ಹಣ ಅಕ್ರಮ ವರ್ಗಾವಣೆ: ಮಾಧ್ಯಮ ಸಂಸ್ಥೆ ಮಾಲೀಕನ ಬಂಧನ
ನವದೆಹಲಿ: ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಸಾಧನಾ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಅಧ್ಯಕ್ಷ ರಾಕೇಶ್ ಕುಮಾರ್ ಗುಪ್ತಾ ಅವರನ್ನು ಜಾರಿ ನಿರ್ದೇಶನಾಲಯ (ಇ.ಡಿ) ಬಂಧಿಸಿದೆ.ಗುಪ್ತಾ ಅವರನ್ನು ಶನಿವಾರ ಮುಂಜಾನೆ ಘಾಜಿಯಾಬಾದ್ನಲ್ಲಿರುವ (ಉತ್ತರ ಪ್ರದೇಶ) ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಸೌರಭ್ ಪ್ರತಾಪ್ ಸಿಂಗ್ ಲಾಲರ್ ಅವರ ಮುಂದೆ ಹಾಜರುಪಡಿಸಲಾಯಿತು. ನ್ಯಾಯ

ನವದೆಹಲಿ: ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಸಾಧನಾ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಅಧ್ಯಕ್ಷ ರಾಕೇಶ್ ಕುಮಾರ್ ಗುಪ್ತಾ ಅವರನ್ನು ಜಾರಿ ನಿರ್ದೇಶನಾಲಯ (ಇ.ಡಿ) ಬಂಧಿಸಿದೆ.ಗುಪ್ತಾ ಅವರನ್ನು ಶನಿವಾರ ಮುಂಜಾನೆ ಘಾಜಿಯಾಬಾದ್ನಲ್ಲಿರುವ (ಉತ್ತರ ಪ್ರದೇಶ) ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಸೌರಭ್ ಪ್ರತಾಪ್ ಸಿಂಗ್ ಲಾಲರ್ ಅವರ ಮುಂದೆ ಹಾಜರುಪಡಿಸಲಾಯಿತು. ನ್ಯಾಯಾಲಯವು ಅವರನ್ನು ಐದು ದಿನ ಇ.ಡಿ ವಶಕ್ಕೆ ನೀಡಿದೆ. ಇ.ಡಿ ಅವರನ್ನು ಏಳು ದಿನ ವಶಕ್ಕೆ ನೀಡುವಂತೆ ಕೋರಿತ್ತು.ಸಂಸ್ಥೆ ದಿವಾಳಿಯಾಗಿದೆ ಎಂದು ಘೋಷಿಸಿ, ₹110.10 ಕೋಟಿ ಆದಾಯ ತೆರಿಗೆ ಬಾಕಿಯನ್ನು ₹20 ಲಕ್ಷಕ್ಕೆ ಇತ್ಯರ್ಥಪಡಿಸಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.ಗುಪ್ತಾ ಮತ್ತು ಇತರರ ವಿರುದ್ಧ ದೆಹಲಿ ಪೊಲೀಸರು ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯಡಿ ಸೆಪ್ಟೆಂಬರ್ನಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು.
Read the complete story at Prajavani