ಸೌದಿ ಏರ್ಪೋರ್ಟ್ ಮೇಲೆ ಹೌತಿ ದಾಳಿ – ಗಾಯಗೊಂಡಿದ್ದ ಓರ್ವ ಭಾರತೀಯ ಸಾವು
– ಮೃತರ ಕುಟುಂಬಕ್ಕೆ ವಿದೇಶಾಂಗ ಸಚಿವಾಲಯದಿಂದ ನೆರವಿನ ಭರವಸೆ ರಿಯಾದ್: ಸೌದಿ ಅರೇಬಿಯಾದ (Saudi Arabia) ರಾಜಧಾನಿ ರಿಯಾದ್ನ ಏರ್ಪೋರ್ಟ್ ಮೇಲೆ ನಡೆದ ದಾಳಿಯಲ್ಲಿ ಗಾಯಗೊಂಡಿದ್ದ 11 ಭಾರತೀಯರ ಪೈಕಿ ಓರ್ವ ಮೃತಪಟ್ಟಿರುವುದಾಗಿ ರಿಯಾದ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಭಾನುವಾರ ತಿಳಿಸಿದೆ. Update regarding Riyadh Airport attack on October 10. It

– ಮೃತರ ಕುಟುಂಬಕ್ಕೆ ವಿದೇಶಾಂಗ ಸಚಿವಾಲಯದಿಂದ ನೆರವಿನ ಭರವಸೆ ರಿಯಾದ್: ಸೌದಿ ಅರೇಬಿಯಾದ (Saudi Arabia) ರಾಜಧಾನಿ ರಿಯಾದ್ನ ಏರ್ಪೋರ್ಟ್ ಮೇಲೆ ನಡೆದ ದಾಳಿಯಲ್ಲಿ ಗಾಯಗೊಂಡಿದ್ದ 11 ಭಾರತೀಯರ ಪೈಕಿ ಓರ್ವ ಮೃತಪಟ್ಟಿರುವುದಾಗಿ ರಿಯಾದ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಭಾನುವಾರ ತಿಳಿಸಿದೆ. Update regarding Riyadh Airport attack on October 10. It is learnt that one Indian national injured in the Riyadh attack has unfortunately lost his life today. We convey our heartfelt condolences to the family of the deceased. We are in touch with the family and will provide all support for ensuring the early repatriation of mortal remains. @MEAIndia — India in Saudi Arabia (@IndianEmbRiyadh) October 11, 2026 ಮೃತರ ಕುಟುಂಬಕ್ಕೆ ರಾಯಭಾರ ಕಚೇರಿಯು ಸಂತಾಪ ಸೂಚಿಸಿದೆ. ಅಲ್ಲದೇ ಮೃತರ ಪಾರ್ಥಿವ ಶರೀರವನ್ನ ಶೀಘ್ರದಲ್ಲೇ ತಾಯ್ನಾಡಿಗೆ ರವಾನಿಸಲು ಅಗತ್ಯ ಬೆಂಬಲ ನೀಡುವುದಾಗಿ ಭರವಸೆ ನೀಡಿದೆ. ಅಲ್ಲದೇ ದಾಳಿಯಲ್ಲಿ ಗಾಯಗೊಂಡಿದ್ದ ಸುಮಾರು 300 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ವರದಿಗಳು ತಿಳಿಸಿವೆ. ಮೃತರ ಕುಟುಂಬಕ್ಕೆ ನೆರವಿನ ಭರವಸೆ ಘಟನೆ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ರಾಯಭಾರ ಕಚೇರಿಯು, ಅಕ್ಟೋಬರ್ 10 ರಂದು ರಿಯಾದ್ ವಿಮಾನ ನಿಲ್ದಾಣದ ಮೇಲೆ ಹೌತಿ ಬಂಡುಕೋರರು ನಡೆಸಿದ ದಾಳಿಯಲ್ಲಿ ಗಾಯಗೊಂಡಿದ್ದ ಓರ್ವ ಭಾರತೀಯ ಪ್ರಜೆ ಮೃತಪಟ್ಟಿದ್ದಾರೆ. ಮೃತರ ಕುಟುಂಬಕ್ಕೆ ನಾವು ನಮ್ಮ ಆಳವಾದ ಸಂತಾಪ ವ್ಯಕ್ತಪಡಿಸುತ್ತೇವೆ. ನಾವು ಕುಟುಂಬದೊಂದಿಗೆ ಸಂಪರ್ಕದಲ್ಲಿದ್ದೇವೆ ಮತ್ತು ಮೃತರ ಪಾರ್ಥಿವ ಶರೀರವನ್ನ ಶೀಘ್ರವಾಗಿ ತಾಯ್ನಾಡಿಗೆ ತಲುಪಿಸಲು ಅಗತ್ಯವಿರುವ ಎಲ್ಲ ನೆರವನ್ನ ನೀಡುತ್ತೇವೆ ಎಂದು ಮಾಹಿತಿ ಹಂಚಿಕೊಂಡಿದೆ. ಭಾರತೀಯ ಪ್ರಜೆಯ ಸಾವಿನ ಬಗ್ಗೆ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಕೂಡ ದುಃಖ ವ್ಯಕ್ತಪಡಿಸಿದ್ದಾರೆ. ಶೋಕತಪ್ತ ಕುಟುಂಬಕ್ಕೆ ಸಂತಾಪ ಸೂಚಿಸಿದ ಅವರು, ಭಾರತೀಯ ರಾಯಭಾರ ಕಚೇರಿಯಿಂದ ಸಾಧ್ಯವಿರುವ ಎಲ್ಲ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ.