BBK13: ಮಂಜುನಾಥ್ಗೆ ಕೊನೆಯ ಕಿವಿಮಾತು... ಕರೆಯಲ್ಲಿ ಅಮ್ಮ ಹೇಳಿದ್ದೇನು?
ಬಿಗ್ ಬಾಸ್ ಮನೆಯಲ್ಲಿ ಅವಾಚ್ಯ ಪದವನ್ನು ಬಳಸಿದ್ದ ಮಂಜ ವಿರುದ್ಧ ತಾಯಿ ಬೇಸರ ಹೊರ ಹಾಕಿದ್ದಾರೆ. ಕಲರ್ಸ್ ಕನ್ನಡ ಸಾಮಾಜಿಕ ಮಾಧ್ಯಮದಲ್ಲಿ ಪ್ರೋಮೊವೊಂದನ್ನು ಬಿಡುಗಡೆ ಮಾಡಿದೆ. ಅದರಲ್ಲಿ ಸುದೀಪ್ ಅವರು ಮಂಜನನ್ನು ಕನ್ಫೆಷನ್ ಕೋಣೆಗೆ ಹೋಗುವಂತೆ ಹೇಳಿದ್ದಾರೆ.ಕನ್ಫೆಷನ್ ಕೋಣೆಗೆ ಹೋದ ಮಂಜ ಟೇಬಲ್ ಮೇಲೆ ಇಟ್ಟಿರುವ ಪತ್ರವನ್ನು ಓದಿದ್ದಾರೆ. ಅದರಲ್ಲಿ, ‘ನೀವು ಆಡಿರುವ ಮಾತು

ಬಿಗ್ ಬಾಸ್ ಮನೆಯಲ್ಲಿ ಅವಾಚ್ಯ ಪದವನ್ನು ಬಳಸಿದ್ದ ಮಂಜ ವಿರುದ್ಧ ತಾಯಿ ಬೇಸರ ಹೊರ ಹಾಕಿದ್ದಾರೆ. ಕಲರ್ಸ್ ಕನ್ನಡ ಸಾಮಾಜಿಕ ಮಾಧ್ಯಮದಲ್ಲಿ ಪ್ರೋಮೊವೊಂದನ್ನು ಬಿಡುಗಡೆ ಮಾಡಿದೆ. ಅದರಲ್ಲಿ ಸುದೀಪ್ ಅವರು ಮಂಜನನ್ನು ಕನ್ಫೆಷನ್ ಕೋಣೆಗೆ ಹೋಗುವಂತೆ ಹೇಳಿದ್ದಾರೆ.ಕನ್ಫೆಷನ್ ಕೋಣೆಗೆ ಹೋದ ಮಂಜ ಟೇಬಲ್ ಮೇಲೆ ಇಟ್ಟಿರುವ ಪತ್ರವನ್ನು ಓದಿದ್ದಾರೆ. ಅದರಲ್ಲಿ, ‘ನೀವು ಆಡಿರುವ ಮಾತುಗಳನ್ನು ವೀಕ್ಷಿಸುತ್ತಿರುವ ಕನ್ನಡದ ಜನತೆಗೆ ನಿಮ್ಮ ಮಾತುಗಳಿಂದ ಎಷ್ಟು ನೋವಾಗಿರಬಹುದು ಎನ್ನುವ ಉದ್ದೇಶದಿಂದ ನಿಮ್ಮ ಮಾತುಗಳು ಈಗ ನಿಮ್ಮ ಕಿವಿಗೆ’ ಎಂದು ಬರೆಯಲಾಗಿತ್ತು. View this post on Instagram ಆ ಬಳಿಕ, ಮಂಜ ಅವರ ತಾಯಿ ಕರೆ ಮೂಲಕ ಮಾತನಾಡಿದ್ದಾರೆ. ‘ಮಂಜ ನೀನು ಮಾತನಾಡುತ್ತಿರುವ ರೀತಿ ಸರಿಯಲ್ಲಿ. ಈ ಕಾರ್ಯಕ್ರಮವನ್ನು ಇಡೀ ಕುಟುಂಬಸ್ಥರು ಕುಳಿತುಕೊಂಡು ನೋಡುತ್ತಿರುತ್ತಾರೆ. ಒಂದು ಕಡೆ ಇರುವವರು ಒಂದೇ ತಾಯಿ ಮಕ್ಕಳ ಹಾಗೇ ಆಟ ಆಡಬೇಕು. ಹೀಗೆ ಕೆಟ್ಟ ಪದವನ್ನು ಬಳಸಬಾರದು. ನಿನ್ನ ಮಾತುಗಳನ್ನು ಕೇಳಿ ನನಗೆ ಬೇಸರ ಆಗಿದೆ. ನಿನ್ನ ಮಾತು ಬೇರೆಯವರಿಗೂ ಬೇಸರ ಆಗಿರುತ್ತದೆ’ ಎಂದಿದ್ದಾರೆ. ತಾಯಿಯ ಮಾತನ್ನು ಕೇಳಿಸಿಕೊಳ್ಳುತ್ತಿದ್ದಂತೆ ಮಂಜ ಬಿಕ್ಕಿ ಬಿಕ್ಕಿ ಕಣ್ಣೀರು ಹಾಕಿದ್ದಾರೆ.