ದಸರಾ ಕ್ರೀಡಾಕೂಟಕ್ಕೆ ಚಾಲನೆ ನೀಡಿದ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ
ಮೈಸೂರು: 'ಸಿ.ಎಂ.ಕಪ್' ದಸರಾ ಕ್ರೀಡಾಕೂಟಕ್ಕೆ ಇಲ್ಲಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಭಾನುವಾರ ಸಂಜೆ ಸಂಭ್ರಮದ ಚಾಲನೆ ದೊರೆಯಿತು.ಕ್ರೀಡಾ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಕ್ರೀಡಾ ಜ್ಯೋತಿ ಸ್ವೀಕರಿಸಿ ಚಾಲನೆ ನೀಡಿದರು. ಕಾಮನ್ ವೆಲ್ತ್ ಕ್ರೀಡಾಕೂಟದ ಕಂಚಿನ ಪದಕ ವಿಜೇತೆ ಕೆ.ಎಸ್. ಶಿಲ್ಪಾ ಹಾಗೂ ಏಷ್ಯನ್ ಗೇಮ್ಸ್ ನ ಚಿನ್ನದ ಪದಕ ವಿಜೇತೆ ಪ್ರಣವಿ
ಮೈಸೂರು: 'ಸಿ.ಎಂ.ಕಪ್' ದಸರಾ ಕ್ರೀಡಾಕೂಟಕ್ಕೆ ಇಲ್ಲಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಭಾನುವಾರ ಸಂಜೆ ಸಂಭ್ರಮದ ಚಾಲನೆ ದೊರೆಯಿತು.ಕ್ರೀಡಾ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಕ್ರೀಡಾ ಜ್ಯೋತಿ ಸ್ವೀಕರಿಸಿ ಚಾಲನೆ ನೀಡಿದರು. ಕಾಮನ್ ವೆಲ್ತ್ ಕ್ರೀಡಾಕೂಟದ ಕಂಚಿನ ಪದಕ ವಿಜೇತೆ ಕೆ.ಎಸ್. ಶಿಲ್ಪಾ ಹಾಗೂ ಏಷ್ಯನ್ ಗೇಮ್ಸ್ ನ ಚಿನ್ನದ ಪದಕ ವಿಜೇತೆ ಪ್ರಣವಿ ಅರಸ್ ವಿಶೇಷ ಅತಿಥಿಯಾಗಿ ಪಾಲ್ಗೊಂಡು ಸಂಭ್ರಮ ಹೆಚ್ಚಿಸಿದರು.ಇದೇ ವೇಳೆ ಕ್ರೀಡಾಪಟುಗಳಿಂದ ಪಥ ಸಂಚಲನ ನಡೆಯಿತು. ಸೋಮವಾರದಿಂದ ದಸರಾ ಕ್ರೀಡೆಗಳು ಆರಂಭ ಆಗಲಿದ್ದು, ಒಟ್ಟು 28 ಸ್ಪರ್ಧೆಗಳು ನಡೆಯಲಿವೆ. ಇದೇ ವೇಳೆ ದೊಡ್ಡಕೆರೆ ಮೈದಾನದಲ್ಲಿ ಪಾಯಿಂಟ್ ಹಾಗೂ ನಾಡ ಕುಸ್ತಿಯೂ ನಡೆಯಲಿದೆ.ಈ ವರ್ಷದ ಕ್ರೀಡಾಕೂಟದಲ್ಲಿ ರಾಜ್ಯದ 4500ಕ್ಕೂ ಹೆಚ್ಚು ಸ್ಪರ್ಧಿಗಳು ಪಾಲ್ಗೊಂಡಿದ್ದು, 700 ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ.
Read the complete story at Prajavani