ಅಜ್ಜಿ ನಿಧನದ ಬಗ್ಗೆ ದೀಪ್ಕೆಗೆ ಹೇಳಿದ್ವಿ, ಪೋಷಕರ ಆರೋಪ ನಿಜವಲ್ಲ: ದೆಹಲಿ ಪೊಲೀಸ್
ನವದೆಹಲಿ: 'ಪೊಲೀಸ್ ಕಸ್ಟಡಿಯಲ್ಲಿದ್ದ ಕಾಕ್ರೋಚ್ ಜನತಾ ಪಾರ್ಟಿಯ (ಸಿಜೆಪಿ) ಸಂಸ್ಥಾಪಕ ಅಭಿಜಿತ್ ದೀಪ್ಕೆ ಅವರಿಗೆ ಅಜ್ಜಿಯ ನಿಧನದ ಸುದ್ದಿ ತಿಳಿಸಿರಲಿಲ್ಲ' ಎಂಬ ಪೋಷಕರ ಆರೋಪವನ್ನು ದೆಹಲಿ ಪೊಲೀಸರು ತಳ್ಳಿ ಹಾಕಿದ್ದಾರೆ.ಈ ಕುರಿತು ವಿಡಿಯೊವನ್ನು ಬಿಡುಗಡೆ ಮಾಡಿರುವ ಪೊಲೀಸರು, 'ಅಜ್ಜಿಯ ಸಾವು ಹಾಗೂ ಅಂತ್ಯಸಂಸ್ಕಾರದ ಸಮಯದ ಕುರಿತು ವಿಷಯ ತಿಳಿದ ತಕ್ಷಣವೇ ಮಾನವ

ನವದೆಹಲಿ: 'ಪೊಲೀಸ್ ಕಸ್ಟಡಿಯಲ್ಲಿದ್ದ ಕಾಕ್ರೋಚ್ ಜನತಾ ಪಾರ್ಟಿಯ (ಸಿಜೆಪಿ) ಸಂಸ್ಥಾಪಕ ಅಭಿಜಿತ್ ದೀಪ್ಕೆ ಅವರಿಗೆ ಅಜ್ಜಿಯ ನಿಧನದ ಸುದ್ದಿ ತಿಳಿಸಿರಲಿಲ್ಲ' ಎಂಬ ಪೋಷಕರ ಆರೋಪವನ್ನು ದೆಹಲಿ ಪೊಲೀಸರು ತಳ್ಳಿ ಹಾಕಿದ್ದಾರೆ.ಈ ಕುರಿತು ವಿಡಿಯೊವನ್ನು ಬಿಡುಗಡೆ ಮಾಡಿರುವ ಪೊಲೀಸರು, 'ಅಜ್ಜಿಯ ಸಾವು ಹಾಗೂ ಅಂತ್ಯಸಂಸ್ಕಾರದ ಸಮಯದ ಕುರಿತು ವಿಷಯ ತಿಳಿದ ತಕ್ಷಣವೇ ಮಾನವೀಯತೆಯ ಆಧಾರದಲ್ಲಿ ಅಭಿಜಿತ್ ಅವರ ಗಮನಕ್ಕೆ ತರಲಾಗಿತ್ತು. ಹುಟ್ಟೂರಿಗೆ ತೆರಳಲು ಎಲ್ಲ ಅಗತ್ಯ ವ್ಯವಸ್ಥೆ ಕಲ್ಪಿಸುವುದಾಗಿ ಹೇಳಿದ್ದೆವು’ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ಮಹಾರಾಷ್ಟ್ರಕ್ಕೆ ತೆರಳಲು ಪ್ರಯಾಣದ ನೆರವು ನೀಡಲು ಮುಂದಾದರೂ ದೀಪ್ಕೆ ಸ್ವೀಕರಿಸಲಿಲ್ಲ ಎಂದು ಹೇಳಿದ್ದಾರೆ.‘ತುರ್ತು ಪರಿಸ್ಥಿತಿಯಂತಹ ವಾತಾವರಣ’ ಸೃಷ್ಟಿ, ಪ್ರತಿಭಟನೆ ಮುಂದುವರಿಯಲಿದೆ: ಸಿಜೆಪಿದೆಹಲಿ | 2ನೇ ದಿನಕ್ಕೆ ಕಾಲಿಟ್ಟ CJP ಪ್ರತಿಭಟನೆ: 100ಕ್ಕೂ ಹೆಚ್ಚು ಮಂದಿ ವಶಕ್ಕೆ ‘ಅಜ್ಜಿಯ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲು ಅಭಿಜಿತ್ ದೀಪ್ಕೆಗೆ ಅವಕಾಶ ನೀಡುವಂತೆ ಕೋರಿ ದೆಹಲಿ ಪೊಲೀಸರಿಗೆ ಪದೇ ಪದೇ ಮನವಿ ಮಾಡಿದರೂ, ಪರಿಗಣಿಸಲಿಲ್ಲ’ ಎಂದು ಅವರ ಕುಟುಂಬಸ್ಥರು ಆರೋಪಿಸಿದ ಬೆನ್ನಲ್ಲೇ ದೆಹಲಿ ಪೊಲೀಸರು ಈ ಸ್ಪಷ್ಟೀಕರಣ ನೀಡಿದ್ದಾರೆ.