ಇಂದು ನಿರ್ಧಾರದ ಸಮಯ: ಮಂಜನಿಗೆ ರೆಡ್ ಕಾರ್ಡ್ ಕೊಟ್ಟು ಕಳಿಸುತ್ತಾರಾ ಸುದೀಪ್?
ಇಂದಿನ ವಾರದ ಪಂಚಾಯ್ತಿ ನಡೆಸಲು ಬಿಗ್ ಬಾಸ್ ವೇದಿಕೆಗೆ ಕಿಚ್ಚ ಸುದೀಪ್ ಅವರ ಆಗಮನವಾಗಿದೆ. ಈ ವಾರದಲ್ಲಿ ಬಿಗ್ ಬಾಸ್ ಮನೆಯಲ್ಲಿ ನಡೆದ ಘಟನೆಗಳ ಬಗ್ಗೆ ಸುದೀಪ್ ಅವರು ಮಾತನಾಡಲಿದ್ದಾರೆ. ಅದರೊಂದಿಗೆ, ‘ಇಂದು ಚರ್ಚೆಯ ಬದಲು, ತುಂಬಾ ನಿರ್ಧಾರಗಳನ್ನು ತಗೋಬೇಕಿದೆ’ ಎಂದಿದ್ದಾರೆ. ಕಲರ್ಸ್ ಕನ್ನಡ ಸಾಮಾಜಿಕ ಮಾಧ್ಯಮದಲ್ಲಿ ಪ್ರೋಮೊವೊಂದನ್ನು ಹಂಚಿಕೊಂಡಿದೆ. ಅದರಲ್ಲಿ ಸುದೀಪ್

ಇಂದಿನ ವಾರದ ಪಂಚಾಯ್ತಿ ನಡೆಸಲು ಬಿಗ್ ಬಾಸ್ ವೇದಿಕೆಗೆ ಕಿಚ್ಚ ಸುದೀಪ್ ಅವರ ಆಗಮನವಾಗಿದೆ. ಈ ವಾರದಲ್ಲಿ ಬಿಗ್ ಬಾಸ್ ಮನೆಯಲ್ಲಿ ನಡೆದ ಘಟನೆಗಳ ಬಗ್ಗೆ ಸುದೀಪ್ ಅವರು ಮಾತನಾಡಲಿದ್ದಾರೆ. ಅದರೊಂದಿಗೆ, ‘ಇಂದು ಚರ್ಚೆಯ ಬದಲು, ತುಂಬಾ ನಿರ್ಧಾರಗಳನ್ನು ತಗೋಬೇಕಿದೆ’ ಎಂದಿದ್ದಾರೆ. ಕಲರ್ಸ್ ಕನ್ನಡ ಸಾಮಾಜಿಕ ಮಾಧ್ಯಮದಲ್ಲಿ ಪ್ರೋಮೊವೊಂದನ್ನು ಹಂಚಿಕೊಂಡಿದೆ. ಅದರಲ್ಲಿ ಸುದೀಪ್ ಅವರು ವೇದಿಕೆಗೆ ಆಗಮಿಸಿ, ‘ನಾವು ವಾಸ ಮಾಡುವ ಮನೆ ಚೆನ್ನಾಗಿ ಕಾಣಿಸುವುದಕ್ಕೆ ಒಂದು ಗಿಡ ತಂದು ಇಡುತ್ತೇವೆ. ಆದರೆ, ಆ ಗಿಡ ಅಡ್ಡಾದಿಡ್ಡಿ ಬೆಳೆದು ಮನೆಯನ್ನು ಒಡೆಯೋದಕ್ಕೆ ಹೋದರೆ... ಈಗ ಹುಟ್ಟುವ ಪ್ರಶ್ನೆ ಗಿಡನಾ? ಮನೆನಾ?. ಇವತ್ತು ಚರ್ಚೆಗಿಂತ ಜಾಸ್ತಿ, ನಿರ್ಧಾರಗಳನ್ನು ತಗೋಬೇಕಿದೆ’ ಎಂದಿದ್ದಾರೆ. View this post on Instagram ಕಿಚ್ಚ ಸುದೀಪ್ ಅವರು ಹೀಗೆ ಕೇಳೋದಕ್ಕೆ ಒಂದು ಕಾರಣವಿದೆ. ಈ ವಾರ ಬಿಗ್ ಬಾಸ್ ಮನೆ ಮಂದಿಗೆ ರಾಕ್ಷಸರು ಹಾಗೂ ಗಂಧರ್ವರು ಎಂಬ ಟಾಸ್ಕ್ ನೀಡಿದ್ದರು. ಈ ಆಟದ ಮಧ್ಯೆ ಸ್ಪರ್ಧಿಗಳು ಹಲವು ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಮಂಜ ಅವರ ಅವಾಚ್ಯ ಶಬ್ದಗಳ ಸದ್ದು ಇಡೀ ಮನೆಯಷ್ಟೇ ಅಲ್ಲದೆ ವೀಕ್ಷಕರಿಗೂ ಕಿರಿಕಿರಿ ಉಂಟು ಮಾಡಿದೆ.ಮಂಜ ಅವರ ಮಾತು, ವರ್ತನೆ ಸಹ ಸ್ಪರ್ಧಿಗಳಿಗಿಂತ ಹೆಚ್ಚಾಗಿ ವೀಕ್ಷಕರಿಗೆ ಬೇಸರ ತಂದಿದೆ. ಹೀಗಾಗಿ ಸಾಮಾಜಿಕ ಮಾಧ್ಯಮದಲ್ಲಿ ಹಲವರು, ‘ಮಂಜಗೆ ರೆಡ್ ಕಾರ್ಡ್ ಕೊಟ್ಟು ಬಿಗ್ ಬಾಸ್ ಮನೆಯಿಂದ ಹೊರ ಹಾಕಿ’ ಎಂದು ಹೇಳುತ್ತಿದ್ದಾರೆ. ಕೆಲವರಂತೂ ‘ಈ ಬಾರಿಯ ಬಿಗ್ ಬಾಸ್ ಅನ್ನು ನೋಡುವುದಕ್ಕೇ ಆಗುತ್ತಿಲ್ಲ’ ಎಂದು ಬೇಸರ ಹೊರ ಹಾಕಿದ್ದಾರೆ. ಇನ್ನು, ಇಂದಿನ ವಾರದ ಪಂಚಾಯ್ತಿಯಲ್ಲಿ ಸುದೀಪ್ ಅವರು, ಮಂಜನನ್ನು ಬಿಗ್ ಬಾಸ್ ಮನೆಯಿಂದ ಹೊರ ಹಾಕುತ್ತಾರಾ ಅಥವಾ ಬೇರೆ ಶಿಕ್ಷೆ ವಿಧಿಸುತ್ತಾರಾ ಎಂದು ಗೊತ್ತಾಗಲಿದೆ.