ವಿಧಾನಸಭಾ ಚುನಾವಣೆ: ಅಯೋಧ್ಯೆಯಲ್ಲಿ ಯೋಗಿ ಎದುರು ಕಣಕ್ಕಿಳಿಯಲ್ಲ ಎಂದ ಅಖಿಲೇಶ್
ಲಖನೌ: ಅಯೋಧ್ಯೆ ವಿಧಾನಸಭಾ ಕ್ಷೇತ್ರದಲ್ಲಿ ಮುಖಾಮುಖಿಯಾಗಿ ಸ್ಪರ್ಧಿಸೋಣ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೀಡಿದ್ದ ಆಹ್ವಾನವನ್ನು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಭಾನುವಾರ ತಿರಸ್ಕರಿಸಿದ್ದಾರೆ.ಜಯಪ್ರಕಾಶ್ ನಾರಾಯಣ್ ಅವರ ಜನ್ಮದಿನದ ಪ್ರಯುಕ್ತ ಲಖನೌನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿರುವ ಅಖಿಲೇಶ್, 'ಅಯೋಧ್ಯೆ ಕ್ಷೇತ್ರಕ್ಕೆ ಪವನ್ ಪಾ

ಲಖನೌ: ಅಯೋಧ್ಯೆ ವಿಧಾನಸಭಾ ಕ್ಷೇತ್ರದಲ್ಲಿ ಮುಖಾಮುಖಿಯಾಗಿ ಸ್ಪರ್ಧಿಸೋಣ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೀಡಿದ್ದ ಆಹ್ವಾನವನ್ನು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಭಾನುವಾರ ತಿರಸ್ಕರಿಸಿದ್ದಾರೆ.ಜಯಪ್ರಕಾಶ್ ನಾರಾಯಣ್ ಅವರ ಜನ್ಮದಿನದ ಪ್ರಯುಕ್ತ ಲಖನೌನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿರುವ ಅಖಿಲೇಶ್, 'ಅಯೋಧ್ಯೆ ಕ್ಷೇತ್ರಕ್ಕೆ ಪವನ್ ಪಾಂಡೆ ಅವರನ್ನು ಅಭ್ಯರ್ಥಿಯನ್ನಾಗಿ ಪಕ್ಷವು ಈಗಾಗಲೇ ಘೋಷಿಸಿದೆ. ಹೀಗಾಗಿ ನಾನು ಅಲ್ಲಿಂದ ಸ್ಪರ್ಧಿಸುವ ಪ್ರಶ್ನೆಯೇ ಇಲ್ಲ' ಎಂದು ತಿಳಿಸಿದ್ದಾರೆ. ಪ್ರಸ್ತುತ ಸಂಸತ್ತಿನಲ್ಲಿ ಕನೌಜ್ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಅವರು, 'ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ನನಗೆ ಹಲವು ಕ್ಷೇತ್ರಗಳಿಂದ ಆಫರ್ ಇದೆ. ಮೊದಲು ನಿಮಗೊಂದು ಟಿಕೆಟ್ ಖಾತ್ರಿಪಡಿಸಿಕೊಳ್ಳಿ' ಎಂದು ಮುಖ್ಯಮಂತ್ರಿಯ ಕಾಲೆಳೆದಿದ್ಜಾರೆ.ಸಿಎಂ ಯೋಗಿ ಆಗಾಗ್ಗೆ ಅಯೋಧ್ಯೆಗೆ ಭೇಟಿ ನೀಡುವ ವಿಚಾರದ ಬಗ್ಗೆ ಇತ್ತೀಚೆಗೆ ಮಾತನಾಡಿದ್ದ ಅಖಿಲೇಶ್, ಅಲ್ಲಿಂದಲೇ ವಿಧಾನಸಭೆ ಚುನಾವಣೆಗೆ ನಿಲ್ಲಿ ಎಂದು ಸವಾಲು ಹಾಕಿದ್ದಾರೆ.ಸವಾಲು ಸ್ವೀಕರಿಸಿದ್ದ ಯೋಗಿ, ತಮ್ಮೊಂದಿಗೆ ಪೈಪೋಟಿಗೆ ಬನ್ನಿ ಎಂದು ಪಂಥಾಹ್ವಾನ ನೀಡಿದ್ದರು.ಬಲರಾಮ್ಪುರ ಜಿಲ್ಲೆಯಲ್ಲಿ ಬಹುಕೋಟಿ ವೆಚ್ಚದ ಅಭಿವೃದ್ಧಿ ಯೋಜನೆಗಳಿಗೆ ಶನಿವಾರ ಚಾಲನೆ ನೀಡಿದ್ದ ಸಿಎಂ, ‘ನೀವೂ ಅಯೋಧ್ಯೆಯಿಂದಲೇ ಸ್ಪರ್ಧಿಸಿ. ನಾನೂ ಅಲ್ಲಿಯೇ ನಾಮಪತ್ರ ಸಲ್ಲಿಸುತ್ತೇನೆ. ಬನ್ನಿ ಒಮ್ಮೆ ಅದೃಷ್ಟ ಪರೀಕ್ಷೆ ಮಾಡಿಕೊಳ್ಳೋಣ. ಚೇಲಾಗಳೊಂದಿಗೆ ಪೈಪೋಟಿ ಏಕೆ? ಹೋರಾಟ ಮುಖಾಮುಖಿಯೇ ಆಗಿರಬೇಕು? ಎಂದು ಅಖಿಲೇಶ್ ಅವರನ್ನು ಕರೆದಿದ್ದರು.ಸಿಎಂ ಯೋಗಿ ಅವರು ವಿಧಾನಸಭೆಯಲ್ಲಿ ಗೋರಖ್ಪುರ ನಗರ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.2024ರ ಲೋಕಸಭಾ ಚುಣಾವಣೆಯಲ್ಲಿ, ಅಯೋಧ್ಯೆಯನ್ನೂ ಒಳಗೊಂಡ ಫೈಜಾಬಾದ್ ಕ್ಷೇತ್ರದಲ್ಲಿ ಅಖಿಲೇಶ್ ಅವರ ಸಮಾಜವಾದಿ ಪಕ್ಷ ಜಯ ಸಾಧಿಸಿತ್ತು.ಉತ್ತರ ಪ್ರದೇಶ ವಿಧಾನಸಭೆಗೆ ಮುಂದಿನ ವರ್ಷ ಫೆಬ್ರುವರಿ - ಮಾರ್ಚ್ನಲ್ಲಿ ಚುನಾವಣೆ ನಡೆಯಲಿದೆ