ಇಂಧನ ಕದನವಿ ರಾಮಕ್ಕೆ ಒಪ್ಪಿದ ರಷ್ಯಾ–ಉಕ್ರೇನ್: ಅಮೆರಿಕ ಅಧ್ಯಕ್ಷ ಟ್ರಂಪ್ ಘೋಷಣೆ
ವಾಷಿಂಗ್ಟನ್ : ರಷ್ಯಾ ಮತ್ತು ಉಕ್ರೇನ್ ‘ಇಂಧನ ಕದನ ವಿರಾಮ’ಕ್ಕೆ ಒಪ್ಪಿಕೊಂಡಿವೆ. ತಕ್ಷಣವೇ ಕದನವಿರಾಮ ಜಾರಿ ಬರುತ್ತದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾನುವಾರ ಹೇಳಿದ್ದಾರೆ.ಆದರೆ ಟ್ರಂಪ್ ಅವರ ಈ ಏಕಪಕ್ಷೀಯ ಪ್ರಕಟಣೆಗೆ ಆಶ್ಚರ್ಯ ವ್ಯಕ್ತಪಡಿಸಿರುವ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ, ‘ನನಗಿದು ಹೊಸ ಸುದ್ದಿ‘ ಎಂದು ಹೇಳ

ವಾಷಿಂಗ್ಟನ್ : ರಷ್ಯಾ ಮತ್ತು ಉಕ್ರೇನ್ ‘ಇಂಧನ ಕದನ ವಿರಾಮ’ಕ್ಕೆ ಒಪ್ಪಿಕೊಂಡಿವೆ. ತಕ್ಷಣವೇ ಕದನವಿರಾಮ ಜಾರಿ ಬರುತ್ತದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾನುವಾರ ಹೇಳಿದ್ದಾರೆ.ಆದರೆ ಟ್ರಂಪ್ ಅವರ ಈ ಏಕಪಕ್ಷೀಯ ಪ್ರಕಟಣೆಗೆ ಆಶ್ಚರ್ಯ ವ್ಯಕ್ತಪಡಿಸಿರುವ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ, ‘ನನಗಿದು ಹೊಸ ಸುದ್ದಿ‘ ಎಂದು ಹೇಳಿದ್ದಾರೆ.ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು ‘ಕದನ ವಿರಾಮವನ್ನು ಮುರಿಯಬೇಡಿ’ ಎಂದೂ ಹೇಳಿದ್ದಾರೆ. ಶ್ವೇತಭವನವು ಈ ಬಗ್ಗೆ ಅಧಿಕೃತ ಮಾಹಿತಿ ನೀಡಿಲ್ಲ. ಕದನವಿರಾಮದ ಷರತ್ತುಗಳು ಅಥವಾ ನಿಯಮಗಳ ಬಗ್ಗೆ ಯಾವುದೇ ಮಾಹಿತಿಯನ್ನು ಅವರು ನೀಡಿಲ್ಲ. ಆದರೆ ಈ ಕುರಿತು ರಷ್ಯಾದಿಂದ ತಕ್ಷಣಕ್ಕೆ ಯಾವುದೇ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ.‘ರಷ್ಯಾದಲ್ಲಿನ ಡೀಸೆಲ್ ಸಂಪನ್ಮೂಲದ ಮೇಲೆ ದಾಳಿ ಮಾಡುವ ಮೂಲಕ, ಜಾಗತಿಕವಾಗಿ ಡೀಸೆಲ್ ಕೊರತೆ ಉಂಟಾಗಲು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಕಾರಣ’ ಎಂದು ಟ್ರಂಪ್ ಶನಿವಾರ ಆರೋಪಿಸಿದ್ದರು. ಯುದ್ಧದ ಸಂದರ್ಭದಲ್ಲಿ ರಷ್ಯಾ ಮತ್ತು ಉಕ್ರೇನ್ ಪರಸ್ಪರರ ಇಂಧನ ಸೌಕರ್ಯದ ಮೇಲೆ ಪದೇ ಪದೇ ದಾಳಿ ನಡೆಸಿವೆ.