ದೀಪ್ಕೆ ಗೈರಿನಲ್ಲಿ ಸಿಜೆಪಿ ಪ್ರತಿಭಟನೆ ನೇತೃತ್ವ ವಹಿಸಿರುವ ಅಜಿಂಕ್ಯ ಶಿಂಧೆ ಯಾರು?
ರಾಷ್ಟ್ರರಾಜಧಾನಿ ನವದೆಹಲಿಯಲ್ಲಿ ಎಸ್ಐಆರ್ ರದ್ಧತಿ ಮತ್ತು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ನಡೆಯುತ್ತಿರುವ ಪ್ರತಿಭಟನೆಯ ಕಾರಣ ಕಾಕ್ರೋಚ್ ಜನತಾ ಪಾರ್ಟಿ(ಸಿಜೆಪಿ) ಸಂಸ್ಥಾಪಕ ಅಭಿಜಿತ್ ದೀಪ್ಕೆ, ಸೌರವ್ ದಾಸ್ ಮತ್ತು ಅಶುತೋಷ್ ರಾಂಕಾ ಅವರನ್ನು ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯಲಾಗಿದೆ. ಪೊ

ರಾಷ್ಟ್ರರಾಜಧಾನಿ ನವದೆಹಲಿಯಲ್ಲಿ ಎಸ್ಐಆರ್ ರದ್ಧತಿ ಮತ್ತು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ನಡೆಯುತ್ತಿರುವ ಪ್ರತಿಭಟನೆಯ ಕಾರಣ ಕಾಕ್ರೋಚ್ ಜನತಾ ಪಾರ್ಟಿ(ಸಿಜೆಪಿ) ಸಂಸ್ಥಾಪಕ ಅಭಿಜಿತ್ ದೀಪ್ಕೆ, ಸೌರವ್ ದಾಸ್ ಮತ್ತು ಅಶುತೋಷ್ ರಾಂಕಾ ಅವರನ್ನು ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯಲಾಗಿದೆ. ಪೊಲೀಸ್ ವಶಕ್ಕೆ ಒಳಗಾಗುವ ಮೊದಲು ಮಾತನಾಡಿರುವ ದೀಪ್ಕೆ, ‘ಜಂತರ್ ಮಂತರ್ ಹೋರಾಟದ ನೇತೃತ್ವವನ್ನು ಅಜಿಂಕ್ಯ ಶಿಂಧೆ ವಹಿಸಿಕೊಳ್ಳಲಿದ್ದಾರೆ. ಸಿಜೆಪಿ ಕಾರ್ಯಕರ್ತರು ಅವರ ನೇತೃತ್ವದಲ್ಲಿ ಒಗ್ಗೂಡಿ ಪ್ರತಿಭಟನೆಯನ್ನು ಮುನ್ನಡೆಸಬೇಕು’ ಮನವಿ ಮಾಡಿದ್ದಾರೆ.ಅಜಿಂಕ್ಯ ಶಿಂದೆ ಹೆಗಲಿಗೆ ಜಂತರ್ ಮಂತರ್ ಪ್ರತಿಭಟನೆಯ ನೇತೃತ್ವ: ದೀಪ್ಕೆ ಘೋಷಣೆಯಾರು ಈ ಅಜಿಂಕ್ಯ ಶಿಂಧೆ ? ಮಹಾರಾಷ್ಟ್ರ ಮೂಲದ ಸಾಮಾಜಿಕ ಹಾಗೂ ರಾಜಕೀಯ ಹೋರಾಟಗಾರರಾಗಿ ಗುರುತಿಸಿಕೊಂಡಿರುವ 35 ವರ್ಷದ ಅಜಿಂಕ್ಯ ಶಿಂಧೆ, ಕಾಕ್ರೋಚ್ ಜನತಾ ಪಾರ್ಟಿಯ(ಸಿಜೆಪಿ) ಪ್ರಮುಖ ನಾಯಕರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ. ಮಹಾರಾಷ್ಟ್ರದ ಲಾತೂರ್ನ ಕೃಷಿ ಹಿನ್ನಲೆಯ ಕುಟುಂಬದಲ್ಲಿ ಜನಿಸಿರುವ ಅಜಿಂಕ್ಯ ಶಿಂಧೆ, ಎಂಜಿನಿಯರಿಂಗ್ನಲ್ಲಿ ಉನ್ನತ ಶಿಕ್ಷಣ ಪೂರ್ಣಗೊಳಿಸಿದ್ದಾರೆ. ರಾಯಗಡ ಜಿಲ್ಲೆಯ ಲೋನೇರೆಯ ಡಾ. ಬಾಬಾಸಾಹೇಬ್ ಅಂಬೇಡ್ಕರ್ ತಾಂತ್ರಿಕ ವಿಶ್ವವಿದ್ಯಾಲಯದಿಂದ ಬ್ಯಾಚುಲರ್ ಆಫ್ ಟೆಕ್ನಾಲಜಿ(ಬಿ.