ಸಿಜೆಪಿ ಪ್ರತಿಭಟನೆ LIVE | ಮೆಟ್ರೊ, ರೈಲು ನಿರ್ಬಂಧ, ಪ್ರತಿಭಟನಕಾರರ ಅಕ್ರಮ ವಶ ಬೇಡ: ಸುಪ್ರೀಂ
2ನೇ ದಿನ 100ಕ್ಕೂ ಹೆಚ್ಚು ಮಂದಿ ವಶಕ್ಕೆಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ 'ಕಾಕ್ರೋಚ್ ಜನತಾ ಪಾರ್ಟಿ' (ಸಿಜೆಪಿ) ನಡೆಸುತ್ತಿರುವ ಧರಣಿ ಇಂದಿಗೆ( ಭಾನುವಾರ) ಎರಡನೇ ದಿನಕ್ಕೆ ಕಾಲಿಟ್ಟಿದೆ. ಪೊಲೀಸ್ ಬಿಗಿ ಭದ್ರತೆಯ ನಡುವೆಯೂ ಜಂತರ್ ಮಂತರ್ಗೆ ಮೆರವಣಿಗೆ ಹೊರಟ 100ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿ
2ನೇ ದಿನ 100ಕ್ಕೂ ಹೆಚ್ಚು ಮಂದಿ ವಶಕ್ಕೆಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ 'ಕಾಕ್ರೋಚ್ ಜನತಾ ಪಾರ್ಟಿ' (ಸಿಜೆಪಿ) ನಡೆಸುತ್ತಿರುವ ಧರಣಿ ಇಂದಿಗೆ( ಭಾನುವಾರ) ಎರಡನೇ ದಿನಕ್ಕೆ ಕಾಲಿಟ್ಟಿದೆ. ಪೊಲೀಸ್ ಬಿಗಿ ಭದ್ರತೆಯ ನಡುವೆಯೂ ಜಂತರ್ ಮಂತರ್ಗೆ ಮೆರವಣಿಗೆ ಹೊರಟ 100ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ದೆಹಲಿ | 2ನೇ ದಿನಕ್ಕೆ ಕಾಲಿಟ್ಟ CJP ಪ್ರತಿಭಟನೆ: 100ಕ್ಕೂ ಹೆಚ್ಚು ಮಂದಿ ವಶಕ್ಕೆನೇಹಾ ಬೋರಾ ಮತ್ತೆ ಪೊಲೀಸರ ವಶಕ್ಕೆಚುನಾವಣಾ ಆಯೋಗದ ವಿರುದ್ಧ ದೆಹಲಿಯಲ್ಲಿ ಮುಂದುವರಿದ ಹೋರಾಟ: ಅಖಿಲ ಭಾರತ ವಿದ್ಯಾರ್ಥಿ ಸಂಘಟನೆಯ (AISA) ರಾಷ್ಟ್ರೀಯ ಅಧ್ಯಕ್ಷೆ ನೇಹಾ ಬೋರಾ ಮತ್ತೆ ಪೊಲೀಸರ ವಶಕ್ಕೆದೇಶದ ನಾಗರಿಕರೆಲ್ಲ ಬೀದಿಗಿಳಿಯಿರಿ: ಸಿಜೆಪಿಪ್ರತಿಭಟನೆಯನ್ನು ಹತ್ತಿಕ್ಕಲು ಕೇಂದ್ರ ಹಾಗೂ ದೆಹಲಿ ಸರ್ಕಾರ ಕೈಗೊಂಡ ಕ್ರಮಗಳಿಂದ ಹಿಂದೆ ಸರಿಯುವುದಿಲ್ಲ. ದೇಶದ ಎಲ್ಲ ನಾಗರಿಕರು ಬೀದಿಗೆ ಇಳಿಯಿರಿ ಎಂದು ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ) ಭಾನುವಾರ ಕರೆ ನೀಡಿದೆ.ನನ್ನನ್ನು ವಶಕ್ಕೆ ಪಡೆದಿದ್ದಲ್ಲ, ಅಪಹರಿಸಿದ್ದು: ರಾಠಿಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಹಮ್ಮಿಕೊಂಡಿದ್ದ ಪ್ರತಿಭಟನೆಗೂ ಮುನ್ನ ತಮ್ಮನ್ನು ಗುರುಗ್ರಾಮದ ನಿವಾಸದಿಂದ ವಶಕ್ಕೆ ಪಡೆದ ಘಟನೆಯನ್ನು ಯೂಟ್ಯೂಬರ್ ಧ್ರುವ್ ರಾಠಿ ತೀವ್ರವಾಗಿ ಖಂಡಿಸಿದ್ದಾರೆ. 