ದೇಶದಲ್ಲೇ ಹಾವು ಕಡಿತ ಪ್ರಕರಣದಲ್ಲಿ ಕರ್ನಾಟಕ ಮುಂಚೂಣಿ
ಬೆಂಗಳೂರು: ದೇಶದಲ್ಲೇ ಹಾವು ಕಡಿತ ಪ್ರಕರಣದಲ್ಲಿ ಕರ್ನಾಟಕ (Karnataka) ಮುಂಚೂಣಿಯಲ್ಲಿದೆ. ಕಳೆದ 10 ತಿಂಗಳಲ್ಲಿ 191 ಮಂದಿ ಹಾವು ಕಡಿತಕ್ಕೆ ಬಲಿಯಾಗಿದ್ದಾರೆ. ಭಾರತದಲ್ಲಿ ಈ ವರ್ಷ ಜನವರಿ 1ರಿಂದ ಇಲ್ಲಿಯವರೆಗೆ 16,229 ಮಂದಿಗೆ ಹಾವು ಕಚ್ಚಿದ್ದು, ಇವರಲ್ಲಿ 191 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಮುಂದಿನ 3 ತಿಂಗಳಲ್ಲಿ ಸಾವಿನ ಪ್ರಮಾಣವು 220ರ ಗಡಿ ದಾಟುವ ಆತಂಕ ಎ

ಬೆಂಗಳೂರು: ದೇಶದಲ್ಲೇ ಹಾವು ಕಡಿತ ಪ್ರಕರಣದಲ್ಲಿ ಕರ್ನಾಟಕ (Karnataka) ಮುಂಚೂಣಿಯಲ್ಲಿದೆ. ಕಳೆದ 10 ತಿಂಗಳಲ್ಲಿ 191 ಮಂದಿ ಹಾವು ಕಡಿತಕ್ಕೆ ಬಲಿಯಾಗಿದ್ದಾರೆ. ಭಾರತದಲ್ಲಿ ಈ ವರ್ಷ ಜನವರಿ 1ರಿಂದ ಇಲ್ಲಿಯವರೆಗೆ 16,229 ಮಂದಿಗೆ ಹಾವು ಕಚ್ಚಿದ್ದು, ಇವರಲ್ಲಿ 191 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಮುಂದಿನ 3 ತಿಂಗಳಲ್ಲಿ ಸಾವಿನ ಪ್ರಮಾಣವು 220ರ ಗಡಿ ದಾಟುವ ಆತಂಕ ಎದುರಾಗಿದೆ. ಕಳೆದ 3 ವರ್ಷಗಳಲ್ಲಿ ಒಟ್ಟು 49,965 ಮಂದಿಗೆ ಹಾವು ಕಚ್ಚಿದ್ದು, ಈ ಪೈಕಿ 446 ಜನರು ಮೃತಪಟ್ಟಿದ್ದಾರೆ. ಇದನ್ನೂ ಓದಿ: ಸಿಎಂ ವಿಜಯ್ ಜೊತೆಗೂಡಿ ತಮಿಳುನಾಡಿನ ಅಭಿವೃದ್ಧಿಯನ್ನ ಮುಂದಕ್ಕೆ ಕೊಂಡೊಯ್ಯುತ್ತೇವೆ: ಪ್ರಧಾನಿ ಮೋದಿ ಇನ್ನೂ ಹಾವು ಕಡಿತಕ್ಕೆ ಒಳಗಾಗುತ್ತಿರುವವರ ಪೈಕಿ ಗುಡ್ಡಗಾಡು ಪ್ರದೇಶದ ಜನರೇ ಹೆಚ್ಚಾಗಿದ್ದು, ಸೂಕ್ತ ಸಮಯದಲ್ಲಿ ಸರಿಯಾದ ಚಿಕಿತ್ಸೆ ಸಿಗದೆ ಅನೇಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಈ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿರುವ ಆರೋಗ್ಯ ಇಲಾಖೆಯು (Heath Department) ಹಾವು ಕಡಿತಕ್ಕೆ ಚಿಕಿತ್ಸೆ ನೀಡಲು ಮಹತ್ವದ ಕ್ರಮ ಕೈಗೊಂಡಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳು, ತಾಲೂಕು ಆಸ್ಪತ್ರೆಗಳು ಹಾಗೂ ಜಿಲ್ಲಾಸ್ಪತ್ರೆಗಳಲ್ಲಿ ಹಾವು ಕಡಿತದ ವಿಷನಿರೋಧಕ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಇದರೊಂದಿಗೆ, ಹಾವು ಕಡಿತದಿಂದ ಸಂಭವಿಸಿದ ಮರಣ ಪ್ರಕರಣಗಳ ಕುರಿತು ಜಿಲ್ಲಾಧಿಕಾರಿಗಳ (ಡಿಸಿ) ಅಧ್ಯಕ್ಷತೆಯಲ್ಲಿ ಡೆತ್ ಆಡಿಟ್ ನಡೆಸಲಾಗುತ್ತಿದೆ. ವರ್ಷವಾರು ದಾಖಲಾದ ಪ್ರಕರಣಗಳ ವಿವರ: * 2024ರಲ್ಲಿ ಒಟ್ಟು 13,202 ಮಂದಿಗೆ ಹಾವು ಕಚ್ಚಿದ್ದು, 98 ಜನರು ಸಾವನ್ನಪ್ಪಿದ್ದರು. * 2025ರಲ್ಲಿ ಈ ಸಂಖ್ಯೆ ಏರಿಕೆಯಾಗಿದ್ದು, 20,634 ಮಂದಿಗೆ ಹಾವು ಕಡಿತ ಪ್ರಕರಣ ದಾಖಲಾಗಿತ್ತು ಹಾಗೂ ಸಾವಿನ ಪ್ರಮಾಣವು 154ಕ್ಕೆ ಏರಿಕೆಯಾಗಿತ್ತು.ಇದನ್ನೂ ಓದಿ: ಹೂವಿನ ಲೋಕದಲ್ಲಿ ʻಪ್ರಜಾಪ್ರಭುತ್ವದ ಹಬ್ಬʼ – ದಸರಾ ಫಲಪುಷ್ಪ ಪ್ರದರ್ಶನಕ್ಕೆ ಸಿಎಂ ಚಾಲನೆ