‘ಜಿರಳೆ’ಗೆ ಪೊಲೀಸ್ ಸರ್ಪಗಾವಲು: ಜಂತರ್ ಮಂತರ್ ಬಳಿ 500 ಪ್ರತಿಭಟನಾಕಾರರು ಪೊಲೀಸರ ವಶಕ್ಕೆ
ದೇಶದಾದ್ಯಂತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ವೇಳೆ ಭಾರಿ ಅಕ್ರಮಗಳು ನಡೆದಿವೆ ಎಂದು ಆರೋಪಿಸುತ್ತಿರುವ ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ) ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಪಟ್ಟು ಹಿಡಿದಿದೆ. ಈ ಹಿನ್ನೆಲೆಯಲ್ಲಿ ಇಂದು ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸಲು ಉದ್ದೇಶಿಸಿದೆ. ಅದನ್ನು ಹತ್ತಿ

ದೇಶದಾದ್ಯಂತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ವೇಳೆ ಭಾರಿ ಅಕ್ರಮಗಳು ನಡೆದಿವೆ ಎಂದು ಆರೋಪಿಸುತ್ತಿರುವ ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ) ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಪಟ್ಟು ಹಿಡಿದಿದೆ. ಈ ಹಿನ್ನೆಲೆಯಲ್ಲಿ ಇಂದು ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸಲು ಉದ್ದೇಶಿಸಿದೆ. ಅದನ್ನು ಹತ್ತಿಕ್ಕಲು ರಾಷ್ಟ್ರ ರಾಜಧಾನಿಯಾದ್ಯಂತ ಪೊಲೀಸ್ ಸರ್ಪಗಾವಲು ಹಾಕಲಾಗಿದೆ. ದೆಹಲಿ ಸಂಪರ್ಕಿಸುವ ಅಂತರರಾಜ್ಯ ಗಡಿಗಳಲ್ಲಿ ಗಡಿ ಭದ್ರತಾ ಪಡೆ ನಿಯೋಜಿಸಿದ್ದರೆ, ಮೆಟ್ರೊ ರೈಲು, ಎಕ್ಸ್ಪ್ರೆಸ್ ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ. ಇಂಟರ್ನೆಟ್ ಸೇವೆಯನ್ನೂ ಸ್ಥಗಿತಗೊಳಿಸಿದ್ದು, ದೆಹಲಿ ಸಂಪೂರ್ಣವಾಗಿ ಪೊಲೀಸರ ‘ಹಿಡಿತ’ದಲ್ಲಿದೆ.ಪ್ರತಿಭಟನಾ ಸ್ಥಳಕ್ಕೆ ಬಂದ 500 ಮಂದಿ ಪೊಲೀಸ್ ವಶಕ್ಕೆಹಲವು ಗುಂಪುಗಳಾಗಿ ಬಂದ ಸುಮಾರು 500 ಜನರನ್ನು ವಿವಿಧೆಡೆ ವಶಕ್ಕೆ ಪಡೆಯಲಾಗಿದೆ. ಅದರಲ್ಲಿ ಸುಮಾರು 50 ಮಂದಿ ಅಪರಾಧದ ಹಿನ್ನೆಲೆ ಹೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ದೆಹಲಿ–ಹರಿಯಾಣದ ಸಿಂಘು ಗಡಿಯಲ್ಲಿ ಭದ್ರತೆ#WATCH | Delhi: Security checking intensified at Singhu Border (Delhi-Haryana border) ahead of the Cockroach Janta Party (CJP) protest today at Jantar Mantar. pic.twitter.com/d6OEefPDmH— ANI (@ANI) October 10, 2026 ಸಂಸತ್ ಭವನ ರಸ್ತೆಯಲ್ಲಿ ಪೊಲೀಸ್ ಬಿಗಿ ಭದ್ರತೆ#WATCH | Delhi: Heavy security has been deployed, and barricades have been put up at the Jantar Mantar and Parliament Street areas ahead of the protest today. pic.twitter.com/6yzKOiOw6b— ANI (@ANI) October 10, 2026 ರಾತ್ರೋರಾತ್ರಿ ಹಲವರು ಪೊಲೀಸ್ ವಶಕ್ಕೆನವದೆಹಲಿ: ಕಾಕ್ರೋಚ್ ಜನತಾ ಪಕ್ಷವು (ಸಿಜೆಪಿ) ಜಂತರ್ ಮಂತರ್ನಲ್ಲಿ ಇಂದು ಬೃಹತ್ ಪ್ರತಿಭಟನೆಗೆ ಸಜ್ಜಾಗಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ರಾಷ್ಟ್ರ ರಾಜಧಾನಿಯಾದ್ಯಂತ ಅಪರಾಧ ಪ್ರಕರಣಗಳ ಹಿನ್ನೆಲೆಯುಳ್ಳ ಹಲವರನ್ನು ವಶಕ್ಕೆ ಪಡೆದಿರುವುದಾಗಿ ದೆಹಲಿ ಪೊಲೀಸ್ ಮೂಲಗಳು ತಿಳಿಸಿವೆ.ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಭದ್ರತಾ ವ್ಯವಸ್ಥೆಯನ್ನು ಬಿಗಿಗೊಳಿಸಲಾಗಿದ್ದು, 15 ಜಿಲ್ಲೆಗಳಾದ್ಯಂತ ಅಪರಾಧ ಹಿನ್ನೆಲೆ ಇರುವ ಸುಮಾರು 30–40 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ ಹೇಳಿವೆ.ಮೆಟ್ರೊ ಬಂದ್: ಸುಪ್ರೀಂ ಕೋರ್ಟ್ ಕಳವಳಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಸಿಜೆಪಿ ಇತರೆ ಸಂಘಟನೆಗಳು ಕರೆಕೊಟ್ಟಿರುವ ಪ್ರತಿಭಟನೆ ನಿಯಂತ್ರಣಕ್ಕೆ ದೆಹಲಿಯ 57 ಮೆಟ್ರೊ ನಿಲ್ದಾಣಗಳನ್ನು ಮುಚ್ಚಲು ಮುಂದಾಗಿರುವ ಸರ್ಕಾರದ ಕ್ರಮದ ಬಗ್ಗೆ ಸುಪ್ರೀಂ ಕೋರ್ಟ್ ತೀವ್ರ ಕಳವಳ ವ್ಯಕ್ತಪಡಿಸಿದೆ.ಜಂತರ್ ಮಂತರ್ನಲ್ಲಿ ನಿಷೇಧಾಜ್ಞೆಸಿಜೆಪಿ ಪ್ರತಿಭಟನೆಗೆ ದೆಹಲಿ ಪೊಲೀಸರು ಶುಕ್ರವಾರ ಅನುಮತಿ ನಿರಾಕರಿಸಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ನವದೆಹಲಿಯಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.‘ಜಿರಳೆ’ ತಡೆಗೆ ಪೊಲೀಸ್ ಬೇಲಿ https://t.co/FhWLzeVEKJ— Prajavani (@prajavani) October 10, 2026 ಭದ್ರತೆಗೆ 20 ಸಾವಿರ ಸಿಬ್ಬಂದಿಸಿಇಸಿ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಒತ್ತಾಯಿಸಿ ಭಾರಿ ಪ್ರತಿಭಟನೆ ನಡೆಸಲು ಸಿಜೆಪಿ ಹಾಗೂ ವಿವಿಧ ವಿದ್ಯಾರ್ಥಿ ಸಂಘಟನೆಗಳು ಸಜ್ಜುಗೊಂಡಿರುವ ಬೆನ್ನಲ್ಲೇ, ಭದ್ರತೆಗಾಗಿ 20 ಸಾವಿರಕ್ಕೂ ಹೆಚ್ಚು ಸಿಬ್ಬಂದಿ ನಿಯೋಜಿಸಲಾಗಿದೆ.ನಾಳೆ ಸಿಜೆಪಿ ಪ್ರತಿಭಟನೆ: ಭದ್ರತೆಗೆ 20 ಸಾವಿರ ಸಿಬ್ಬಂದಿ