ಮಂಡ್ಯ: ಶ್ರದ್ಧಾ–ಭಕ್ತಿಯಿಂದ ಪಿತೃ ಪಕ್ಷ ಆಚರಣೆ
ಮಂಡ್ಯ: ‘ದೇವರನ್ನು ಮರೆತರೂ ಪಿತೃ ಪಕ್ಷ ಮರಿಬೇಡ’ ಎನ್ನುವ ನಾಣ್ಣುಡಿಯಂತೆ ಶನಿವಾರ ಮಹಾಲಯ ಅಮಾವಾಸ್ಯೆಯಂದು ಜಿಲ್ಲೆಯಾದ್ಯಂತ ಜನರು ಮನೆಗಳಲ್ಲಿ ವಿಧಿವಶರಾದ ಹಿರಿಯರಿಗೆ ಶ್ರದ್ಧಾಭಕ್ತಿಯಿಂದ ಎಡೆ ಇಟ್ಟು ಪೂಜೆ ಸಲ್ಲಿಸಿದರು.ಬೆಳಿಗ್ಗಿನಿಂದಲೇ ಗ್ರಾಮದ ದೇವಾಲಯಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆದ ಜನರು ತಮ್ಮ ಕುಟುಂಬದಲ್ಲಿ ವಿಧಿವಶರಾದವರ ಸಮಾಧಿ ಬಳಿ ಹೋಗಿಯೂ ಪೂಜೆ ಸಲ್

ಮಂಡ್ಯ: ‘ದೇವರನ್ನು ಮರೆತರೂ ಪಿತೃ ಪಕ್ಷ ಮರಿಬೇಡ’ ಎನ್ನುವ ನಾಣ್ಣುಡಿಯಂತೆ ಶನಿವಾರ ಮಹಾಲಯ ಅಮಾವಾಸ್ಯೆಯಂದು ಜಿಲ್ಲೆಯಾದ್ಯಂತ ಜನರು ಮನೆಗಳಲ್ಲಿ ವಿಧಿವಶರಾದ ಹಿರಿಯರಿಗೆ ಶ್ರದ್ಧಾಭಕ್ತಿಯಿಂದ ಎಡೆ ಇಟ್ಟು ಪೂಜೆ ಸಲ್ಲಿಸಿದರು.ಬೆಳಿಗ್ಗಿನಿಂದಲೇ ಗ್ರಾಮದ ದೇವಾಲಯಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆದ ಜನರು ತಮ್ಮ ಕುಟುಂಬದಲ್ಲಿ ವಿಧಿವಶರಾದವರ ಸಮಾಧಿ ಬಳಿ ಹೋಗಿಯೂ ಪೂಜೆ ಸಲ್ಲಿಸಿದರು. ಆ ಮೂಲಕ ಕುಟುಂಬದ ಹಿರಿಯರನ್ನು ನೆನೆಯುತ್ತಾ ಕೆಲವರ ಕಣ್ಣಾಲಿಗೆ ತುಂಬಿ ಬಂದವು. ನಂತರ ಸಂಜೆ ವೇಳೆಗೆ ತಮ್ಮ ಮನೆಗಳಲ್ಲಿ ಎಡೆ ಇಟ್ಟು ಪೂಜೆ ಸಲ್ಲಿಸಿದರು.ನಗರ, ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿ ಪಿತೃ ಪಕ್ಷ ಹಬ್ಬವನ್ನು ಆಚರಿಸಲಾಗುತ್ತದೆ. ಅದರಂತೆ ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಅಮಾವಾಸ್ಯೆ ದಿನದಂದೇ ಹಬ್ಬ ಆಚರಿಸುವುದು ವಾಡಿಕೆಯಾದರೆ ಇನ್ನೂ ಕೆಲವೆಡೆ ಆಯುಧಪೂಜೆ, ಏಕಾದಶಿ ಉಪವಾಸದ ಹಬ್ಬದ (ಆಷಾಢ) ವೇಳೆ ಪಿತೃಪಕ್ಷ ಆಚರಿಸುವುದುಂಟು.ಶನಿವಾರ ಬೆಳಿಗ್ಗೆಯಿಂದಲೇ ಎಲ್ಲ ಮನೆಗಳಲ್ಲಿ ಹಬ್ಬದ ಸಿದ್ಧತೆ ನಡೆದಿತ್ತು. ಎಡೆಗೆ ಚಕ್ಕುಲಿ, ನಿಪ್ಪಟ್ಟು, ವಡೆ, ಕಜ್ಜಾಯ, ಕೋಡುಬಳೆ ಸೇರಿದಂತೆ ಎಣ್ಣೆಯಲ್ಲಿ ಕರಿದ ತಿಂಡಿಗಳು, ಬೇಕರಿ ತಿನಿಸುಗಳನ್ನು ಇಟ್ಟು ಪೂಜಿಸಲಾಯಿತು. ಈ ಹಬ್ಬಕ್ಕೆಂದು ನೆಂಟರಿಷ್ಟರನ್ನು ಆಹ್ವಾನಿಸಿ ಬಾಡೂಟ ಹಾಗೂ ಸಿಹಿ ಊಟ ಬಡಿಸಿದರು.