ಸೌದಿ ವಿಮಾನ ನಿಲ್ದಾಣದ ಮೇಲೆ ಹೌತಿ ಕ್ಷಿಪಣಿ ದಾಳಿ – 12 ಮಂದಿ ಬಲಿ, 300ಕ್ಕೂ ಹೆಚ್ಚು ಜನರಿಗೆ ಗಾಯ
ರಿಯಾದ್: ಸೌದಿ ಅರೇಬಿಯಾದ(Saudi Arabia) ರಾಜಧಾನಿ ರಿಯಾದ್ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ(Riyadh International Airport) ಮೇಲೆ ಇರಾನ್ ಬೆಂಬಲಿತ ಹೌತಿಗಳು ನಡೆಸಿದ ಕ್ಷಿಪಣಿ ದಾಳಿಯಲ್ಲಿ 12 ಜನರು ಸಾವನ್ನಪ್ಪಿದ್ದು, 300 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ. ಈ ದಾಳಿಗೆ ನೆರೆಯ ಯೆಮೆನ್ನ ಇರಾನ್ ಬೆಂಬ

ರಿಯಾದ್: ಸೌದಿ ಅರೇಬಿಯಾದ(Saudi Arabia) ರಾಜಧಾನಿ ರಿಯಾದ್ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ(Riyadh International Airport) ಮೇಲೆ ಇರಾನ್ ಬೆಂಬಲಿತ ಹೌತಿಗಳು ನಡೆಸಿದ ಕ್ಷಿಪಣಿ ದಾಳಿಯಲ್ಲಿ 12 ಜನರು ಸಾವನ್ನಪ್ಪಿದ್ದು, 300 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ. ಈ ದಾಳಿಗೆ ನೆರೆಯ ಯೆಮೆನ್ನ ಇರಾನ್ ಬೆಂಬಲಿತ ಹೌತಿ ಬಂಡುಕೋರರೇ(Houthi Rebels) ಕಾರಣ ಎಂದು ಸೌದಿ ಆರೋಪಿಸಿದೆ. ಇರಾನ್ ಯುದ್ಧ(Iran War) ಆರಂಭವಾದ ನಂತರ ಕೊಲ್ಲಿ ಅರಬ್ ರಾಷ್ಟ್ರವೊಂದರಲ್ಲಿ ನಡೆದ ಅತ್ಯಂತ ಭೀಕರ ದಾಳಿ ಇದಾಗಿದೆ. ಈ ಯುದ್ಧದ ವ್ಯಾಪ್ತಿಯು ಇತ್ತೀಚೆಗೆ ಹೌತಿಗಳು ಮತ್ತು ಸೌದಿ ಬೆಂಬಲಿತ ಯೆಮೆನ್ ಸರ್ಕಾರದ ಪಡೆಗಳ ನಡುವಿನ ಸಂಘರ್ಷಕ್ಕೂ ವಿಸ್ತರಿಸಿದೆ. ದೇಶೀಯ ವಿಮಾನಗಳ ಟರ್ಮಿನಲ್ 3 ಮತ್ತು 4 ಅನ್ನು ಒಳಗೊಂಡಿರುವ ಕಿಂಗ್ ಖಾಲಿದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಂಕೀರ್ಣಕ್ಕೆ ಕ್ಷಿಪಣಿಯೊಂದು ಅಪ್ಪಳಿಸಿದೆ. ದಾಳಿಯಲ್ಲಿ ಮೃತಪಟ್ಟವರಲ್ಲಿ ನಾಲ್ವರು ಸೌದಿ ಪ್ರಜೆಗಳು, ಇಬ್ಬರು ಬಾಂಗ್ಲಾದೇಶಿಯರು ಹಾಗೂ ಪ್ಯಾಲೆಸ್ಟೈನ್, ಅಮೆರಿಕ, ಈಜಿಪ್ಟ್, ಜೋರ್ಡಾನ್, ಸಿರಿಯಾ ಮತ್ತು ಸುಡಾನ್ನ ತಲಾ ಒಬ್ಬ ಪ್ರಜೆ ಸೇರಿದ್ದಾರೆ ಎಂದು ಸೌದಿ ಪ್ರಕಟಣೆ ತಿಳಿಸಿದೆ. ಗಾಯಾಳುಗಳಿಗೆ ಹಲವು ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಲಾಗಿದೆ. ಇದನ್ನೂ ಓದಿ: ಉಕ್ರೇನ್ಗೆ ಹೊಸ ಅಧ್ಯಕ್ಷರ ಅಗತ್ಯವಿದೆ – ಝೆಲೆನ್ಸ್ಕಿ ವಿರುದ್ಧ ಕೆರಳಿ ಕೆಂಡವಾದ ಟ್ರಂಪ್ First video released from the Houthi missile impact site at Terminal 3 of King Khalid International Airport in Riyadh, Saudi Arabia. Debris can be seen scattered on the ground, several people can also be glimpsed lying on the ground amidst the smoke. https://t.co/E0p3whcE24 — MoloMonitor (@MoloWarMonitor) October 10, 2026 ದಾಳಿ ನಡೆದ ಬೆನ್ನಲ್ಲೇ ಶನಿವಾರ ಮಧ್ಯಾಹ್ನ ಪ್ರತಿಕ್ರಿಯಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಬಂಡುಕೋರರ ಮೇಲಿನ ಸೌದಿ ದಾಳಿಗೆ ಅಮೆರಿಕ ಕೈಜೋಡಿಸಬೇಕೇ ಎಂಬುದನ್ನು ಪರಿಶೀಲಿಸುತ್ತಿರುವುದಾಗಿ ತಿಳಿಸಿದ್ದಾರೆ. “ನಾವು ಭಾಗಿಯಾಗಬಹುದು, ಅದನ್ನು ಪರಿಶೀಲಿಸುತ್ತಿದ್ದೇವೆ. ಇತ್ತೀಚಿನ ದಾಳಿಯ ಬಗ್ಗೆ ನಮಗೆ ಮಾಹಿತಿ ಸಿಕ್ಕಿದೆ. ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳಲಿದ್ದೇವೆ” ಎಂದಿದ್ದಾರೆ. ನಂತರ ಶನಿವಾರ ಮಾತನಾಡಿದ ಟ್ರಂಪ್, ಸೌದಿ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಅವರೊಂದಿಗೆ ಮಾತನಾಡಲು ಯೋಜಿಸಿರುವುದಾಗಿ ತಿಳಿಸಿದ್ದು, “ಸೌದಿ ಅರೇಬಿಯಾದಲ್ಲಿ ನಡೆದಿರುವುದು ಒಪ್ಪಿಕೊಳ್ಳಲು ಸಾಧ್ಯವಿಲ್ಲದ್ದು” ಎಂದು ಹೇಳಿದ್ದಾರೆ. ಅಮೆರಿಕ ಇದರಲ್ಲಿ ಭಾಗಿಯಾಗಲಿದೆಯೇ ಎಂಬ ಪ್ರಶ್ನೆಗೆ, “ಕಾದು ನೋಡೋಣ” ಎಂದು ಉತ್ತರಿಸಿದ್ದಾರೆ. ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ, ದಾಳಿಯಲ್ಲಿ ಅಮೆರಿಕದ ಪ್ರಜೆಯೊಬ್ಬರು ಮೃತಪಟ್ಟಿರುವುದನ್ನು ದೃಢಪಡಿಸಿ, ಘಟನೆಯನ್ನು ಖಂಡಿಸಿದ್ದಾರೆ. Footage from King Khalid International Airport in Riyadh shows a plume of smoke rising from the Terminal 3, following a Houthi ballistic missile attack. Fire sirens continue to sound inside the airport, where the smoke is coming from. https://t.co/AEZCxUza2x — MoloMonitor (@MoloWarMonitor) October 10, 2026 ಬಂಡುಕೋರರಿಂದ ತಕ್ಷಣಕ್ಕೆ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ. ಆದರೆ ಹೌತಿಗಳ ನಿಯಂತ್ರಣದಲ್ಲಿರುವ ಯೆಮೆನ್ ರಾಜಧಾನಿ ಸನಾದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಸೌದಿ ಅರೇಬಿಯಾ ದಾಳಿ ನಡೆಸಿದೆ ಎಂದು ಅವರು ಶನಿವಾರ ಆರೋಪಿಸಿದ್ದರು. ವಾರದ ಆರಂಭದಲ್ಲಿ ಕಿಂಗ್ ಖಾಲಿದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ನಡೆದ ದಾಳಿಯ ಹೊಣೆಯನ್ನು ಹೌತಿಗಳು ಹೊತ್ತುಕೊಂಡಿದ್ದರು. ಆ ದಾಳಿಯಲ್ಲಿ ಪೈಲಟ್ ಸೇರಿದಂತೆ ಮೂವರು ಸೌದಿ ಪ್ರಜೆಗಳು ಮೃತಪಟ್ಟಿದ್ದರು. ಸೌದಿ ನೇತೃತ್ವದ ಒಕ್ಕೂಟವು ಹೌತಿಗಳ ವಿರುದ್ಧ ಭಾರಿ ಮಿಲಿಟರಿ ಕಾರ್ಯಾಚರಣೆಯನ್ನು ಆರಂಭಿಸಿದ ನಂತರದ ವಾರದಲ್ಲಿ, ಸೌದಿಯ ಇತರ ವಿಮಾನ ನಿಲ್ದಾಣಗಳು, ಮಿಲಿಟರಿ ನೆಲೆಗಳು ಮತ್ತು ತೈಲ ಮೂಲಸೌಕರ್ಯಗಳ ಮೇಲಿನ ದಾಳಿಗಳು ಗಣನೀಯವಾಗಿ ಹೆಚ್ಚಿವೆ. ಶನಿವಾರ ಮುಂಜಾನೆ ವಿಮಾನ ನಿಲ್ದಾಣದ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಸೌದಿ ನಾಗರಿಕ ವಿಮಾನಯಾನ ಅಧಿಕಾರಿಗಳು ತಿಳಿಸಿದ್ದಾರೆ. ಎಲ್ಲಾ ಪ್ರವೇಶ ದ್ವಾರಗಳನ್ನು ಬಂದ್ ಮಾಡಿ ಬಿಗಿ ಪೊಲೀಸ್ ಭದ್ರತೆ ಒದಗಿಸಿದ್ದಾರೆ. ಅಮೆರಿಕ, ಬ್ರಿಟನ್, ಜರ್ಮನಿ, ಆಸ್ಟ್ರೇಲಿಯಾ ಮತ್ತು ಕೆನಡಾ ಸೇರಿದಂತೆ ಹಲವು ದೇಶಗಳು ವಿಮಾನ ನಿಲ್ದಾಣಕ್ಕೆ ತೆರಳದಂತೆ ತಮ್ಮ ನಾಗರಿಕರಿಗೆ ಎಚ್ಚರಿಕೆ ನೀಡಿವೆ.