ನ.5 ರಂದೇ ವಿಶ್ವದಾದ್ಯಂತ ಏಕಕಾಲಕ್ಕೆ ‘ರಾಮಾಯಣ ಪಾರ್ಟ್ 1’ ರಿಲೀಸ್!
– ಪಂಚ ಭಾಷೆಗಳಲ್ಲಿ ಮೂಡಿಬರಲಿದೆ ಯಶ್ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ‘ರಾಮಾಯಣ ಪಾರ್ಟ್ 1’ (Ramayana Part 1) ಬಿಡುಗಡೆ ದಿನಾಂಕವನ್ನ ಮೂರು ದಿನ ಪ್ರೀಪೋನ್ ಮಾಡಲಾಗಿದೆ. ಈ ಹಿಂದೆ ಭಾರತದಲ್ಲಿ ನವೆಂಬರ್ 8ರಂದು ಬಿಡುಗಡೆಯಾಗಲಿದೆ ಎಂದು ಘೋಷಿಸಲಾಗಿತ್ತು. ಇದೀಗ ಚಿತ್ರತಂಡ ಬಿಡುಗಡೆ ದಿನಾಂಕವನ್ನ ಬದಲಾವಣೆ ಮಾಡಿದೆ. ನ

– ಪಂಚ ಭಾಷೆಗಳಲ್ಲಿ ಮೂಡಿಬರಲಿದೆ ಯಶ್ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ‘ರಾಮಾಯಣ ಪಾರ್ಟ್ 1’ (Ramayana Part 1) ಬಿಡುಗಡೆ ದಿನಾಂಕವನ್ನ ಮೂರು ದಿನ ಪ್ರೀಪೋನ್ ಮಾಡಲಾಗಿದೆ. ಈ ಹಿಂದೆ ಭಾರತದಲ್ಲಿ ನವೆಂಬರ್ 8ರಂದು ಬಿಡುಗಡೆಯಾಗಲಿದೆ ಎಂದು ಘೋಷಿಸಲಾಗಿತ್ತು. ಇದೀಗ ಚಿತ್ರತಂಡ ಬಿಡುಗಡೆ ದಿನಾಂಕವನ್ನ ಬದಲಾವಣೆ ಮಾಡಿದೆ. ನವೆಂಬರ್ 5ರಂದೇ ಭಾರತ ಸೇರಿದಂತೆ ವಿಶ್ವದಾದ್ಯಂತ ಏಕಕಾಲಕ್ಕೆ ಸಿನಿಮಾ ರಿಲೀಸ್ ಮಾಡುವುದಾಗಿ ಘೋಷಿಸಿದೆ. View this post on Instagram A post shared by The World Of Ramayana (@worldoframayana) ನವರಾತ್ರಿಯ ಮೊದಲ ದಿನವೇ ಚಿತ್ರತಂಡ ಈ ಮಹತ್ವದ ಘೋಷಣೆ ಮಾಡಿದ್ದು, ರಾಮನಾಗಿ ರಣಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ, ಲಕ್ಷ್ಮಣನಾಗಿ ರವಿ ದುಬೆ ಹಾಗೂ ರಾವಣನಾಗಿ ರಾಕಿಂಗ್ ಸ್ಟಾರ್ ಯಶ್ (Yash) ಕಾಣಿಸಿಕೊಂಡಿರುವ ಹೊಸ ಪೋಸ್ಟರ್ ಅನ್ನು ಬಿಡುಗಡೆ ಮಾಡಿದೆ. ಇದನ್ನೂ ಓದಿ: ʻರಾಮಾಯಣʼ – ಇಂಗ್ಲಿಷ್ ಆವೃತ್ತಿಯಲ್ಲಿ 30 ನಿಮಿಷಕ್ಕೆ ಕತ್ತರಿ; ಹಾಡುಗಳು ಸಂಪೂರ್ಣ ನಿಷಿದ್ಧ! ಪೋಸ್ಟರ್ನಲ್ಲಿ ʻಇದು ರಾಮನ ಯುಗದ ಆರಂಭʼ (Yeh Ram Ke Yug Ka Aarambh Hai) ಎಂಬ ಪಂಚಿಂಗ್ ಸಾಲು ಗಮನ ಸೆಳೆಯುತ್ತಿದ್ದು, ಚಿತ್ರದ ಭರ್ಜರಿ ಪ್ರಚಾರಕ್ಕೆ ಚಾಲನೆ ದೊರೆತಿದೆ. ಭಾರತ-ವಿದೇಶದಲ್ಲಿ ಏಕಕಾಲಕ್ಕೆ ರಿಲೀಸ್ ಹೊಸ ವೇಳಾಪಟ್ಟಿಯ ಪ್ರಕಾರ, ನವೆಂಬರ್ 5ರಂದು ಭಾರತ ಮತ್ತು ವಿದೇಶಗಳಲ್ಲಿ ಏಕಕಾಲಕ್ಕೆ ‘ರಾಮಾಯಣ ಪಾರ್ಟ್ 1’ ಬಿಡುಗಡೆಯಾಗಲಿದೆ. ಈ ಹಿಂದೆ ವಿದೇಶಿ ಮಾರುಕಟ್ಟೆಗಳಲ್ಲಿ ನವೆಂಬರ್ 5ರಂದು ಹಾಗೂ ಭಾರತದಲ್ಲಿ ನವೆಂಬರ್ 8ರಂದು ಸಿನಿಮಾ ಬಿಡುಗಡೆಯಾಗಬೇಕಿತ್ತು. ಇದನ್ನೂ ಓದಿ: ‘ರಾಮಾಯಣ’ ಚಿತ್ರದ ಮೊದಲ ಕನ್ನಡ ವರ್ಷನ್ ಹಾಡು ರಿಲೀಸ್: ಜೈ ಜೈ ರಾಮ್ ಅಂದ ರೆಹಮಾನ್ ಅಡ್ವಾನ್ಸ್ ಬುಕಿಂಗ್ ದಸರಾ ಹಬ್ಬದಂದೇ ಆರಂಭ ನವರಾತ್ರಿಯ ಶುಭ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಘೋಷಣೆ ಹಂಚಿಕೊಂಡಿರುವ ಚಿತ್ರತಂಡ, ಹೊಸ ಯುಗದ ಆರಂಭವನ್ನ ಸಂಭ್ರಮಿಸುತ್ತಿದ್ದೇವೆ. ಇದು ರಾಮನ ಯುಗದ ಆರಂಭ ಎಂಬ ಸಂದೇಶದೊಂದಿಗೆ ನವೆಂಬರ್ 5ರಿಂದ ವಿಶ್ವದಾದ್ಯಂತ ಸಿನಿಮಾ ಪ್ರದರ್ಶನಗೊಳ್ಳಲಿದೆ ಎಂದು ತಿಳಿಸಿದೆ. ಪಂಚ ಭಾಷೆಗಳಲ್ಲಿ ರಾಮಾಯಣ ದರ್ಶನ ಇನ್ನೂ ರಾಮಾಯಣ ಪಾರ್ಟ್ 1 ಮತ್ತು 2 ಸರಣಿ ಸಿನಿಮಾಗಳು ಹಿಂದಿ, ತಮಿಳು, ತೆಲುಗು, ಕನ್ನಡ ಹಾಗೂ ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. IMAX ಸೇರಿದಂತೆ ಹಲವು ಪ್ರೀಮಿಯಂ ಫಾರ್ಮ್ಯಾಟ್ಗಳಲ್ಲಿ ಸಿನಿಮಾ ಪ್ರದರ್ಶನಗೊಳ್ಳಲಿದೆ. ಭಾರತದ ಹೊರಗಿನ ವಿಶ್ವಾದ್ಯಂತ ವಿತರಣೆಯನ್ನು ಸೋನಿ ಪಿಕ್ಚರ್ಸ್ (Sony Pictures) ನಿರ್ವಹಿಸಲಿದ್ದು, ಹಿಂದಿ ಭಾಷೆಯ ಮಾರುಕಟ್ಟೆಯಲ್ಲಿ ಡ್ರಾಮಾ ಪ್ರೊಡಕ್ಷನ್ಸ್ (Dharma Productions) ವಿತರಣೆಯ ಜವಾಬ್ದಾರಿ ವಹಿಸಲಿದೆ. ಎರಡು ಭಾಗಗಳಲ್ಲಿ ಮೂಡಿಬರುತ್ತಿರುವ ‘ರಾಮಾಯಣ’ದ ಪಾರ್ಟ್ 2, 2027ರ ದೀಪಾವಳಿ ಸಂದರ್ಭದಲ್ಲಿ ತೆರೆಗೆ ಬರಲಿದೆ ಎಂದು ಚಿತ್ರತಂಡ ತಿಳಿಸಿದೆ.