ಬೆಳಕವಾಡಿ ವರದಿ: ಬೋಪ್ಪೇಗೌಡನಪುರ (ಬಿ.ಜಿ.ಪುರ) ಹೋಬಳಿಯ ವಿವಿಧ ದೇವಸ್ಥಾನಗಳಲ್ಲಿ ಮಹಾಲಯ ಅಮಾವಾಸ್ಯೆ ಅಂಗವಾಗಿ ದೇವರಿಗೆ ವಿಶೇಷ ಪೂಜೆ ನಡೆಯಿತು.ಬೆಳಕವಾಡಿಯ ವೀರಭದ್ರಸ್ವಾಮಿ, ರಾಮಾಂಜನೇಯ ಸ್ವಾಮಿ, ಚೌಡೇಶ್ವರಿ, ಬಿ.ಜಿ.ಪುರ ಧರೆಗೆ ದೊಡ್ಡವರು ಮಂಟೇಸ್ವಾಮಿ, ಮುಟ್ಟನಹಳ್ಳಿ ದೊಡ್ಡಮ್ಮತಾಯಿ, ಸರಗೂರು ಮಹದೇಶ್ವರ, ತೆಂಕಹಳ್ಳಿ ಶನೇಶ್ವರ ದೇವರಿಗೆ ವಿವಿಧ ಹೂವುಗಳಿಂದ ಅಲಂಕರಿಸಿ, ಅರಿಸಿನ ಕುಂಕುಮಾರ್ಚನೆ, ಧೂಪ, ದೀಪ, ನೈವೇದ್ಯ ಹಾಗೂ ಮಹಾಮಂಗಳಾರತಿ ತೀರ್ಥ, ಪ್ರಸಾದ ವಿನಿಯೋಗವನ್ನು ಅರ್ಚಕರು ನೆರವೇರಿಸಿದರು.ಬೆಳಿಗ್ಗೆಯಿಂದಲೇ ಭಕ್ತರು ದೇವಸ್ಥಾನಕ್ಕೆ ಆಗಮಿಸಿ ದೇವರಿಗೆ ಪೂಜೆ ಸಲ್ಲಿಸಿ ದರ್ಶನ ಪಡೆದು ಪಂಜಿನ ಸೇವೆ, ತಡೆ ಹೊಡೆಸಿ ಹರಕೆ ತೀರಿಸಿದರು.ಕೆ.ಆರ್.ಪೇಟೆ ವರದಿ: ತಾಲ್ಲೂಕಿನಾದ್ಯಂತ ಮಹಾಲಯ ಅಮಾವಾಸ್ಯೆ ಪ್ರಯುಕ್ತ ಪಿತೃಗಳಿಗೆ ದಾನ, ತರ್ಪಣ, ಪಿಂಡ ಪ್ರದಾನ ಮಾಡುವ ಧಾರ್ಮಿಕ ಕಾರ್ಯಗಳು ಶನಿವಾರ ಶ್ರದ್ಧಾ–ಭಕ್ತಿಯಿಂದ ನಡೆದವು.ಕುಟುಂಬದ ಹಿರಿಯರಿಗೆ ಪೂಜೆ ಸಲ್ಲಿಸುವ ಈ ದಿನದಂದು ದೂರ ದೂರದಲ್ಲಿರುವ ಕುಟುಂಬದ ಸದಸ್ಯರು ಮನೆಗೆ ಬಂದು ಎಲ್ಲರ ಒಡಗೂಡಿ ಗತಿಸಿದ ಹಿರಿಯರನ್ನು ಸ್ಮರಿಸಿ ಎಡೆ ಇಟ್ಟು ಪೂಜೆ ಸಲ್ಲಿಸಿದರು.ಮನೆಗಳಲ್ಲಿ ಕುಟುಂಬದ ಯಜಮಾನನೊಂದಿಗೆ ನವಗ್ರಹಗಳನ್ನು ಪೂಜಿಸಿ ದಾನ ನೀಡಿದರೆ, ಕೆಲವೆಡೆ ದಾಸಪ್ಪಗಳನ್ನು ಕರೆಸಿ ಶಂಕ ಜಾಗಟೆ ಬಾರಿಸಿ, ಧೂಪ- ದೀಪ ಹಾಕಿ ಹಿರಿಯರಿಗೆ ಎಡೆ ಇಡುವ ಕಾರ್ಯಗಳು ನಡೆದವು. ಹೇಮಾವತಿ ನದಿ ತೀರ ಸೇರಿದಂತೆ ಹಲವು ಕಡೆ ಗತಿಸಿದ ಹಿರಿಯರಿಗೆ ತರ್ಪಣ, ಪಿಂಡ ಪ್ರದಾನ ಕಾರ್ಯಗಳು ವೈದಿಕರ ನೇತೃತ್ವದಲ್ಲಿ ನಡೆದವು. ಪಟ್ಟಣದ ಈಶ್ವರ ದೇವಾಲಯದಲ್ಲಿ ನಡೆದ ಪ್ರತ್ಯಂಗಿರ ಹೋಮ ನಡೆಯಿತು. ನೂರಾರು ಭಕ್ತರು ಹೋಮದಲ್ಲಿ ಭಾಗವಹಿಸಿ, ದೇವರ ದರ್ಶನ ಪಡೆದರು.