ಸುದ್ದಿಗೋಷ್ಠಿಯಲ್ಲಿ ವಿಡಿಯೊ ಪ್ರದರ್ಶಿಸಿ ಮಾತನಾಡಿದ ಪೊಲೀಸ್ ಉಪಕಮಿಷನರ್ (PRO) ನೇಹಾ ಯಾದವ್, ‘ಅಭಿಜಿತ್ ದೀಪ್ಕೆ ಅವರಿಗೆ ಅಜ್ಜಿಯ ನಿಧನದ ಸುದ್ದಿ ಹಾಗೂ ಅಂತ್ಯಕ್ರಿಯೆಯ ಸಮಯದ ಕುರಿತು ತಿಳಿಸಲಾಗಿತ್ತು. ಅಲ್ಲದೇ ಅವರ ಹುಟ್ಟೂರಿಗೆ ತೆರಳಲು ಅಗತ್ಯವಿರುವ ಎಲ್ಲಾ ಸಹಾಯವನ್ನು ನೀಡಲು ಪೊಲೀಸ್ ಇಲಾಖೆ ಸಿದ್ಧವಿತ್ತು. ಆದರೆ ಅವರು ಆ ನೆರವನ್ನು ಪಡೆದುಕೊಳ್ಳಲು ನಿರಾಕರಿಸಿದರು. ಕುಟುಂಬದವರೊಂದಿಗೆ ಮಾತನಾಡಲು ಸಹ ಅವರಿಗೆ ಅವಕಾಶ ನೀಡಲಾಗಿತ್ತು' ಎಂದು ತಿಳಿಸಿದ್ದಾರೆ.#WATCH | Delhi | DCP Neha Yadav says, "As soon as the Delhi Police received information about the passing away of Cockroach Janta Party (CJP) Founder Abhijeet Dipke's grandmother, officers approached him to convey this sad news and offered all possible assistance. They… pic.twitter.com/NxUYp4Hnmw— ANI (@ANI) October 11, 2026 ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ದೀಪ್ಕೆ ಅವರ ಅಜ್ಜಿ ಸಾವಿತ್ರಿಭಾಯಿ ಶಂಕರ್ರಾವ್ ದೀಪ್ಕೆ (85) ಅವರು ಶನಿವಾರ ಮಹಾರಾಷ್ಟ್ರದ ಹಿಂಗೋಲಿ ಜಿಲ್ಲೆಯಲ್ಲಿ ಮೃತಪಟ್ಟಿದ್ದರು. ಭಾನುವಾರ ಅಂತ್ಯಸಂಸ್ಕಾರ ನೆರವೇರಿದೆ.ಕೇಂದ್ರ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಒತ್ತಾಯಿಸಿ ಶನಿವಾರ ದೆಹಲಿಯಲ್ಲಿ ಪ್ರತಿಭಟನೆಗೆ ಮುಂದಾಗಿದ್ದ ದೀಪ್ಕೆ ಜೊತೆಗೆ ಸಂಘಟನೆಯ ನಾಯಕರಾದ ಸೌರವ್ ದಾಸ್, ಅಶುತೋಷ್ ರಾಂಕಾ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಭಾನುವಾರ ಮೂವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ, ಒಂದು ವರ್ಷಗಳ ಕಾಲ ಶಾಂತಿಗೆ ಭಂಗ ತರದಂತೆ ಷರತ್ತಿನ ಮೇಲೆ ಬಿಡುಗಡೆ ಮಾಡಲಾಗಿದೆ.The unfortunate information, regarding the death of his grandmother and known time of her funeral was immediately shared with Sh. Abhijeet Dipke.He was also offered possible facilitation for his journey to his home town on humanitarian grounds.https://t.co/bG4ZaAidYI— Delhi Police (@DelhiPolice) October 10, 2026 ಸಿಜೆಪಿ ಸಂಸ್ಥಾಪಕ ಅಭಿಜಿತ್ ದೀಪ್ಕೆಯ ಅಜ್ಜಿ ನಿಧನ