SIR Row | ರಾಹುಲ್ ಗಾಂಧಿ ಭೇಟಿಗೆ ಅನುಮತಿ ನಿರಾಕರಿಸಿದ ಸಿಜೆಐ ಸೂರ್ಯಕಾಂತ್
– ‘ವೋಟ್ ಚೋರಿ’, SIR ಪ್ರಕ್ರಿಯೆ ವಿರುದ್ಧ ಸುಪ್ರೀಂ ಮೆಟ್ಟಿಲೇರಲು ಇಂಡಿ ಒಕ್ಕೂಟ ಸಜ್ಜು – ಮನವಿ ಕೊಡೋ ಬದಲು ಕೋರ್ಟ್ಗೆ ಅರ್ಜಿ ಸಲ್ಲಿಸುವಂತೆ ಸಿಜೆಐ ಸೂಚನೆ ನವದೆಹಲಿ: ‘ವೋಟ್ ಚೋರಿ’ ಮತ್ತು ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಕುರಿತು ತಮ್ಮ ಆಕ್ಷೇಪಣೆ ತಿಳಿಸಲು ಅನುಮತಿ ಕೇಳಿದ್ದ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi) ಹಾಗೂ ಇ

– ‘ವೋಟ್ ಚೋರಿ’, SIR ಪ್ರಕ್ರಿಯೆ ವಿರುದ್ಧ ಸುಪ್ರೀಂ ಮೆಟ್ಟಿಲೇರಲು ಇಂಡಿ ಒಕ್ಕೂಟ ಸಜ್ಜು – ಮನವಿ ಕೊಡೋ ಬದಲು ಕೋರ್ಟ್ಗೆ ಅರ್ಜಿ ಸಲ್ಲಿಸುವಂತೆ ಸಿಜೆಐ ಸೂಚನೆ ನವದೆಹಲಿ: ‘ವೋಟ್ ಚೋರಿ’ ಮತ್ತು ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಕುರಿತು ತಮ್ಮ ಆಕ್ಷೇಪಣೆ ತಿಳಿಸಲು ಅನುಮತಿ ಕೇಳಿದ್ದ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi) ಹಾಗೂ ಇಂಡಿ ಒಕ್ಕೂಟದ ನಿಯೋಗಕ್ಕೆ ಸಿಜೆಐ ಸೂರ್ಯಕಾಂತ್ (CJI Suryakant) ಅನುಮತಿ ನಿರಾಕರಿಸಿದ್ದಾರೆ ಎಂದು ವರದಿಯಾಗಿದೆ. Yesterday, the nation’s young came out in Delhi to peacefully protest. They came with love in their hearts, not hatred or anger. They were beaten, both by cops and BJP goons. This is not the India we want. Tomorrow, we will march to the Supreme Court as Indians, united beyond party, gender, caste, community and state. Youth, all opposition parties, civil society groups, all those who believe in democracy and stand by the Constitution of India, will walk with us. We will submit a memorandum to the Chief Justice on behalf of the nation, demanding an end to vote chori, halting of SIR and the resignation of Gyanesh Kumar. Narendra Modi, Amit Shah, Ajit Doval and Mohan Bhagwat cannot silence India’s voice. These cowards cannot intimidate us. They will have to step aside. We will march together, with love, brotherhood and patriotism. Daro mat. Tomorrow, all of India will march to the Supreme Court. कल दिल्ली में देश का युवा शांतिपूर्ण विरोध के लिए सड़कों पर उतरा। उनके दिलों में नफ़रत या गुस्सा नहीं, मोहब्बत थी। लेकिन उन्हें पुलिस और BJP के गुंडों, दोनों ने पीटा। ऐसा भारत हम नहीं चाहते। कल, सोमवार 12 अक्टूबर को, हम भारतीय होने के नाते सुप्रीम कोर्ट तक मार्च करेंगे। पार्टी, महिला-पुरुष, जाति, समुदाय और राज्य की हर दीवार से ऊपर उठकर, हम सब एक साथ चलेंगे। देश का युवा, तमाम विपक्षी दल, सिविल सोसाइटी और लोकतंत्र में विश्वास रखने वाले, भारत के संविधान के साथ खड़े सभी लोग हमारे साथ चलेंगे। हम देश की ओर से मुख्य न्यायाधीश को एक ज्ञापन सौंपेंगे। हमारी माँग है – वोट चोरी बंद हो, SIR पर रोक लगे और ज्ञानेश कुमार इस्तीफ़ा दें। नरेंद्र मोदी, अमित शाह, अजित डोभाल और मोहन भागवत भारत की आवाज़ को दबा नहीं सकते। ये कायर हमें डरा नहीं सकते। इन्हें पीछे हटना ही होगा। हम सब साथ चलेंगे – मोहब्बत, भाईचारे और देशभक्ति के साथ। डरो मत। कल पूरा भारत सुप्रीम कोर्ट तक मार्च करेगा। #ChaloDilli — Rahul Gandhi (@RahulGandhi) October 11, 2026 ಉನ್ನತ ಮೂಲಗಳನ್ನಾಧರಿಸಿ ಈ ಬಗ್ಗೆ ಮಾಧ್ಯಮಗಳು ವರದಿ ಮಾಡಿವೆ. ರಾಹುಲ್ ಗಾಂಧಿ ಮತ್ತು ನಿಯೋಗಕ್ಕೆ ಈ ಕುರಿತು ವಿವರವಾದ ಉತ್ತರ ಕಳುಹಿಸಲಾಗಿದೆ ಎನ್ನಲಾಗಿದೆ. ಮನವಿ ಸಲ್ಲಿಸುವ ಬದಲು ಅರ್ಜಿ ಸಲ್ಲಿಸಿ ಎಂದ ಸಿಜೆಐ? ಎಸ್ಐಆರ್ ಹಾಗೂ ವೋಟ್ ಚೋರಿ ವಿಚಾರ ಈಗಾಗಲೇ ನ್ಯಾಯಾಲಯದ ಪರಿಗಣನೆಯಲ್ಲಿರುವುದರಿಂದ (sub judice), ಪ್ರತ್ಯೇಕ ಮನವಿ ನೀಡುವ ಬದಲು ನ್ಯಾಯಾಲಯದ ಮೂಲಕವೇ ಕಾನೂನು ಪ್ರಕ್ರಿಯೆ ಮುಂದುವರಿಸಬೇಕು ಎಂದು ಸಿಜೆಐ (CJI) ಸೂಚಿಸಿದ್ದಾರೆ ಎನ್ನಲಾಗಿದೆ. Tomorrow, 12th October, India marches peacefully as one to the Supreme Court. Students, civil society organisations, Opposition parties: Please join us to defend our democracy. #ChaloDilli https://t.co/0daRmwxOoX — Rahul Gandhi (@RahulGandhi) October 11, 2026 ಅಂದರೆ, ಮತದಾರರ ಪಟ್ಟಿಗೆ ಸಂಬಂಧಿಸಿದ ಆರೋಪಗಳು ಮತ್ತು ಎಸ್ಐಆರ್ ಕುರಿತು ರಾಹುಲ್ ಗಾಂಧಿ ಹಾಗೂ ಇಂಡಿ ಒಕ್ಕೂಟ ನೇರವಾಗಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸುವಂತೆ ಸೂಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಸೋಮವಾರ ಸುಪ್ರೀಂ ಕೋರ್ಟ್ ಕಡೆಗೆ ಇಂಡಿ ಕೂಟ ಪಾದಯಾತ್ರೆ ಈ ಬೆಳವಣಿಗೆಯ ಬೆನ್ನಲ್ಲೇ ಸೋಮವಾರ (ಅ.12) ಇಂಡಿ ಒಕ್ಕೂಟ ಸುಪ್ರೀಂ ಕೋರ್ಟ್ ಕಡೆಗೆ ಪ್ರತಿಭಟನಾ ಮೆರವಣಿಗೆ ನಡೆಸಲು ಸಜ್ಜಾಗಿದೆ. ರಾಹುಲ್ ಗಾಂಧಿ ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದು, ಯುವಕರು, ಪ್ರತಿಪಕ್ಷಗಳು ಹಾಗೂ ನಾಗರಿಕ ಸಮಾಜದ ಸಂಘಟನೆಗಳು ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ಕರೆ ನೀಡಿದ್ದಾರೆ. ನಾವು ಭಾರತೀಯರಾಗಿ, ಪಕ್ಷ, ಲಿಂಗ, ಜಾತಿ, ಸಮುದಾಯ ಮತ್ತು ರಾಜ್ಯದ ಭೇದ ಮರೆತು ಒಗ್ಗಟ್ಟಾಗಿ ಸುಪ್ರೀಂ ಕೋರ್ಟ್ ಕಡೆಗೆ ಮೆರವಣಿಗೆ ನಡೆಸುತ್ತೇವೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.