ಪ್ರಜಾಪ್ರಭುತ್ವ ಹಬ್ಬ ಪರಿಕಲ್ಪನೆಯಲ್ಲಿ ಫಲಪುಷ್ಪ ಪ್ರದರ್ಶನ: ಸಿಎಂ ಡಿಕೆಶಿ ಚಾಲನೆ
ಮೈಸೂರು: ‘ದಸರಾ ಮಹೋತ್ಸವ ಪ್ರಯುಕ್ತ ‘ಪ್ರಜಾಪ್ರಭುತ್ವದ ಹಬ್ಬ’ ಪರಿಕಲ್ಪನೆಯಲ್ಲಿ ಕುಪ್ಪಣ್ಣ ಪಾರ್ಕ್ನಲ್ಲಿ ಆಯೋಜಿಸಿರುವ ದಸರಾ ಫಲಪುಷ್ಪ ಪ್ರದರ್ಶನವನ್ನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಉದ್ಘಾಟಿಸಿದರು.ಗಾಜಿನ ಮನೆಯಲ್ಲಿ 2 ಲಕ್ಷ ಕೆಂಪು ಗುಲಾಬಿ, 4ಸಾವಿರ ಸೇವಂತಿಗೆ ಹಾಗೂ 25 ಸಾವಿರ ಗ್ರೀನ್ ಫೋಲಿಯೇಜ್ (ಹಸಿರೆಲೆ)ಗಳನ್ನು ಬಳಸಿ ರಚಿಸಿರುವ ವಿಧಾನ ಸೌಧದ ಪ್ರತಿಕೃ

ಮೈಸೂರು: ‘ದಸರಾ ಮಹೋತ್ಸವ ಪ್ರಯುಕ್ತ ‘ಪ್ರಜಾಪ್ರಭುತ್ವದ ಹಬ್ಬ’ ಪರಿಕಲ್ಪನೆಯಲ್ಲಿ ಕುಪ್ಪಣ್ಣ ಪಾರ್ಕ್ನಲ್ಲಿ ಆಯೋಜಿಸಿರುವ ದಸರಾ ಫಲಪುಷ್ಪ ಪ್ರದರ್ಶನವನ್ನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಉದ್ಘಾಟಿಸಿದರು.ಗಾಜಿನ ಮನೆಯಲ್ಲಿ 2 ಲಕ್ಷ ಕೆಂಪು ಗುಲಾಬಿ, 4ಸಾವಿರ ಸೇವಂತಿಗೆ ಹಾಗೂ 25 ಸಾವಿರ ಗ್ರೀನ್ ಫೋಲಿಯೇಜ್ (ಹಸಿರೆಲೆ)ಗಳನ್ನು ಬಳಸಿ ರಚಿಸಿರುವ ವಿಧಾನ ಸೌಧದ ಪ್ರತಿಕೃತಿ ಗಮನಸೆಳೆಯಿತು.ಸುತ್ತಲೂ ಕೋಲ್ಕತ್ತಾ, ಊಟಿ, ಪುಣೆ, ಬೆಂಗಳೂರು ಹಾಗೂ ಹಾಸನ ಸೇರಿದಂತೆ ವಿವಿಧೆಡೆಗಳಿಂದ ತಂದ ಪುಷ್ಪಗಳು, ಗಿಡಗಳು, ಬೋನ್ಸಾಯ್ ಸಸ್ಯಗಳನ್ನು ಪ್ರದರ್ಶನ ಇಡಲಾಗಿದೆ.ಹೊರಾಂಗಣದಲ್ಲಿ ಚಿಕ್ಕಗಡಿಯಾರದ ಪುಷ್ಪ ಪ್ರತಿರೂಪ, ಅರಮನೆ ಮಂಡಳಿಯಿಂದ ಸಿಂಹಾಸನಾರೂಢ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಪುಷ್ಪಕೃತಿ, ಪ್ರಜಾಪ್ರಭುತ್ವದ ಮೂರು ಸ್ತಂಭಗಳು, ವಿದ್ಯುನ್ಮಾನ ಮತಯಂತ್ರ ಹಾಗೂ ನನ್ನ ಮತ - ನನ್ನ ಹಕ್ಕು - ನನ್ನ ಹೊಣೆ ಘೋಷವಾಕ್ಯದೊಂದಿಗೆ ಮತದಾನ ಜಾಗೃತಿ ಫಲಪುಷ್ಪ ಪ್ರತಿಕೃತಿಗಳು ಪ್ರವಾಸಿಗರನ್ನು ಆಕರ್ಷಿಸಿತು. ಬಾಲಿ ಶೈಲಿಯ ಬಾನೂರ್ ಕಲೆಯ (ಇಂಡೋನೇಷಿಯನ್ ತೆಂಗಿನ ಗರಿಯ ಕಲಾಕೃತಿ) ಸರಣಿ ಸ್ವಾಗತ ಕಮಾನು ಪ್ರದರ್ಶನದ ಅಂದ ಹೆಚ್ಚಿಸಿತು.ಡಿ.ಕೆ.ಶಿವಕುಮಾರ್ ಮಾತನಾಡಿ, ಮತದಾನ ಉಳಿಸುವುದು ನಮ್ಮ ಹಕ್ಕು. ಕೆಲವರಿಂದ ಮತದಾನ ಅಳಿಸುವ ಪ್ರಯತ್ನವಾಗುತ್ತಿದೆ. ಮತದಾನ ಉಳಿಸುವ ಆಶಯದಿಂದ ಫಲಪುಷ್ಪ ಪ್ರದರ್ಶನದಲ್ಲಿ ಪ್ರಜಾಪ್ರಭುತ್ವದ ಆಶಯ ಇಟ್ಟುಕೊಂಡು ಕಲಾಕೃತಿ ರಚಿಸಲಾಗಿದೆ ಎಂದರು.ಪ್ರದರ್ಶನಕ್ಕೆ ವಯಸ್ಕರಿಗೆ ₹60, ಮಕ್ಕಳಿಗೆ (6-12 ವರ್ಷ) ₹30 ಪ್ರವೇಶ ದರ ನಿಗದಿಪಡಿಸಲಾಗಿದೆ. ಶಾಲಾ ಸಮವಸ್ತ್ರ ಧರಿಸಿ ಬರುವ ಮಕ್ಕಳಿಗೆ ಬೆಳಿಗ್ಗೆ 9ರಿಂದ ಮಧ್ಯಾಹ್ನ 1ರವರೆಗೆ ಉಚಿತ ಪ್ರವೇಶವಿದೆ.ಉಸ್ತುವಾರಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ, ಸಚಿವ ಪುಟ್ಟರಂಗ ಶೆಟ್ಟಿ, ಶಾಸಕರಾದ ಅನಿಲ್ ಚಿಕ್ಕಮಾದು, ಕೆ.ಹರೀಶ್ ಗೌಡ, ದರ್ಶನ್ ಧ್ರುವನಾರಾಣ್, ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ ಇದ್ದರು