ಅಂಬಾಭವಾನಿ ಘಟಸ್ಥಾಪನೆ – ರಾಯಚೂರಿನಲ್ಲಿ ನವರಾತ್ರಿ ಉತ್ಸವಕ್ಕೆ ಅದ್ಧೂರಿ ಚಾಲನೆ
ರಾಯಚೂರು: ದಸರಾ ಶರನ್ನವರಾತ್ರಿ ಹಿನ್ನೆಲೆ ಅಂಬಾಭವಾನಿಯ ಘಟಸ್ಥಾಪನಾ ನವರಾತ್ರಿ ಉತ್ಸವಕ್ಕೆ ರಾಯಚೂರಿನಲ್ಲಿ ಅದ್ಧೂರಿಯಾಗಿ ಚಾಲನೆ ಸಿಕ್ಕಿದೆ. ನಗರದ ಬೃಹನ್ ಕಿಲ್ಲೆ ಮಠದಲ್ಲಿ ಅಂಬಾಭವಾನಿಯ ಘಟಸ್ಥಾಪನಾ ಮಾಡಲಾಯಿತು. ಅಂಬಾಭವಾನಿ ರಜತ ಮೂರ್ತಿ ಪಲ್ಲಕಿ ಸೇವೆಯನ್ನ ವಿಜೃಂಭಣೆಯಿಂದ ನೆರವೇರಿಸಲಾಯಿತು. ನಗರದ ಗೌಳಿ ಸಮಾಜದಿಂದ ಕಳೆದ 44 ವರ್ಷಗಳಿಂದ ಶರನ್ನವರಾತ್ರಿ ಉತ್ಸವವನ್ನ

ರಾಯಚೂರು: ದಸರಾ ಶರನ್ನವರಾತ್ರಿ ಹಿನ್ನೆಲೆ ಅಂಬಾಭವಾನಿಯ ಘಟಸ್ಥಾಪನಾ ನವರಾತ್ರಿ ಉತ್ಸವಕ್ಕೆ ರಾಯಚೂರಿನಲ್ಲಿ ಅದ್ಧೂರಿಯಾಗಿ ಚಾಲನೆ ಸಿಕ್ಕಿದೆ. ನಗರದ ಬೃಹನ್ ಕಿಲ್ಲೆ ಮಠದಲ್ಲಿ ಅಂಬಾಭವಾನಿಯ ಘಟಸ್ಥಾಪನಾ ಮಾಡಲಾಯಿತು. ಅಂಬಾಭವಾನಿ ರಜತ ಮೂರ್ತಿ ಪಲ್ಲಕಿ ಸೇವೆಯನ್ನ ವಿಜೃಂಭಣೆಯಿಂದ ನೆರವೇರಿಸಲಾಯಿತು. ನಗರದ ಗೌಳಿ ಸಮಾಜದಿಂದ ಕಳೆದ 44 ವರ್ಷಗಳಿಂದ ಶರನ್ನವರಾತ್ರಿ ಉತ್ಸವವನ್ನ ಅದ್ದೂರಿಯಾಗಿ ಆಚರಿಕೊಂಡು ಬರಲಾಗುತ್ತಿದೆ. ಅಂಬಾಭವಾನಿಯ ಘಟಸ್ಥಾಪನಾ ಹಿನ್ನೆಲೆ ಇಂದು ಅಂಬಾಭವಾನಿ ಮೂರ್ತಿ ಭವ್ಯ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯಲ್ಲಿ ವಿವಿಧ ಕಲಾ ತಂಡಗಳು ಭಾಗವಹಿಸಿದ್ದವು. ಲೋಕಕಲ್ಯಾಣ, ನಾಡಿಗೆ ಒಳಿತಾಗಲಿ ಎಂದು ದೇಶದ ಎಲ್ಲೆಡೆ ಇಂದು ಘಟಸ್ಥಾಪನಾ ಮಾಡಲಾಗುತ್ತಿದೆ ಅಂತ ಕಿಲ್ಲೆ ಬೃಹನ್ ಮಠದ ಶಾಂತಮಲ್ಲ ಶಿವಾಚಾರ್ಯ ಸ್ವಾಮಿಜಿ ತಿಳಿಸಿದ್ದಾರೆ.
Read the complete story at Public TV Kannada