'ನನ್ನನ್ನು ವಶಕ್ಕೆ ಪಡೆದಿದ್ದಲ್ಲ, ಬದಲಿಗೆ ಅಪಹರಿಸಿದ್ದು' ಎಂದು ಗಂಭೀರ ಆರೋಪ ಮಾಡಿದ್ದಾರೆ. ನನ್ನನ್ನು ವಶಕ್ಕೆ ಪಡೆದಿದ್ದಲ್ಲ, ಅಪಹರಿಸಿದ್ದು: ಯೂಟ್ಯೂಬರ್ ಧ್ರುವ್ ರಾಠಿ ಆರೋಪಅಕ್ರಮ ವಶ ಬೇಡ ಎಂದ ಸುಪ್ರೀಂ ಕೋರ್ಟ್ಶಾಂತಿಯುತವಾಗಿ ಸಭೆ ಸೇರುವ ಜನರನ್ನು ಅಕ್ರಮವಾಗಿ ವಶಪಡಿಸಕೂಡದು ಎಂದು ಸುಪ್ರೀಂ ಕೋರ್ಟ್ ಭಾನುವಾರ ನಿರ್ದೇಶನ ನೀಡಿದೆ. ಸಿಜೆಪಿ ಪ್ರತಿಭಟನೆಯ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಮೆಟ್ರೊ ಮತ್ತು ರೈಲು ಸೇವೆಗಳಿಗೆ ಸಂಪೂರ್ಣ ನಿರ್ಬಂಧ ವಿಧಿಸಬಾರದು ಎಂಬ ನ್ಯಾಯಾಲಯದ ಹಿಂದಿನ ನಿರ್ದೇಶನ ಉಲ್ಲಂಘನೆಯಾಗಿದೆ ಎಂದು ಆರೋಪಿಸಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ. ಮೆಟ್ರೊ, ರೈಲು ಸೇವೆ ಸಹಜವಾಗಿ ಕಾರ್ಯನಿರ್ವಹಣೆಗೆ ಸುಪ್ರೀಂ ಕೋರ್ಟ್ ಆದೇಶಮೆಟ್ರೊ ಮತ್ತು ರೈಲು ಸೇವೆಗಳನ್ನು ಸಹಜವಾಗಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಡಬೇಕು ಹಾಗೂ ಕಾನೂನಿನ ಪ್ರಕಾರ ಇಂಟರ್ನೆಟ್ ಸೇವೆಗಳಿಗೆ ಯಾವುದೇ ಅಡ್ಡಿಯಾಗದಂತೆ ನೋಡಿಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ. ಜನರು ಮತ್ತು ವಾಹನಗಳ ಮುಕ್ತ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು. ಬ್ಯಾರಿಕೇಡ್ಗಳ ಅಗತ್ಯವನ್ನು ಮರುಪರಿಶೀಲಿಸಬೇಕು ಎಂದೂ ನ್ಯಾಯಾಲಯ ನಿರ್ದೇಶನ ನೀಡಿದೆ.News Alert! Protests in Delhi: Metro, train and internet services should function normally subject to law and order, says SC.— Press Trust of India (@PTI_News) October 11, 2026 ಒಂದು ವರ್ಷ ಶಾಂತಿ ಕಾಪಾಡುವ ಷರತ್ತಿನೊಂದಿಗೆ ಸಿಜೆಪಿ ನಾಯಕರ ಬಿಡುಗಡೆಜಂತರ್ ಮಂತರ್ನಲ್ಲಿ ನಡೆಯಲಿದ್ದ ಪ್ರತಿಭಟನೆಗೂ ಮುನ್ನ ದೆಹಲಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆದು ಮುಂಜಾಗ್ರತಾ ಬಂಧನದಲ್ಲಿರಿಸಲಾಗಿದ್ದ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನಾಯಕರಾದ ಅಭಿಜೀತ್ ದೀಪ್ಕೆ, ಆಶುತೋಷ್ ರಾಂಕಾ ಮತ್ತು ಸೌರವ್ ದಾಸ್ ಅವರನ್ನು ಭಾನುವಾರ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಬಿಡುಗಡೆ ಮಾಡಿದೆ.ಮುಂದಿನ ಒಂದು ವರ್ಷ ಶಾಂತಿ ಕಾಪಾಡುವ ಷರತ್ತಿನ ಮೇಲೆ ಮೂವರನ್ನು ಬಿಡುಗಡೆ ಮಾಡಲಾಗಿದೆ ಎಂದು ಸಿಜೆಪಿಯ ಕಾನೂನು ವಿಭಾಗದ ಮುಖ್ಯಸ್ಥೆ ರತ್ನಾ ಸಿಂಗ್ ತಿಳಿಸಿದ್ದಾರೆ.