ಟೆಕ್) ಪದವಿ ಪಡೆದಿದ್ದಾರೆ. ಪದವಿಯ ನಂತರ, ಪುಣೆಯಲ್ಲಿರುವ ಅಂತರರಾಷ್ಟ್ರೀಯ ಐಟಿ ಸಂಸ್ಥೆಯಲ್ಲಿ ಕಂಪ್ಯೂಟರ್ ಸೈನ್ಸ್ ವೃತ್ತಿಪರರಾಗಿ ಕಾರ್ಪೊರೇಟ್ ವೃತ್ತಿಜೀವನವನ್ನು ಆರಂಭಿಸಿದರು. ನಂತರ ಪೂರ್ಣಾವಧಿ ರಾಜಕೀಯ ಸಂಘಟನೆ ಮತ್ತು ತಳಮಟ್ಟದ ಚಳವಳಿಗಳತ್ತ ಮುಖ ಮಾಡಿದರು.ಅಜಿಂಕ್ಯ ಶಿಂಧೆ ಅವರು ಆಮ್ ಆದ್ಮಿ ಪಾರ್ಟಿ(ಎಎಪಿ) ಜತೆ ನಿಕಟವಾಗಿ ಗುರುತಿಸಿಕೊಂಡಿದ್ದಾರೆ. ಅವರ ರಾಜಕೀಯ ಪಯಣ ಕೂಡ ಎಎಪಿ ಮೂಲಕ ಆರಂಭವಾಯಿತು. ಎಎಪಿಯಲ್ಲಿ ಹಲವಾರು ಪ್ರಮುಖ ಜವಾಬ್ದಾರಿಗಳನ್ನು ನಿರ್ವಹಿಸಿರುವ ಅವರು ಪಿಂಪ್ರಿ-ಚಿಂಚ್ವಡ್ನಲ್ಲಿ ಪಕ್ಷದ ಸಂಚಾಲಕರಾಗಿದ್ದರು. ಮಹಾರಾಷ್ಟ್ರ ಎಎಪಿ ಯುವ ಘಟಕದ ಸಂಚಾಲಕರಾಗಿ ಹಾಗೂ ಸೋಶಿಯಲ್ ಮೀಡಿಯಾ ಸಂಯೋಜಕರಾಗಿ ಕಾರ್ಯನಿರ್ವಹಿಸಿದ್ದಾರೆ. ಗೋವಾದಲ್ಲಿ ಎಎಪಿ ಪಕ್ಷದ ಚುನಾವಣಾ ಪ್ರಚಾರ ನಿರ್ವಹಣೆಯ ಜವಾಬ್ದಾರಿ ಹೊಂದಿದ್ದ ಅವರು, 2016ರಲ್ಲಿ ಮೊದಲ ಬಾರಿಗೆ ಅಭಿಜಿತ್ ದೀಪ್ಕೆ ಅವರನ್ನು ಭೇಟಿ ಮಾಡಿದ್ದರು. 2026ರ ಆಗಸ್ಟ್ನಲ್ಲಿ ಅಭಿಜಿತ್ ದೀಪ್ಕೆ ಅವರು, ಶಿಂಧೆ ಅವರನ್ನು ಸಿಜೆಪಿಯ ರಾಷ್ಟ್ರೀಯ ಕಾರ್ಯಕಾರಿ ಸಮಿತಿಗೆ ಸೇರ್ಪಡೆಗೊಳಿಸಿದ್ದರು. ಸಿಜೆಪಿಯ 'ರಾಷ್ಟ್ರೀಯ ಸಂಘಟನಾ ಉಸ್ತುವಾರಿ’ಯಾಗಿರುವ ಶಿಂಧೆ, ವಿವಿಧ ರಾಜ್ಯಗಳಲ್ಲಿ ಸಿಜೆಪಿ ಕಾರ್ಯಕರ್ತರನ್ನು ಸಂಘಟಿಸುವುದು, ಪ್ರಾದೇಶಿಕ ಘಟಕಗಳನ್ನು ಬಲಪಡಿಸುವ ಕೆಲಸ ನಿರ್ವಹಿಸುತ್ತಿದ್ದರು. 'ಸ್ಕೂಲ್ ಠೀಕ್ ಕರೋ' ಅಭಿಯಾನ, ಮುಂಬೈ ಪ್ರತಿಭಟನೆ ಸೇರಿದಂತೆ ಸಿಜೆಪಿಯ ಹಲವಾರು ಪ್ರಮುಖ ಅಭಿಯಾನಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಶಿಂಧೆ, ಇದೀಗ ಜಂತರ್ ಮಂತರ್ನಲ್ಲಿ ನಡೆಯುತ್ತಿರುವ ಸಿಜೆಪಿಯ ಪ್ರತಿಭಟನೆಯ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.