ದೇವರ ದರ್ಶನ ಪಡೆದ ಭಕ್ತರುಹಲಗೂರು: ಮಹಾಲಯ ಅಮಾವಾಸ್ಯೆಯ ಪ್ರಯುಕ್ತ ಹಲಗೂರು ಸುತ್ತಮುತ್ತಲಿನ ವಿವಿಧ ದೇವಾಲಯಗಳಲ್ಲಿ ಶನಿವಾರ ವಿಶೇಷ ಪೂಜಾ ಕಾರ್ಯಕ್ರಮಗಳು ಶ್ರದ್ಧಾ–ಭಕ್ತಿಯಿಂದ ನಡೆದವು. ದೇವಾಲಯಗಳಿಗೆ ಆಗಮಿಸಿದ ಸಾವಿರಾರು ಭಕ್ತರು ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದರು.ಮುತ್ತತ್ತಿ ರಸ್ತೆಯಲ್ಲಿರುವ, ಭೀಮಾ ನದಿಯ ಸಮೀಪದ ಸೋಮೇಶ್ವರ ದೇವಸ್ಥಾನದಲ್ಲಿ ಬೆಳಿಗ್ಗೆ ಪೂಜೆ ನೆರವೇರಿಸಲಾಯಿತು. ಪ್ರಾತಃಕಾಲದಲ್ಲಿ ಸೋಮೇಶ್ವರ ದೇವರ ಮೂರ್ತಿಯನ್ನು ಶುಚಿಗೊಳಿಸಿ ಹಾಲಿನ ಅಭಿಷೇಕ, ಪಂಚಾಮೃತ ಅಭಿಷೇಕ ಹಾಗೂ ಏಕವಾರ ರುದ್ರಾಭಿಷೇಕ ನೆರವೇರಿಸಲಾಯಿತು. ಬಳಿಕ ವಿವಿಧ ಪುಷ್ಪಗಳಿಂದ ದೇವರನ್ನು ಅಲಂಕರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ಪೂಜೆಯ ನಂತರ ದೇವಾಲಯಕ್ಕೆ ಆಗಮಿಸಿದ ಭಕ್ತರಿಗೆ ಪ್ರಸಾದ ವಿತರಿಸಲಾಯಿತು.ಮುತ್ತತ್ತಿಯ ಕಾವೇರಿ ನದಿ ದಡದಲ್ಲಿರುವ ಪುರಾಣ ಪ್ರಸಿದ್ಧ ಅಂಜನೇಯ ಸ್ವಾಮಿ ದೇವಾಲಯದಲ್ಲಿಯೂ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಸಾವಿರಾರು ಭಕ್ತರು ದೇವರ ದರ್ಶನ ಪಡೆದು ಭಕ್ತಿಭಾವ ಮೆರೆದರು.ಸಮೀಪದ ದಳವಾಯಿ ಮತ್ತು ಕೋಡಿಹಳ್ಳಿ ಗ್ರಾಮಗಳ ನಡುವೆ, ಗುಂಡಾಪುರ ಗೇಟ್ ಸಮೀಪವಿರುವ ಬಾಲ ಶನೇಶ್ವರ ಸ್ವಾಮಿ ದೇವಾಲಯದಲ್ಲಿಯೂ ಮಹಾಲಯ ಅಮಾವಾಸ್ಯೆಯ ಅಂಗವಾಗಿ ವಿಶೇಷ ಪೂಜೆ ನೆರವೇರಿಸಲಾಯಿತು. ಪೂಜಾ ಕಾರ್ಯಕ್ರಮದ ಬಳಿಕ ಭಕ್ತರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.ಶ್ರದ್ಧಾ–ಭಕ್ತಿಯಿಂದ ಆಚರಣೆಕೆ.ಆರ್.ಪೇಟೆ: ತಾಲ್ಲೂಕಿನಾದ್ಯಂತ ಮಹಾಲಯ ಅಮಾವಾಸ್ಯೆ ಪ್ರಯುಕ್ತ ಪಿತೃಗಳಿಗೆ ದಾನ, ತರ್ಪಣ, ಪಿಂಡ ಪ್ರದಾನ ಮಾಡುವ ಧಾರ್ಮಿಕ ಕಾರ್ಯಗಳು ಶನಿವಾರ ಶ್ರದ್ಧಾ–ಭಕ್ತಿಯಿಂದ ನಡೆದವು.261011-40-1021125858