ಯುಪಿಐ ಪಾವತಿಗೆ ಎ.ಐ ಕನ್ನಡಕ!
ಬೆಂಗಳೂರು: ಧರಿಸಿರುವ ಕನ್ನಡಕದ ಮೂಲಕ ಯುಪಿಐ ಕ್ಯೂಆರ್ ಕೋಡ್ ವೀಕ್ಷಿಸಿ, ಹಣ ಪಾವತಿಸಲು ಸಾಧ್ಯವೇ? ನವದೆಹಲಿಯಲ್ಲಿ ನಡೆಯುತ್ತಿರುವ ‘ಇಂಡಿಯಾ ಮೊಬೈಲ್ ಕಾಂಗ್ರೆಸ್’ನಲ್ಲಿ ಜಿಯೊ ಪ್ರದರ್ಶಿಸಿರುವ ಕನ್ನಡಕವೊಂದು ಈ ಬಗೆಯ ಪಾವತಿ ಸಾಧ್ಯ ಎನ್ನುತ್ತಿದೆ.‘ಕಿಸೆಯಿಂದ ನಿಮ್ಮ ಸ್ಮಾರ್ಟ್ಫೋನ್ ಹೊರತೆಗೆಯದೆಯೇ, ಕ್ಯಾಮೆರಾ ಗ್ಲಾಸ್ ಮೂಲಕ ಯುಪಿಐ ಕ್ಯೂಆರ್ ಕೋಡ್ ನೋಡಿ, ಧ್ವನಿ

ಬೆಂಗಳೂರು: ಧರಿಸಿರುವ ಕನ್ನಡಕದ ಮೂಲಕ ಯುಪಿಐ ಕ್ಯೂಆರ್ ಕೋಡ್ ವೀಕ್ಷಿಸಿ, ಹಣ ಪಾವತಿಸಲು ಸಾಧ್ಯವೇ? ನವದೆಹಲಿಯಲ್ಲಿ ನಡೆಯುತ್ತಿರುವ ‘ಇಂಡಿಯಾ ಮೊಬೈಲ್ ಕಾಂಗ್ರೆಸ್’ನಲ್ಲಿ ಜಿಯೊ ಪ್ರದರ್ಶಿಸಿರುವ ಕನ್ನಡಕವೊಂದು ಈ ಬಗೆಯ ಪಾವತಿ ಸಾಧ್ಯ ಎನ್ನುತ್ತಿದೆ.‘ಕಿಸೆಯಿಂದ ನಿಮ್ಮ ಸ್ಮಾರ್ಟ್ಫೋನ್ ಹೊರತೆಗೆಯದೆಯೇ, ಕ್ಯಾಮೆರಾ ಗ್ಲಾಸ್ ಮೂಲಕ ಯುಪಿಐ ಕ್ಯೂಆರ್ ಕೋಡ್ ನೋಡಿ, ಧ್ವನಿಯ ಮೂಲಕ ಪಾವತಿ ಆದೇಶ ನೀಡಿದರೆ ಸಾಕು, ಹಣ ಪಾವತಿ ಕೆಲಸ ಮುಗಿಯುತ್ತದೆ’ ಎಂದು ಈ ಕನ್ನಡಕದ ಕುರಿತಾಗಿ ಜಿಯೊ ವಿವರಣೆ ನೀಡಿದೆ. ಕ್ಯಾಮೆರಾ ಗ್ಲಾಸ್, ಆಡಿಯೊ ಗ್ಲಾಸ್ ಮತ್ತು ಇಯರ್ಫೋನ್ ಸೇರಿದಂತೆ ವೈಯಕ್ತಿಕ ಎಐ ಉಪಕರಣಗಳನ್ನು ಕಂಪನಿಯು ಈ ಕಾರ್ಯಕ್ರಮದಲ್ಲಿ ಅನಾವರಣಗೊಳಿಸಿದೆ.‘ಕ್ಯಾಮೆರಾ ಗ್ಲಾಸ್ ಯುಪಿಐ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಬಲ್ಲದು, ಬಳಕೆದಾರರು ಧ್ವನಿ ಮೂಲಕ ಆದೇಶ ನೀಡಿ, ದೃಢೀಕರಿಸಿದರೆ ಪಾವತಿ ಪೂರ್ಣಗೊಳ್ಳುತ್ತದೆ’ ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ. ಯುಪಿಐ ಸರ್ಕಲ್ ಮೂಲಕ ಬಳಕೆದಾರರು ಪ್ರತಿ ವಹಿವಾಟಿನಲ್ಲಿ ₹5,000ವರೆಗೆ ಪಾವತಿ ಮಾಡಬಹುದು.‘ಅನುವಾದವು ಜಿಯೋ ಎ.ಐ ಗ್ಲಾಸ್ಗಳ ಮತ್ತೊಂದು ಪ್ರಮುಖ ವೈಶಿಷ್ಟ್ಯ. ಬೇರೆ ಬೇರೆ ಭಾರತೀಯ ಭಾಷೆ ಮಾತನಾಡುವ ಇಬ್ಬರು ವ್ಯಕ್ತಿಗಳು ಈ ಸಾಧನಗಳ ನೆರವಿನಿಂದ ಪರಸ್ಪರರ ಮಾತನ್ನು ಅರ್ಥ ಮಾಡಿಕೊಳ್ಳಬಹುದು. ನೀವು ನಿಮ್ಮ ಭಾಷೆಯಲ್ಲಿ ಮಾತನಾಡುತ್ತೀರಿ, ಎದುರಿನವರು ಅವರ ಭಾಷೆಯಲ್ಲಿ ಮಾತನಾಡುತ್ತಾರೆ, ಅನುವಾದದ ಕೆಲಸವನ್ನು ಎ.ಐ ನೋಡಿಕೊಳ್ಳುತ್ತದೆ’ ಎಂದು ಜಿಯೊ ಹೇಳಿದೆ.ಸಭೆಗಳಲ್ಲಿ ಪಾಲ್ಗೊಂಡ ಸಂದರ್ಭದಲ್ಲಿ ಪ್ರಮುಖ ಅಂಶಗಳನ್ನು ದಾಖಲಿಸಿಕೊಳ್ಳಲು ಟಿಪ್ಪಣಿ ಬರೆಯಲು ಎ.ಐ ನೆರವನ್ನು ಇದರಲ್ಲಿ ಅಳವಡಿಸಲಾಗಿದೆ, ಪ್ರಯಾಣದಲ್ಲಿ ಇರುವಾಗ ಕ್ರಿಕೆಟ್ ಅಭಿಮಾನಿಗಳಿಗೆ ಪಂದ್ಯದ ನೇರ ವಿವರ ಪಡೆಯಲು ನೆರವಾಗುತ್ತದೆ ಎಂದು ತಿಳಿಸಿದೆ.‘ಭಾರತೀಯ ಭಾಷೆಗಳ ಬಳಕೆಗೆ ಗಮನ ನೀಡಲಾಗಿದ್ದು, ಬಳಕೆದಾರರು ತಮ್ಮ ಆದ್ಯತೆಯ ಭಾಷೆಯಲ್ಲಿ ಎ.ಐ ಮತ್ತು ಡಿಜಿಟಲ್ ಸೇವೆಗಳೊಂದಿಗೆ ಸಂವಹನ ನಡೆಸಲು ಇದು ಅವಕಾಶ ಕಲ್ಪಿಸುತ್ತದೆ’ ಎಂದು ಪ್ರಕಟಣೆ ಹೇಳಿದೆ.ಪ್ರಮುಖಾಂಶಗಳು* ಕೇವಲ ಕ್ಯೂಆರ್ ಕೋಡ್ ನೋಡಿ, ಧ್ವನಿ ಆದೇಶ ನೀಡಿ, ರೂ. 5,000 ವರೆಗೆ ಪಾವತಿಸಿ* ಜಿಯೋ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಗ್ಲಾಸ್ಗಳಲ್ಲಿ ನೇರ ಕ್ರಿಕೆಟ್ ವೀಕ್ಷಕ ವಿವರಣೆ* ವಿವಿಧ ಭಾರತೀಯ ಭಾಷೆಗಳನ್ನು ಮಾತನಾಡುತ್ತೀರಾ? ಲೈವ್ ಅನುವಾದ ಸಹಾಯ ಮಾಡುತ್ತದೆ