ಕುಣಿಗಲ್: ಈಜಲು ಹೋಗಿದ್ದ ಯುವಕ ಸಾವು
ಕುಣಿಗಲ್: ತಾಲ್ಲೂಕಿನ ಯಲಚವಾಡಿ ಗ್ರಾಮದಲ್ಲಿ ಭಾನುವಾರ ಸಂಜೆ ಸ್ನೇಹಿತರೊಂದಿಗೆ ಬಾವಿಯಲ್ಲಿ ಈಜಲು ಹೋಗಿದ್ದ ಯುವಕ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.ಗಾಣಿಮಾಸ್ತಿಪಾಳ್ಯದ ಕಿರಣ್ ಕುಮಾರ್ (21) ಮೃತರು. ಗ್ರಾಮದ ಯುವಕರು ಬಾವಿಯಲ್ಲಿ ಈಜಲು ಹೋಗಿದ್ದರು. ಕಿರಣ್ ಕುಮಾರ್ ನೀರಿನಲ್ಲಿ ಮುಳುಗಿದ್ದು, ಜತೆಯಲ್ಲಿದ್ದ ಯುವಕರು ಗಾಬರಿಯಾಗಿ ಉಳಿಸುವ ಯತ್ನ ಮಾಡಿದರೂ ಫಲಕಾರಿಯಾ
The Bharath News1 min readSource: Prajavani
Read in
ಕುಣಿಗಲ್: ತಾಲ್ಲೂಕಿನ ಯಲಚವಾಡಿ ಗ್ರಾಮದಲ್ಲಿ ಭಾನುವಾರ ಸಂಜೆ ಸ್ನೇಹಿತರೊಂದಿಗೆ ಬಾವಿಯಲ್ಲಿ ಈಜಲು ಹೋಗಿದ್ದ ಯುವಕ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.ಗಾಣಿಮಾಸ್ತಿಪಾಳ್ಯದ ಕಿರಣ್ ಕುಮಾರ್ (21) ಮೃತರು. ಗ್ರಾಮದ ಯುವಕರು ಬಾವಿಯಲ್ಲಿ ಈಜಲು ಹೋಗಿದ್ದರು. ಕಿರಣ್ ಕುಮಾರ್ ನೀರಿನಲ್ಲಿ ಮುಳುಗಿದ್ದು, ಜತೆಯಲ್ಲಿದ್ದ ಯುವಕರು ಗಾಬರಿಯಾಗಿ ಉಳಿಸುವ ಯತ್ನ ಮಾಡಿದರೂ ಫಲಕಾರಿಯಾಗಿಲ್ಲ. ನಂತರ ಶವಪತ್ತೆಯಾಗಿದ್ದು, ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಲಾಯಿತು. ಕುಣಿಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read the complete story at Prajavani00