ಮತ್ತೆ ಪ್ರತಿಭಟಿಸಲ್ಲ ಎಂದು ಬಾಂಡ್ ಬರೆದುಕೊಟ್ಟಿಲ್ಲ: ಸಿಜೆಪಿ ಸಂಸ್ಥಾಪಕ ದೀಪ್ಕೆ
ನಾಗಪುರ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಪದಚ್ಯುತಗೊಳಿಸುವಂತೆ ಮತ್ತೆ ಪ್ರತಿಭಟನೆ ನಡೆಸುವುದಿಲ್ಲ ಎಂದು ನಾನಾಗಲೀ ಅಥವಾ ನಮ್ಮ ಪಕ್ಷದ ನಾಯಕರಾಗಲಿ ಯಾವುದೇ ಮುಚ್ಚಳಿಕೆ ಪತ್ರಕ್ಕೆ (ಬಾಂಡ್) ಸಹಿ ಹಾಕಿಲ್ಲ ಎಂದು ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಸ್ಥಾಪಕ ಅಭಿಜಿತ್ ದೀಪ್ಕೆ ಭಾನುವಾರ ಹೇಳಿದ್ದಾರೆ.ದೆಹಲಿ | 2ನೇ ದಿನಕ್ಕೆ ಕಾಲಿಟ್ಟ CJP ಪ್ರತಿ

ನಾಗಪುರ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಪದಚ್ಯುತಗೊಳಿಸುವಂತೆ ಮತ್ತೆ ಪ್ರತಿಭಟನೆ ನಡೆಸುವುದಿಲ್ಲ ಎಂದು ನಾನಾಗಲೀ ಅಥವಾ ನಮ್ಮ ಪಕ್ಷದ ನಾಯಕರಾಗಲಿ ಯಾವುದೇ ಮುಚ್ಚಳಿಕೆ ಪತ್ರಕ್ಕೆ (ಬಾಂಡ್) ಸಹಿ ಹಾಕಿಲ್ಲ ಎಂದು ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಸ್ಥಾಪಕ ಅಭಿಜಿತ್ ದೀಪ್ಕೆ ಭಾನುವಾರ ಹೇಳಿದ್ದಾರೆ.ದೆಹಲಿ | 2ನೇ ದಿನಕ್ಕೆ ಕಾಲಿಟ್ಟ CJP ಪ್ರತಿಭಟನೆ: 100ಕ್ಕೂ ಹೆಚ್ಚು ಮಂದಿ ವಶಕ್ಕೆಸ್ವಗ್ರಾಮ ಮಹಾರಾಷ್ಟ್ರದ ಹಿಂಗೋಲಿಗೆ ತೆರಳುವ ಮುನ್ನ ನಾಗಪುರ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾವು ಮತ್ತೆ ಬೀದಿಗಿಳಿದು ಹೋರಾಟ ನಡೆಸಲಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಅವರಿಗೆ ನಾವು ಹೆದರುವುದಿಲ್ಲ ಎಂದು ಆಕ್ರೋಶ ಹೊರಹಾಕಿದರು.Haven’t signed any bond that says we won’t protest. We will hit the streets again.— Abhijeet Dipke (@abhijeet_dipke) October 11, 2026 ನನ್ನನ್ನು ನೂರು ಬಾರಿಯಾದರೂ ಜೈಲಿಗೆ ಹಾಕಿ; ನಿಮ್ಮ ಸರ್ವಾಧಿಕಾರಕ್ಕೆ ಹೆದರಿ ನಾವು ಹಿಂಜರಿಯುವುದಿಲ್ಲ. ಈ ಸರ್ವಾಧಿಕಾರವನ್ನು ನಾವು ಶೀಘ್ರವೇ ಕೊನೆಗಾಣಿಸುತ್ತೇವೆ ಎಂದು ದೀಪ್ಕೆ ವಾಗ್ದಾಳಿ ನಡೆಸಿದ್ದಾರೆ.ಅಜ್ಜಿ ನಿಧನದ ಬಗ್ಗೆ ದೀಪ್ಕೆಗೆ ಹೇಳಿದ್ವಿ, ಪೋಷಕರ ಆರೋಪ ನಿಜವಲ್ಲ: ದೆಹಲಿ ಪೊಲೀಸ್