ಸಿಜೆಪಿ ನಡೆಸಿದ ಪ್ರತಿಭಟನೆಯಲ್ಲಿ ಸಾಮೂಹಿಕ ಬಂಧನ: ವಿಶ್ವಸಂಸ್ಥೆ ಕಳವಳ
ಜಿನೀವಾ (ಪಿಟಿಐ): ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಒತ್ತಾಯಿಸಿ ದೆಹಲಿಯಲ್ಲಿ ಶನಿವಾರ ಸಿಜೆಪಿ ನಡೆಸಿದ ಪ್ರತಿಭಟನೆಯಲ್ಲಿ 7 ಸಾವಿರಕ್ಕೂ ಹೆಚ್ಚು ಜನರ ಸಾಮೂಹಿಕ ಬಂಧನದ ಬಗ್ಗೆ ವಿಶ್ವಸಂಸ್ಥೆ ತೀವ್ರ ಕಳವಳ ವ್ಯಕ್ತಪಡಿಸಿದೆ. ‘ಜನರು ಶಾಂತಿಯುತವಾಗಿ ಸಭೆ ಸೇರುವ, ಪ್ರತಿಭಟಿಸುವ ಹಕ್ಕನ್ನು ಗೌರವಿಸಬೇಕು, ಅಕ್ರಮವಾಗಿ ಬಂಧಿಸಿದವರನ್ನು ತಕ್ಷಣ

ಜಿನೀವಾ (ಪಿಟಿಐ): ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಒತ್ತಾಯಿಸಿ ದೆಹಲಿಯಲ್ಲಿ ಶನಿವಾರ ಸಿಜೆಪಿ ನಡೆಸಿದ ಪ್ರತಿಭಟನೆಯಲ್ಲಿ 7 ಸಾವಿರಕ್ಕೂ ಹೆಚ್ಚು ಜನರ ಸಾಮೂಹಿಕ ಬಂಧನದ ಬಗ್ಗೆ ವಿಶ್ವಸಂಸ್ಥೆ ತೀವ್ರ ಕಳವಳ ವ್ಯಕ್ತಪಡಿಸಿದೆ. ‘ಜನರು ಶಾಂತಿಯುತವಾಗಿ ಸಭೆ ಸೇರುವ, ಪ್ರತಿಭಟಿಸುವ ಹಕ್ಕನ್ನು ಗೌರವಿಸಬೇಕು, ಅಕ್ರಮವಾಗಿ ಬಂಧಿಸಿದವರನ್ನು ತಕ್ಷಣ ಬಿಡುಗಡೆ ಮಾಡಬೇಕು’ ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಕಚೇರಿ ಭಾರತೀಯ ಅಧಿಕಾರಿಗಳನ್ನು ಒತ್ತಾಯಿಸಿದೆ.‘ಜಿನೀವಾದಲ್ಲಿರುವ ಭಾರತದ ಶಾಶ್ವತ ರಾಯಭಾರ ಕಚೇರಿಯು, ವಿಶ್ವಸಂಸ್ಥೆಯ ಕಳವಳವನ್ನು ಅಲ್ಲಗಳೆದಿದೆ. ಇದು ದೇಶದ ಆಂತರಿಕ ವ್ಯವಹಾರಗಳಲ್ಲಿ ಅನಗತ್ಯವಾದ ಹಸ್ತಕ್ಷೇಪ’ ಎಂದು ದೂರಿದೆ.‘ವಿದ್ಯಾರ್ಥಿಗಳು, ರಾಜಕೀಯ ಮುಖಂಡರು, ವಕೀಲರು, ಪತ್ರಕರ್ತರು, ಸಂಘಟನೆಗಳ ಪ್ರತಿನಿಧಿಗಳ ಸಾಮೂಹಿಕ ಬಂಧನದ ವರದಿಯು ಆಘಾತಕಾರಿಯಾಗಿದೆ. ಶಾಂತಿಯುತ ಪ್ರತಿಭಟನೆಗಳ ಮೇಲೆ ನಿರ್ಬಂಧ ಹೇರುವಾಗ ಕಾನೂನು ಜಾರಿ ಅಧಿಕಾರಿಗಳು ಸಂಯಮ ಪಾಲಿಸಬೇಕು’ ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವಕ್ತಾರ ಥಮೀನ್ ಅಲ್-ಖೀತನ್ ಹೇಳಿದ್ದಾರೆ.ಮಹಿಳೆಯ ಆಕ್ಷೇಪಾರ್ಹ ಚಿತ್ರ: ಸಿಜೆಪಿ ನಾಯಕರಿಗೆ ನೋಟಿಸ್ಸಿಜೆಪಿ ಪ್ರತಿಭಟನೆ | ದೆಹಲಿ ಮೆಟ್ರೊ ನಿಲ್ದಾಣಗಳು ಬಂದ್: ಸುಪ್ರೀಂ ಕೋರ್ಟ್ ಕಳವಳಸಿಜೆಪಿ ಪ್ರತಿಭಟನೆ LIVE | 7 ಸಾವಿರಕ್ಕೂ ಹೆಚ್ಚು ಜನರ ಸಾಮೂಹಿಕ ಬಂಧನ: ವಿಶ್ವಸಂಸ್ಥೆ ಕಳವಳ