ಅಗ್ನಿಪರೀಕ್ಷೆ ಮೂಲಕ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿರುವ ಮಂಜ, ಅವಾಚ್ಯ ಶಬ್ದಗಳನ್ನು ಬಳಸುವುದರಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಯಾವೊಬ್ಬ ಸ್ಪರ್ಧಿಯೂ ಅವಾಚ್ಯ ಶಬ್ದಗಳನ್ನು ಬಳಸುವುದಾಗಲಿ ಅಥವಾ ನಿಂದಿಸುವುದಾಗಲಿ ಮಾಡುವಂತಿಲ್ಲ ಎಂಬ ನಿಯಮವಿದೆ. ಆದರೆ ನಿಯಮ ಮೀರಿದ್ದ ಮಂಜಗೆ ಈ ವಾರ ಎರಡನೇ ಬಾರಿ ಕಳಪೆ ಪಟ್ಟ ಸಿಕ್ಕಿದೆ.ಆದರೆ ಈ ಬಾರಿಯ ಬಿಗ್ ಬಾಸ್ ಮನೆಗೆ ಬಂದಿರುವ ಸ್ಪರ್ಧಿಗಳು ಆ ನಿಯಮವನ್ನು ಗಾಳಿಗೆ ತೂರಿದ್ದಾರೆ. ಒಬ್ಬರಾದ ಮೇಲೆ ಒಬ್ಬರಂತೆ ಬಿಗ್ ಬಾಸ್ ಮನೆಯಲ್ಲಿ ಅವಾಚ್ಯ ಶಬ್ದಗಳನ್ನು ಬಳಸುತ್ತಿದ್ದದ್ದು, ವೀಕ್ಷಕರಿಗೆ ಕಿರಿಕಿರಿ ಉಂಟು ಮಾಡಿದೆ. ಅದರಲ್ಲೂ ಈ ವಾರ ಮಂಜ ಅವರ ಪದ ಬಳಕೆ ಅತಿರೇಕಕ್ಕೆ ಹೋಗಿತ್ತು. ಹೀಗಾಗಿ ಮಂಜ ಅವರ ತಾಯಿ ಕರೆ ಮಾಡಿ ಬುದ್ಧಿ ಮಾತು ಹೇಳಿದ್ದಾರೆ. View this post on Instagram ಇನ್ನು, ಕಲರ್ಸ್ ಕನ್ನಡ ಬಿಡುಗಡೆ ಮಾಡಿದ ಮತ್ತೊಂದು ಪ್ರೋಮೊದಲ್ಲಿ ಸುದೀಪ್, ‘ನಾನು 12 ಸೀಸನ್ಗಳಲ್ಲಿ ಯಾವತ್ತು ಆಫೀಸರ್ ರೀತಿಯಲ್ಲಿ ಬಂದೇ ಇಲ್ಲ. ಬಿಗ್ ಬಾಸ್ ವೇದಿಕೆಯಿಂದ ಒಳ್ಳೆಯದು ಆಗಬೇಕೆಂದರೆ ಪಾಠ ಕಲಿಸುವುದಕ್ಕೆ ನನ್ನ ಅಪ್ಪನ ಆಣೆಗೂ ನನಗೆ ಗೊತ್ತು. ಬಿಗ್ ಬಾಸ್ ಪಕ್ಷಪಾತ ಮಾಡುತ್ತಿದ್ದಾರಾ? ಸ್ಪರ್ಧಿಗಳನ್ನು ಉಳಿಸುವುದಕ್ಕಾಗಿ ನಾವು ವೀಕ್ಷಕರಿಗೆ ಯಾಕೆ ಮೋಸ ಮಾಡುತ್ತಿದ್ದೀವಿ? ಆಸಿಯಾ ಬಿಗ್ ಬಾಸ್ನ ನೆಚ್ಚಿನ ಸ್ಪರ್ಧಿ’ ಎಂದು ಹಲವಾರು ಪ್ರಶ್ನೆಗಳನ್ನು ಮನೆಯವರ ಮುಂದೆ ಇಟ್ಟಿದ್ದಾರೆ.