₹ 50 ಸಾವಿರ ಮೊತ್ತದ ಜಾಮೀನು ಬಾಂಡ್ ಮತ್ತು ಭದ್ರತಾ ಬಾಂಡ್ ಸಲ್ಲಿಸಿದ ಬಳಿಕ ನ್ಯಾಯಾಲಯ ಅವರನ್ನು ಬಿಡುಗಡೆ ಮಾಡಿದೆ ಎಂದು ಪೊಲೀಸರು ಹೇಳಿದ್ದಾರೆ.Delhi: Preventive arrest u/s 126/170 BNSS of Abhijeet Dipke, Ashutosh Ranka and Saurav Das was done on 10.10.2026. All due legal procedures were followed, and they were produced before the SEM Court, Delhi Cantt today. A bail bond as Surety Bond of Rs 50,000 was filled for… pic.twitter.com/ioHedhagUj— ANI (@ANI) October 11, 2026 ಮಧ್ಯಾಹ್ನ 2 ಗಂಟೆಗೆ ಸಿಜೆಪಿಯಿಂದ ಸುದ್ದಿಗೋಷ್ಠಿ ಪೊಲೀಸ್ ಬಂಧನದಿಂದ ನ್ಯಾಯಾಲಯವು ಅಭಿಜೀತ್ ದೀಪ್ಕೆ, ಆಶುತೋಷ್ ರಾಂಕಾ ಮತ್ತು ಸೌರವ್ ದಾಸ್ ಅವರನ್ನು ಭಾನುವಾರ ಬೆಳಿಗ್ಗೆ ಬಿಡುಗಡೆ ಮಾಡಿದೆ. ಮಧ್ಯಾಹ್ನ 2 ಗಂಟೆಗೆ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡುವುದಾಗಿ ರಾಂಕಾ ತಿಳಿಸಿದ್ದಾರೆ.#WATCH | Delhi: CJP leaders Abhijeet Dipke, Ashutosh Ranka, and Saurav Das have been released after they were produced before the Executive Magistrate at Delhi Cantt Police Station.CJP National Spokesperson Ashutosh Ranka says, "We will hold a press conference at 2 PM." pic.twitter.com/v1lNTEbhp3— ANI (@ANI) October 11, 2026 ಸಿಜೆಪಿ ನಾಯಕರಾದ ಅಭಿಜೀತ್ ದೀಪ್ಕೆ, ಆಶುತೋಷ್ ರಾಂಕಾ ಮತ್ತು ಸೌರವ್ ದಾಸ್ ಅವರನ್ನು ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಬಿಡುಗಡೆ ಮಾಡಿದೆ ಎಂದು ಪಕ್ಷದ ಕಾನೂನು ವಿಭಾಗದ ಮುಖ್ಯಸ್ಥೆ ರತ್ನಾ ಸಿಂಗ್ ತಿಳಿಸಿದ್ದಾರೆ.VIDEO | Delhi: Executive Magistrate's court releases CJP founder Abhijeet Dipke, and party leaders Saurav Das, Ashutosh Ranka. Visuals from Delhi Cantonment Police Station.(Full video available on PTI Videos - https://t.co/d8jp61yd2p) pic.twitter.com/UweLl56dyU— Press Trust of India (@PTI_News) October 11, 2026 News Alert! Executive Magistrate court has released Dipke, Ranka and Das: CJP legal head Ratna Singh. pic.twitter.com/PtRqqeRrUU— Press Trust of India (@PTI_News) October 11, 2026 ಸಿಜೆಪಿ ಪ್ರತಿಭಟನೆ: ಪೊಲೀಸ್ ವಶದಲ್ಲಿದ್ದ ಯೂಟ್ಯೂಬರ್ ಧ್ರುವ ರಾಠಿ ಬಿಡುಗಡೆಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಆಯೋಜಿಸಿದ್ದ ಪ್ರತಿಭಟನೆಗೆ ಮುನ್ನ ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದ ಯೂಟ್ಯೂಬರ್ ಧ್ರುವ ರಾಠಿ ಅವರನ್ನು ಶನಿವಾರ ತಡರಾತ್ರಿ ಬಿಡುಗಡೆ ಮಾಡಲಾಗಿದೆ ಎಂದು ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.ದೆಹಲಿಯಲ್ಲಿ ಮುಂದುವರಿದ ಕಠಿಣ ಸಂಚಾರ ನಿರ್ಬಂಧನವದೆಹಲಿ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಪದಚ್ಯುತಿಗೊಳಿಸುವಂತೆ ಆಗ್ರಹಿಸಿ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಭಾನುವಾರವೂ ಪ್ರತಿಭಟನೆಗೆ ಕರೆ ನೀಡಿದ್ದು, ದೆಹಲಿಯ ಹಲವು ಭಾಗಗಳಲ್ಲಿ ಸತತ ಎರಡನೇ ದಿನವೂ ಕಠಿಣ ಸಂಚಾರ ನಿರ್ಬಂಧಗಳನ್ನು ವಿಧಿಸಲಾಗಿದೆ. VIDEO | Delhi: Security heightened at Outer Circle of Connaught Place.(Full video available on PTI Videos - https://t.co/d8jp61yd2p) pic.twitter.com/PkgfAHerj5— Press Trust of India (@PTI_News) October 11, 2026 VIDEO | Delhi: Security heightened at Outer Circle of Connaught Place.(Full video available on PTI Videos - https://t.co/d8jp61yd2p) pic.twitter.com/PkgfAHerj5— Press Trust of India (@PTI_News) October 11, 2026 ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನಾಯಕರಾದ ಅಭಿಜೀತ್ ದೀಪ್ಕೆ, ಆಶುತೋಷ್ ರಾಂಕಾ ಮತ್ತು ಸೌರವ್ ದಾಸ್ ಅವರನ್ನು ಮುಂಜಾಗ್ರತಾ ಕ್ರಮವಾಗಿ ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಸಿಜೆಪಿ ಪ್ರತಿಭಟನೆ ಎರಡನೇ ದಿನಕ್ಕೆ: ದೆಹಲಿಯಲ್ಲಿ ಕಠಿಣ ಸಂಚಾರ ನಿರ್ಬಂಧಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಪದಚ್ಯುತಿಗೊಳಿಸುವಂತೆ ಆಗ್ರಹಿಸಿ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಭಾನುವಾರವೂ ಪ್ರತಿಭಟನೆಗೆ ಕರೆ ನೀಡಿದ್ದು, ದೆಹಲಿಯ ಹಲವು ಭಾಗಗಳಲ್ಲಿ ಸತತ ಎರಡನೇ ದಿನವೂ ಕಠಿಣ ಸಂಚಾರ ನಿರ್ಬಂಧಗಳನ್ನು ವಿಧಿಸಲಾಗಿದೆ.ಸಿಜೆಪಿ ನಾಯಕರಾದ ಅಭಿಜಿತ್ ದೀಪ್ಕೆ, ಅಶುತೋಷ್ ರಾಂಕಾ, ಸೌರವ್ ದಾಸ್ ಬಂಧನ