅಣ್ಣಪ್ಪ ಮತ್ತು ದೇವಾಂಗ ಜನಾಂ

ನ್ಯಾಮತಿ: ತಾಲ್ಲೂಕಿನ ಸೋಗಿಲು ಗ್ರಾಮದಲ್ಲಿ ಶುಕ್ರವಾರ ಎರಡು ಸಮುದಾಯಗಳ ನಡುವೆ ಜಾಗದ ವಿಚಾರವಾಗಿ ನಡೆಯುತ್ತಿದ್ದ ಗಲಾಟೆ ಬಿಡಿಸಲು ಹೋದ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿ, ಹಲ್ಲೆ ಮಾಡಿದ್ದಾರೆ ಎಂದು ಎರಡೂ ಸಮುದಾಯಗಳ ವಿರುದ್ಧ ನ್ಯಾಮತಿ ಪೊಲೀಸ್ ಠಾಣೆ ಪಿಎಸ್ಐ ಕೆ.ಎಸ್. ಶೋಭಾರಾಣಿ ದೂರು ನೀಡಿದ್ದಾರೆ.ಸೋಗಿಲು ಗ್ರಾಮದ ಎ.ಕೆ. ಜನಾಂಗದ ಅಣ್ಣಪ್ಪ ಮತ್ತು ದೇವಾಂಗ ಜನಾಂಗದ ಬಸವರಾಜಪ್ಪ ಅವರ ನಡುವೆ ಜಾಗದ ವಿಚಾರಕ್ಕೆ ಒಂದು ವರ್ಷದಿಂದ ಗಲಾಟೆ ನಡೆಯುತ್ತಿದ್ದು, ಪೊಲೀಸ್ ಠಾಣೆಯಲ್ಲಿ ದೂರು, ಪ್ರತಿದೂರು ದಾಖಲಾಗಿತ್ತು.ಶುಕ್ರವಾರ ಗ್ರಾಮದಲ್ಲಿ ಎರಡು ಸಮುದಾಯದವರ ಮಧ್ಯೆ ಗಲಾಟೆ ಆಗುತ್ತಿದೆ ಎಂಬ ವಿಷಯ ತಿಳಿದು ಸಿಬ್ಬಂದಿ ಗೀರಿಶನಾಯ್ಕ, ಉಮೇಶ, ಮಂಜಪ್ಪ, ಶಿವರಾಜ, ಹೇಮರಾಜ, ಪ್ರಶಾಂತ ಅವರೊಡನೆ ಸ್ಥಳಕ್ಕೆ ಜಗಳ ಬಿಡಿಸಲು ಹೋದಾಗ ಅವ್ಯಾಚ ಶಬ್ಧಗಳಿಂದ ನಿಂದಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿ, ಹಲ್ಲೆ ಮಾಡಲಾಗಿದೆ. ಈ ಸಂಬಂಧ ಅಣ್ಣಪ್ಪ, ಹನುಮಂತಪ್ಪ, ಹಾಲೇಶ, ಸಂಜು, ಬಸವರಾಜ, ಶಿವಕುಮಾರ, ಪ್ರದೀಪ, ಮಹಾಲಕ್ಷ್ಮಿ, ಮಲ್ಲಮ್ಮ, ಶಿವಕುಮಾರ, ಮಂಜಪ್ಪ ಮತ್ತು ಸುನೀಲಕುಮಾರ ಎಂಬುವವರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ತಿಳಿಸಿದ್ದಾರೆ.ನ್ಯಾಮತಿ ಪೊಲೀಸ್ ಇನ್ಸ್ಪೆಕ್ಟರ್ ಎಚ್.ಎಂ. ಸಿದ್ದೇಗೌಡ ಪ್ರಕರಣ ದಾಖಲಿಸಿಕೊಂಡಿದ್ದಾರೆ.