ಶಿವಮೊಗ್ಗ ದಸರಾದಲ್ಲೂ `ವಂದೇ ಮಾತರಂ’ ಗೊಂದಲ – ಪೂರ್ಣ ಹಾಡಿದ್ದಕ್ಕೆ ಕಾಂಗ್ರೆಸ್ ಮುಖಂಡರ ಆಕ್ಷೇಪ!
– ಕಾಂಗ್ರೆಸ್ ಮುಖಂಡರಿಂದ ದಸರಾ ಕಾರ್ಯಕ್ರಮ ಬಹಿಷ್ಕಾರ ಶಿವಮೊಗ್ಗ: ಜಿಲ್ಲೆಯಲ್ಲಿ ದಸರಾ ಮಹೋತ್ಸವ ಕಾರ್ಯಕ್ರಮದ ವೇಳೆ ವಂದೇ ಮಾತರಂ (Vande Mataram) ಗೊಂದಲ ಉಂಟಾಗಿದೆ. ವಂದೇ ಮಾತರಂ ಪೂರ್ಣ ಹಾಡು ಹಾಡಿದ್ದಕ್ಕೆ ಕಾಂಗ್ರೆಸ್ ಮುಖಂಡರು (Congress leaders) ಆಕ್ಷೇಪ ವ್ಯಕ್ತಪಡಿಸಿರುವ ಘಟನೆ ನಡೆದಿದೆ. ದಸರಾ ಕಾರ್ಯಕ್ರಮದ (Shivamogga Dasara) ವೇದಿಕೆ ಮೇಲೆಯೇ ಕಾ

– ಕಾಂಗ್ರೆಸ್ ಮುಖಂಡರಿಂದ ದಸರಾ ಕಾರ್ಯಕ್ರಮ ಬಹಿಷ್ಕಾರ ಶಿವಮೊಗ್ಗ: ಜಿಲ್ಲೆಯಲ್ಲಿ ದಸರಾ ಮಹೋತ್ಸವ ಕಾರ್ಯಕ್ರಮದ ವೇಳೆ ವಂದೇ ಮಾತರಂ (Vande Mataram) ಗೊಂದಲ ಉಂಟಾಗಿದೆ. ವಂದೇ ಮಾತರಂ ಪೂರ್ಣ ಹಾಡು ಹಾಡಿದ್ದಕ್ಕೆ ಕಾಂಗ್ರೆಸ್ ಮುಖಂಡರು (Congress leaders) ಆಕ್ಷೇಪ ವ್ಯಕ್ತಪಡಿಸಿರುವ ಘಟನೆ ನಡೆದಿದೆ. ದಸರಾ ಕಾರ್ಯಕ್ರಮದ (Shivamogga Dasara) ವೇದಿಕೆ ಮೇಲೆಯೇ ಕಾಂಗ್ರೆಸ್ ಮುಖಂಡರು ಆಕ್ಷೇಪಿಸಿದ್ದು, ದಸರಾ ನೀವೆ ಮಾಡಿಕೊಳ್ಳಿ, ಚೆನ್ನಾಗಿ ನಡೆಯಲಿ ಎಂದು ಹೊರನಡೆದಿದ್ದಾರೆ. ಕಾರ್ಯಕ್ರಮದ ಆರಂಭದಲ್ಲಿ ಗಾಯಕರು ಮ್ಯೂಸಿಕ್ ಸಹಿತ ವಂದೇ ಮಾತರಂ-2 ಚರಣ ಹಾಡಿದ್ದರು. 2 ಚರಣ ಮುಗಿಯುತ್ತಿದ್ದಂತೆ ಮ್ಯೂಸಿಕ್ ಕೊನೆಗೊಂಡಿತ್ತು. ಮ್ಯೂಸಿಕ್ ಅಂತ್ಯಗೊಂಡ ಬಳಿಕವೂ ಗಾಯಕರು ವಂದೇ ಮಾತರಂ ಪೂರ್ತಿ ಹಾಡಿದ್ದಾರೆ. ಇದಕ್ಕೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಸಿ ಯೋಗೀಶ್, ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿ.ಜೆ.ಮಧುಸೂದನ್, ಜವಳಿ- ಕೈಮಗ್ಗ ನಿಗಮದ ಅಧ್ಯಕ್ಷ ಚೇತನ್ ನೇತೃತ್ವದ ತಂಡ ಹೊರನಡೆದಿದೆ. ಪಾಲಿಕೆ ಮಾಜಿ ಸದಸ್ಯರು ಸೇರಿದಂತೆ ಕಾಂಗ್ರೆಸ್ಸಿಗರಿಂದ ದಸರಾ ಕಾರ್ಯಕ್ರಮ ಬಹಿಷ್ಕಾರಿಸಿದ್ದಾರೆ. ಶಿವಮೊಗ್ಗದ ಕೋಟೆ ಶ್ರೀಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ದಸರಾ ಕಾರ್ಯಕ್ರಮ ನಿಗದಿ ಮಾಡಲಾಗಿತ್ತು. ಹಿರಿಯ ನಟ ಶ್ರೀನಾಥ್, ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಚೆನ್ನಬಸಪ್ಪ ಸೇರಿದಂತೆ ಹಲವರು ಭಾಗಿಯಾಗಿದ್ದರು.