ಓಪನ್ ರಾಷ್ಟ್ರೀಯ ಅಥ್ಲೆಟಿಕ್ಸ್: ಅನುಷ್ಕಾ ಕೂಟ ದಾಖಲೆ
ನವದೆಹಲಿ: ಹದಿಹರೆಯದ ಹ್ಯಾಮರ್ ಥ್ರೊ ಸ್ಪರ್ಧಿ ಅನುಷ್ಕಾ ಯಾದವ್ ಅವರು 65ನೇ ರಾಷ್ಟ್ರೀಯ ಓಪನ್ ಅಥ್ಲೆಟಿಕ್ ಚಾಂಪಿಯನ್ಷಿಪ್ನ ಮೂರನೇ ದಿನ ಕೂಟ ದಾಖಲೆಯನ್ನು ಸುಧಾರಿಸಿದರು. ರೈಲ್ವೇಸ್ ಪ್ರತಿನಿಧಿಸುತ್ತಿರುವ ಕರ್ನಾಟಕದ ರಮಶ್ರೀ ಜೈನ್ ಜಾವೆಲಿನ್ ಥ್ರೊ ಸ್ಪರ್ಧೆಯಲ್ಲಿ ಚಿನ್ನ ಗೆದ್ದರು.18 ವರ್ಷ ವಯಸ್ಸಿನ ಅನುಷ್ಕಾ ಹ್ಯಾಮರ್ ಅನ್ನು 66.53 ಮೀ. ಎಸೆಯುವ ಮೂಲಕ, ಐದು ವರ

ನವದೆಹಲಿ: ಹದಿಹರೆಯದ ಹ್ಯಾಮರ್ ಥ್ರೊ ಸ್ಪರ್ಧಿ ಅನುಷ್ಕಾ ಯಾದವ್ ಅವರು 65ನೇ ರಾಷ್ಟ್ರೀಯ ಓಪನ್ ಅಥ್ಲೆಟಿಕ್ ಚಾಂಪಿಯನ್ಷಿಪ್ನ ಮೂರನೇ ದಿನ ಕೂಟ ದಾಖಲೆಯನ್ನು ಸುಧಾರಿಸಿದರು. ರೈಲ್ವೇಸ್ ಪ್ರತಿನಿಧಿಸುತ್ತಿರುವ ಕರ್ನಾಟಕದ ರಮಶ್ರೀ ಜೈನ್ ಜಾವೆಲಿನ್ ಥ್ರೊ ಸ್ಪರ್ಧೆಯಲ್ಲಿ ಚಿನ್ನ ಗೆದ್ದರು.18 ವರ್ಷ ವಯಸ್ಸಿನ ಅನುಷ್ಕಾ ಹ್ಯಾಮರ್ ಅನ್ನು 66.53 ಮೀ. ಎಸೆಯುವ ಮೂಲಕ, ಐದು ವರ್ಷ ಹಿಂದೆ ಮಂಜು ಬಾಲಾ ಸ್ಥಾಪಿಸಿದ್ದ 64.42 ಮೀ.ಗಳ ದಾಖಲೆಯನ್ನು ಸುಧಾರಿಸಿದರು. ಒಎನ್ಜಿಸಿಯನ್ನು ಪ್ರತಿನಿಧಿಸುತ್ತಿರುವ ಅವರು ಆರಂಭದಿಂದಲೇ ಅಗ್ರಸ್ಥಾನದಲ್ಲಿದ್ದರು. ಅದನ್ನು ಸುಧಾರಿಸುತ್ತ ಹೋದರು.ಅನುಷ್ಕಾ ವೈಯಕ್ತಿಕ ಶ್ರೇಷ್ಠ ಸಾಧನೆ 67.02 ಮೀ. ಆಗಿದೆ. ಇತ್ತೀಚಿನ ಏಷ್ಯನ್ ಕ್ರೀಡೆಗಳಲ್ಲಿ ಅವರು ಐದನೇ ಸ್ಥಾನ (64.56 ಮೀ.) ಪಡೆದಿದ್ದರು.ರೈಲ್ವೇಸ್ ಪ್ರತಿನಿಧಿಸುತ್ತಿರುವ ಕರ್ನಾಟಕದ ಹೈಜಂಪ್ ಸ್ಪರ್ಧಿ ಜೆಸ್ಸಿ ಸಂದೇಶ್ ಎರಡನೇ ಸ್ಥಾನ ಪಡೆದರು. ಅವರು 2.16 ಮೀ. ಜಿಗಿದರು. ರೈಲ್ವೇಸ್ನ ಇನ್ನೊಬ್ಬ ಅಥ್ಲೀಟ್ ರೋಹಿತ್ (2.19 ಮೀ.) ಅಗ್ರಸ್ಥಾನ ಪಡೆದರು.ಪೋಲ್ವಾಲ್ಟ್ನಲ್ಲಿ ಕರ್ನಾಟಕದ ಜಿ.ಸಿಂಧುಶ್ರೀ (ಜಿಗಿದ ಎತ್ತರ: 3.80 ಮೀ.) ಮೂರನೇ ಸ್ಥಾನ ಗಳಿಸಿದರು. ರೈಲ್ವೇಸ್ನ ಬರನಿಕಾ ಇಳಂಗೋವನ್ (4.10 ಮೀ.) ಮತ್ತು ಮರಿಯಾ ಜೈಸನ್ (3.90 ಮೀ.) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಗಳಿಸಿದರು.