ಮೈಸೂರು ದಸರಾ: ಲಲಿತಕಲೆ, ಕರಕುಶಲ ಶಿಬಿರ ಉದ್ಘಾಟನೆ
ಮೈಸೂರು: ದಸರಾ ಅಂಗವಾಗಿ ಇಲ್ಲಿನ ಸಿದ್ಧಾರ್ಥನಗರದ ಕಾವಾ (ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜು) ಆವರಣದಲ್ಲಿ ಆಯೋಜಿಸಿರುವ ಲಲಿತಕಲೆ ಮತ್ತು ಕರಕುಶಲ ಶಿಬಿರವನ್ನು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ಎಸ್. ತಂಗಡಗಿ ಭಾನುವಾರ ಉದ್ಘಾಟಿಸಿದರು. ರಾಷ್ಟ್ರ ಮಟ್ಟದ ಕರಕುಶಲ ಕಲಾವಿದರ ಕಲಾಕೃತಿಗಳ ಪ್ರದರ್ಶನವನ್ನು ಅಧಿಕಾರಿಗಳೊಡನೆ ವೀಕ್ಷಿಸಿದರು.ನಂತರ ಮಾತನಾಡಿ, ‘

ಮೈಸೂರು: ದಸರಾ ಅಂಗವಾಗಿ ಇಲ್ಲಿನ ಸಿದ್ಧಾರ್ಥನಗರದ ಕಾವಾ (ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜು) ಆವರಣದಲ್ಲಿ ಆಯೋಜಿಸಿರುವ ಲಲಿತಕಲೆ ಮತ್ತು ಕರಕುಶಲ ಶಿಬಿರವನ್ನು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ಎಸ್. ತಂಗಡಗಿ ಭಾನುವಾರ ಉದ್ಘಾಟಿಸಿದರು. ರಾಷ್ಟ್ರ ಮಟ್ಟದ ಕರಕುಶಲ ಕಲಾವಿದರ ಕಲಾಕೃತಿಗಳ ಪ್ರದರ್ಶನವನ್ನು ಅಧಿಕಾರಿಗಳೊಡನೆ ವೀಕ್ಷಿಸಿದರು.ನಂತರ ಮಾತನಾಡಿ, ‘ಈ ಸಂಸ್ಥೆಯು 1913ರಲ್ಲಿ ತಾಂತ್ರಿಕ ಶಿಕ್ಷಣ ಶಾಲೆ ಹಾಗೂ ಸಂಸ್ಥೆಯಾಗಿ ಪ್ರಾರಂಭಗೊಂಡು, ಸ್ವಾತಂತ್ರ್ಯದ ನಂತರ ದೃಶ್ಯಕಲೆ ಮತ್ತು ಶಿಕ್ಷಣವನ್ನು ಉನ್ನತೀಕರಿಸಿ, 1989ರಲ್ಲಿ ಚಾಮರಾಜೇಂದ್ರ ದೃಶ್ಯಕಲಾ ಅಕಾಡೆಮಿ ಪ್ರಾರಂಭವಾಯಿತು. ಲಲಿತಕಲೆ ಮತ್ತು ಕರಕುಶಲ ಕಲಾವಿದರಿಗೆ, ಕಲೆಗೆ ಪ್ರೋತ್ಸಾಹ ನೀಡುವ ಕೆಲಸವನ್ನು ಸರ್ಕಾರ ಮಾಡುತ್ತಾ ಬಂದಿದೆ’ ಎಂದರು.‘ವಿದ್ಯಾರ್ಥಿಗಳಿಗೆ ತಿಂಗಳಿಗೆ ಕನಿಷ್ಠ ₹ 750 ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ₹1ಸಾವಿರ ಸಹಾಯಧನ ಭರಿಸುವ ಕೆಲಸ ಮಾಡಲಾಗುತ್ತಿದೆ. ಇಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳು ಮಾಧ್ಯಮ ಕ್ಷೇತ್ರ ಹಾಗೂ ವನ್ಯಜೀವಿ ಛಾಯಾಗ್ರಹಣ ಮೊದಲಾದ ಕ್ಷೇತ್ರಗಳಲ್ಲಿ ಉತ್ತಮ ಕೆಲಸ ಕಂಡುಕೊಳ್ಳುತ್ತಿದ್ದಾರೆ’ ಎಂದು ಹೇಳಿದರು.‘ಈ ಸಂಸ್ಥೆಯಲ್ಲಿ ಹುದ್ದೆಗಳ ನೇಮಕಾತಿಯ ಅಗತ್ಯವಿದೆ. ಮೀಸಲಾತಿಗೆ ಸಂಬಂಧಿಸಿದ ಕೆಲವು ಗೊಂದಲಗಳಿದ್ದವು, ಅವುಗಳಿಗೆ ಈಗ ಪರಿಹಾರ ಕಂಡುಕೊಳ್ಳಲಾಗಿದೆ. ಇಲಾಖೆಯ ಕಾರ್ಯದರ್ಶಿ ಜೊತೆ ಚರ್ಚಿಸಿ, ಆದಷ್ಟು ಬೇಗ ನೇಮಕಾತಿ ಪ್ರಕ್ರಿಯೆ ಕೈಗೊಳ್ಳಲು ಕ್ರಮ ವಹಿಸಲಾಗುವುದು’ ಎಂದರು.‘ಮೈಸೂರು ಕಲೆಗಳ ಬೀಡು. ಮಹಾರಾಜರು ಪ್ರಾರಂಭಿಸಿದ ಈ ಕಲಾಶಾಲೆ ಇನ್ನೂ ಎತ್ತರಕ್ಕೆ ಬೆಳೆಯಲಿ. ಈ ಸಂಸ್ಥೆಯ ಹಾಗೂ ಕಲೆಯ ಬೆಳವಣಿಗೆಗೆ ಸರ್ಕಾರದಿಂದ ಎಲ್ಲ ರೀತಿಯ ಸಹಕಾರ ಮತ್ತು ಬೆಂಬಲ ನೀಡಲಾಗುವುದು’ ಎಂದು ತಿಳಿಸಿದರು.ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಅಧ್ಯಕ್ಷ ಎಂ.ಸಿ. ರಮೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕರ್ನಾಟಕ ಕಾರ್ಯದರ್ಶಿ ಮಂಜುಶ್ರೀ, ನಿರ್ದೇಶಕಿ ವಸುಂಧರಾ, ಕಾವಾ ಡೀನ್ ಎ.ದೇವರಾಜ್ ಇದ್ದರು.