ಬರ ಹೊಡೆತದಿಂದ ಸೀತಾಫಲ ಇಳುವರಿ ಕುಸಿತ: ಬೆಳೆಗಾರರಿಗೆ ಸಂಕಷ್ಟ
ಬಂಗಾರಪೇಟೆ: ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ಪರ್ಯಾಯ ಆದಾಯ ಮೂಲಕ್ಕೂ ಬರದ ಕರಿನೆರಳು ಬಿದ್ದಿದೆ. ಮಳೆ ಕೊರತೆ, ತಾಪಮಾನ ಹೆಚ್ಚಳದಿಂದಾಗಿ ನೈಸರ್ಗಿಕವಾಗಿ ಸಿಗುತ್ತಿದ್ದ ಸೀತಾಫಲ ಇಳುವರಿ ಕುಸಿದಿದ್ದು, ಬೆಳೆಗಾರರು ಹಾಗೂ ಗ್ರಾಮೀಣರು ಸಂಕಷ್ಟಕ್ಕೆ ಸಿಲುಕಿದ್ದಾರೆ.ತಾಲ್ಲೂಕಿನ ಕಾಮಸಮುದ್ರ, ಬೂದಿಕೋಟೆ, ಕರಪನಹಳ್ಳಿ, ಗುಲ್ಲಹಳ್ಳಿ, ಬಲಮಂದೆ, ದೋಣಿಮಡಗು, ತೊಪ್ಪನಹಳ್ಳಿ ಹಾಗ

ಬಂಗಾರಪೇಟೆ: ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ಪರ್ಯಾಯ ಆದಾಯ ಮೂಲಕ್ಕೂ ಬರದ ಕರಿನೆರಳು ಬಿದ್ದಿದೆ. ಮಳೆ ಕೊರತೆ, ತಾಪಮಾನ ಹೆಚ್ಚಳದಿಂದಾಗಿ ನೈಸರ್ಗಿಕವಾಗಿ ಸಿಗುತ್ತಿದ್ದ ಸೀತಾಫಲ ಇಳುವರಿ ಕುಸಿದಿದ್ದು, ಬೆಳೆಗಾರರು ಹಾಗೂ ಗ್ರಾಮೀಣರು ಸಂಕಷ್ಟಕ್ಕೆ ಸಿಲುಕಿದ್ದಾರೆ.ತಾಲ್ಲೂಕಿನ ಕಾಮಸಮುದ್ರ, ಬೂದಿಕೋಟೆ, ಕರಪನಹಳ್ಳಿ, ಗುಲ್ಲಹಳ್ಳಿ, ಬಲಮಂದೆ, ದೋಣಿಮಡಗು, ತೊಪ್ಪನಹಳ್ಳಿ ಹಾಗೂ ಸುತ್ತಮುತ್ತಲ ಬೆಟ್ಟಗುಡ್ಡಗಳ ಸಾಲಿನಲ್ಲಿ ಸಹಜವಾಗಿ ಬೆಳೆಯುವ ಸೀತಾಫಲ ಮರಗಳು ಸ್ಥಳೀಯರಿಗೆ ಹಬ್ಬದ ಋತುವಿನಲ್ಲಿ ಕೈತುಂಬ ಕಾಸು ತಂದುಕೊಡುತ್ತಿದ್ದವು. ಆದರೆ, ಈ ವರ್ಷ ಮಳೆ ಇಲ್ಲದಿದ್ದರಿಂದ ಮರಗಳಲ್ಲಿ ಹೂವು ಕಟ್ಟುವ ಹಂತದಲ್ಲೇ ಪೆಟ್ಟುಬಿದ್ದಿದೆ.ಆಗಸ್ಟ್ನಿಂದ ಅಕ್ಟೋಬರ್ವರೆಗೂ ಸೀತಾಫಲ ಹಣ್ಣು ಸಿಗುತ್ತಿದ್ದವು. ₹60ರಿಂದ ₹100ರವರೆಗೂ ಒಂದು ಕೆ.ಜಿ ಮಾರಾಟ ಆಗುತ್ತಿತ್ತು. ಕುಟುಂಬದ ನಿರ್ವಹಣೆ, ಗೌರಿ–ಗಣೇಶ, ದಸರಾ, ದೀಪಾವಳಿ ಹಬ್ಬಗಳ ವೆಚ್ಚಕ್ಕೆ ಈ ಹಣವೇ ಆಸರೆ. ಆದರೆ ಈ ಬಾರಿ ಗಿಡಗಳಲ್ಲಿ ಕಾಯಿಗಳೇ ಕಟ್ಟಿಲ್ಲ, ಕಟ್ಟಿದ ಸಣ್ಣ ಕಾಯಿಗಳು ಮಳೆಯಿಲ್ಲದೆ ಒಣಗಿ ಉದುರುತ್ತಿವೆ ಎಂದು ಗ್ರಾಮೀಣರು ಅಳಲು ತೋಡಿಕೊಂಡಿದ್ದಾರೆ.ಕೇವಲ ಬೆಟ್ಟಗುಡ್ಡಗಳ ಕಾಡು ಗಿಡಗಳಷ್ಟೇ ಅಲ್ಲದೆ, ವಾಣಿಜ್ಯಿಕವಾಗಿ ಸೀತಾಫಲ (ಬಾಲಾನಗರ ಹಾಗೂ ಎನ್.ಎಮ್.ಕೆ ತಳಿಗಳು) ಬೆಳೆದಿದ್ದ ರೈತರ ಪರಿಸ್ಥಿತಿಯೂ ಭಿನ್ನವಾಗೇನೂ ಇಲ್ಲ. ಅಂತರ್ಜಲ ಮಟ್ಟ ಕುಸಿದ ಪರಿಣಾಮ ಬೋರ್ವೆಲ್ಗಳಲ್ಲಿ ನೀರು ಕಡಿಮೆಯಾಗಿ ತೋಟಗಳಿಗೆ ನೀರುಣಿಸಲು ರೈತರು ಹರಸಾಹಸ ಪಡುತ್ತಿದ್ದಾರೆ. ನೀರಿನ ಅಭಾವದಿಂದ ಹಣ್ಣಿನ ಗಾತ್ರ ಸಣ್ಣದಾಗುತ್ತಿದ್ದು, ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಸಿಗುತ್ತಿಲ್ಲ.ಪ್ರತಿ ವರ್ಷವೂ ಬಂಗಾರಪೇಟೆ, ಕೆಜಿಎಫ್ ಮಾರ್ಗವಾಗಿ ಬೆಂಗಳೂರು, ಚೆನ್ನೈ ಹಾಗೂ ಕೃಷ್ಣಗಿರಿ ಮಾರುಕಟ್ಟೆಗಳಿಗೆ ಟನ್ಗಟ್ಟಲೆ ಸೀತಾಫಲ ಸರಬರಾಜಾಗುತ್ತಿತ್ತು. ಆದರೆ ಈ ಬಾರಿ ಶೇ 60ರಿಂದ 70ರಷ್ಟು ಇಳುವರಿ ಕುಸಿದಿರುವುದರಿಂದ ವ್ಯಾಪಾರಿಗಳೂ ಸ್ಥಳೀಯ ಮಾರುಕಟ್ಟೆಯತ್ತ ಸುಳಿಯುತ್ತಿಲ್ಲ. ಪರಿಣಾಮವಾಗಿ, ಕೃಷಿ ಕಾರ್ಮಿಕರು ಮತ್ತು ಸಣ್ಣ ವ್ಯಾಪಾರಿಗಳ ದಿನನಿತ್ಯದ ಆದಾಯಕ್ಕೂ ಧಕ್ಕೆಯಾಗಿದೆ.ಬರದಿಂದಾಗಿ ಮುಖ್ಯ ಬೆಳೆಗಳಾದ ರಾಗಿ, ನೆಲಕಡಲೆ ನಷ್ಟದಲ್ಲಿದ್ದರೆ, ಕೊನೆ ಪಕ್ಷ ಸೀತಾಫಲದಿಂದಲಾದರೂ ಒಂದಷ್ಟು ನೆರವು ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದ ಕಾಡಂಚಿನ ಭಾಗದ ರೈತರಿಗೆ ಈಗ ಪ್ರಕೃತಿಯ ವಿಕೋಪ ಭಾರಿ ಹೊಡೆತ ನೀಡಿದೆ. ತೋಟಗಾರಿಕೆ ಇಲಾಖೆ, ಸರ್ಕಾರ ತಕ್ಷಣವೇ ಸ್ಪಂದಿಸಿ ಬರದಿಂದ ಕಂಗಾಲಾಗಿರುವ ರೈತರಿಗೆ ಸೂಕ್ತ ಪರಿಹಾರ ಹಾಗೂ ಪರ್ಯಾಯ ಜೀವನಾಧಾರ ಯೋಜನೆ ರೂಪಿಸಬೇಕು ಎಂಬುದು ತಾಲ್ಲೂಕಿನ ಜನರ ಒಕ್ಕೊರಲ ಆಗ್ರಹವಾಗಿದೆ.ಅಪ್ಪೋಜಿರಾವ್, ತಾಲ್ಲೂಕು ರೈತ ಸಂಘದ ಅಧ್ಯಕ್ಷಕರಡಿ, ಕೋತಿ, ಪಕ್ಷಿಗಳಿಗೆ ಸೀತಾಫಲ ಆಹಾರವಾಗಿತ್ತು. ಬರದಿಂದ ಫಸಲು ಇಲ್ಲದಿರುವುದರಿಂದ ಕಾಡು ಪ್ರಾಣಿಗಳು ಆಹಾರ ಅರಸಿ ಹಳ್ಳಿಗಳಿಗೆ, ತೋಟಗಳಿಗೆ ನುಗ್ಗುತ್ತಿವೆ 261010-18-876121675