ಇಮ್ರಾನ್ ಖಾನ್, ಲೇಖಾ ವಾಷಿಂಗ್ಟನ್ ಬಿಡುಗಡೆ: 'ಜೈ ಹಿಂದ್' ಘೋಷಣೆ ಕೂಗಿದ ನಟ
ಮುಂಬೈ: ಮುಂಬೈನ ಆಗಸ್ಟ್ ಕ್ರಾಂತಿ ಮೈದಾನದಲ್ಲಿ ಶನಿವಾರ ಪ್ರತಿಭಟನೆ ನಡೆಸುತ್ತಿದ್ದಾಗ ವಶಕ್ಕೆ ಪಡೆಯಲಾಗಿದ್ದ ಬಾಲಿವುಡ್ ನಟ ಇಮ್ರಾನ್ ಖಾನ್, ಅವರ ಗೆಳತಿ ಲೇಖಾ ವಾಷಿಂಗ್ಟನ್ ಮತ್ತು ಜೈನ್ ಮೇರಿ ಅವರನ್ನು ಕೆಲವೇ ಗಂಟೆಗಳಲ್ಲಿ ಮುಂಬೈ ಪೊಲೀಸರು ಬಿಡುಗಡೆ ಮಾಡಿದ್ದಾರೆ.ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ 'ಕಾಕ್ರೋಚ್ ಜನತಾ ಪಾರ್ಟಿ'

ಮುಂಬೈ: ಮುಂಬೈನ ಆಗಸ್ಟ್ ಕ್ರಾಂತಿ ಮೈದಾನದಲ್ಲಿ ಶನಿವಾರ ಪ್ರತಿಭಟನೆ ನಡೆಸುತ್ತಿದ್ದಾಗ ವಶಕ್ಕೆ ಪಡೆಯಲಾಗಿದ್ದ ಬಾಲಿವುಡ್ ನಟ ಇಮ್ರಾನ್ ಖಾನ್, ಅವರ ಗೆಳತಿ ಲೇಖಾ ವಾಷಿಂಗ್ಟನ್ ಮತ್ತು ಜೈನ್ ಮೇರಿ ಅವರನ್ನು ಕೆಲವೇ ಗಂಟೆಗಳಲ್ಲಿ ಮುಂಬೈ ಪೊಲೀಸರು ಬಿಡುಗಡೆ ಮಾಡಿದ್ದಾರೆ.ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ 'ಕಾಕ್ರೋಚ್ ಜನತಾ ಪಾರ್ಟಿ' ನಡೆಸುತ್ತಿರುವ ಪ್ರತಿಭಟನೆಯಲ್ಲಿ ಇಮ್ರಾನ್ ಖಾನ್ ಸೇರಿದಂತೆ ಈ ಮೂವರು ಭಾಗವಹಿಸಿದ್ದರು. ಪ್ರತಿಭಟನೆ ವೇಳೆ ಪೊಲೀಸರು ಇವರನ್ನು ವಶಕ್ಕೆ ಪಡೆದಿದ್ದರು.ಬಿಡುಗಡೆಗೊಂಡ ಬಳಿಕ ಲೇಖಾ ವಾಷಿಂಗ್ಟನ್ ಅವರು ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಮೂವರೂ ಜೊತೆಯಲ್ಲಿರುವ ಫೋಟೊವನ್ನು ಹಂಚಿಕೊಂಡಿದ್ದಾರೆ. ಜತೆಗೆ ‘ಎಲ್ಲವೂ ಸರಿ ಇದೆ ಸ್ನೇಹಿತರೇ, ನಾವು ಸುರಕ್ಷಿತವಾಗಿದ್ದೇವೆ ಮತ್ತು ಮನೆಗೆ ಹಿಂತಿರುಗುತ್ತಿದ್ದೇವೆ’ ಎಂದೂ ಬರೆದುಕೊಂಡಿದ್ದಾರೆ.ವಶಕ್ಕೆ ಪಡೆದ ಸಮಯದಲ್ಲಿ ತೆಗೆದ ವಿಡಿಯೊಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿರುವ ಜೈನ್ ಮೇರಿ, ‘ನಮ್ಮನ್ನು ಏಕೆ ವಶಕ್ಕೆ ಪಡೆಯಲಾಗುತ್ತಿದೆ ಎಂಬ ಪ್ರಶ್ನೆಗೆ ಪೊಲೀಸರ ಬಳಿ ಯಾವುದೇ ಉತ್ತರವಿರಲಿಲ್ಲ. ಪ್ರತಿಯೊಬ್ಬ ಅಧಿಕಾರಿಯೂ 'ಎರಡು ನಿಮಿಷ' ಎಂದು ಹೇಳಿ ಫೋನ್ ಕರೆಯಲ್ಲಿ ಬ್ಯಸಿಯಾಗುತ್ತಿದ್ದರೇ, ಹೊರತು ಸ್ಪಷ್ಟ ಕಾರಣ ನೀಡಲಿಲ್ಲ’ ಎಂದು ಆರೋಪಿಸಿದ್ದಾರೆ. View this post on Instagram ಪ್ರತಿಭಟನಾಕಾರರು ಹಂಚಿಕೊಂಡ ಮತ್ತೊಂದು ವಿಡಿಯೊದಲ್ಲಿ, ಇಮ್ರಾನ್ ಖಾನ್ ಮತ್ತು ಜೇನ್ ಮೇರಿ ಅವರು ತಮನ್ನು ಯಾಕೆ ವಶಕ್ಕೆ ಪಡೆಯುತ್ತಿದ್ದೀರಿ ಎಂದು ಪೊಲೀಸರನ್ನು ಪ್ರಶ್ನಿಸುತ್ತಿರುವುದು ಕಂಡುಬಂದಿದೆ. ಅಧಿಕಾರಿಗಳು ಯಾವುದೇ ಉತ್ತರ ನೀಡದೆ ತೆರಳುತ್ತಿರುವಾಗ , ಇಮ್ರಾನ್ ಖಾನ್ ‘ಜೈ ಹಿಂದ್‘ ಎಂದು ಘೋಷಣೆ ಕೂಗಿದ್ದಾರೆ.ವಶಕ್ಕೆ ಪಡೆದ ಸಂದರ್ಭದಲ್ಲಿ ಪೊಲೀಸ್ ವ್ಯಾನ್ನಿಂದಲೇ ಸೆಲ್ಫಿ ಫೋಟೊ ಹಂಚಿಕೊಂಡಿದ್ದ ಇಮ್ರಾನ್ ಖಾನ್, ‘ನಾನು ಡ್ರೈವ್ಗೆ ಹೋಗ್ತಿರೋ ಹಾಗೆ ಅನಿಸುತ್ತಿದೆ’ ಎಂದು ವ್ಯಂಗ್ಯವಾಗಿ ಬರೆದುಕೊಂಡಿದ್ದರು. ಈ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ನಟನ ಧೈರ್ಯಕ್ಕೆ ಅಭಿಮಾನಿಗಳಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. View this post on Instagram ಇಮ್ರಾನ್ ಖಾನ್ ಗಡೀಪಾರಿಗೆ ಆಗ್ರಹ:ಇನ್ನೊಂದೆಡೆ, ಈ ಘಟನೆಯ ಬೆನ್ನಲ್ಲೇ ಬಿಜೆಪಿ ಮುಖಂಡ ಕಿರೀಟ್ ಸೋಮಯ್ಯ , ನಟ ಇಮ್ರಾನ್ ಖಾನ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಇಮ್ರಾನ್ ಖಾನ್ ವಿದೇಶಿ ಪೌರತ್ವ ಹೊಂದಿದ್ದು (ಅಮೆರಿಕ), ಭಾರತದಲ್ಲಿ ಇಂತಹ ರಾಜಕೀಯ ಪ್ರತಿಭಟನೆಗಳಲ್ಲಿ ಭಾಗವಹಿಸಲು ಅವರಿಗೆ ಹೇಗೆ ಅವಕಾಶ ನೀಡಲಾಯಿತು? ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ ತಕ್ಷಣವೇ ಅವರನ್ನು ಗಡೀಪಾರು ಮಾಡಬೇಕು ಎಂದು 'ಎಕ್ಸ್'ನಲ್ಲಿ ಆಗ್ರಹಿಸಿದ್ದಾರೆ.Deport Deport Deport US citizen Actor #ImranKhanअमेरिकी नागरिक अभिनेता #इमरानखा को वापस भेजो डिपोर्ट deport करो pic.twitter.com/BAgx8T2IOH— Kirit Somaiya (@KiritSomaiya) October 11, 2026 ಸಿಜೆಪಿ ಪ್ರತಿಭಟನೆ LIVE | ಮೆಟ್ರೊ, ರೈಲು ನಿರ್ಬಂಧ, ಪ್ರತಿಭಟನಕಾರರ ಅಕ್ರಮ ವಶ ಬೇಡ: ಸುಪ್ರೀಂ