ದಸರಾ ಮೇಲೆ ಕಂಬಳ ಹೇರಲಾಗ್ತಿದೆ, ಇದು ಮೈಸೂರಿನ ಜನರ ಭಾವನೆಗೆ ಮಾಡಿದ ಧಕ್ಕೆ: ಯದುವೀರ್ ಅಸಮಾಧಾನ
ಮೈಸೂರು: ದಸರಾ ಮೇಲೆ ಕಂಬಳ (Kambala) ಹೇರಲಾಗುತ್ತಿದೆ, ಇದು ಮೈಸೂರಿನ ಜನರ ಭಾವನೆಗೆ ಮಾಡಿದ ಧಕ್ಕೆ ಎಂದು ಯದುವಂಶದ ಮಹಾರಾಜ ಹಾಗೂ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ (Yaduveer Wadiyar) ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಂದಿನಿಂದ ನಾಡಹಬ್ಬ ದಸರಾ (Mysuru Dasara) ಆರಂಭವಾಗುತ್ತಿದೆ. ದಸರಾ, ಅರಮನೆಯಲ್ಲಿನ ಆಚರಣೆ ಬಗ್ಗೆ, ದಸರಾ ವೇಳೆ ನಡೆಸುತ್ತಿರುವ

ಮೈಸೂರು: ದಸರಾ ಮೇಲೆ ಕಂಬಳ (Kambala) ಹೇರಲಾಗುತ್ತಿದೆ, ಇದು ಮೈಸೂರಿನ ಜನರ ಭಾವನೆಗೆ ಮಾಡಿದ ಧಕ್ಕೆ ಎಂದು ಯದುವಂಶದ ಮಹಾರಾಜ ಹಾಗೂ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ (Yaduveer Wadiyar) ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಂದಿನಿಂದ ನಾಡಹಬ್ಬ ದಸರಾ (Mysuru Dasara) ಆರಂಭವಾಗುತ್ತಿದೆ. ದಸರಾ, ಅರಮನೆಯಲ್ಲಿನ ಆಚರಣೆ ಬಗ್ಗೆ, ದಸರಾ ವೇಳೆ ನಡೆಸುತ್ತಿರುವ ಕಂಬಳದ ಬಗ್ಗೆ `ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ಅವರು, ಪ್ರತಿವರ್ಷದಂತೆ ಈ ವರ್ಷ ಕೂಡ ಎಲ್ಲಾ ಸಿದ್ಧತೆಗಳು ಆಗಿದೆ. ಏನೂ ವ್ಯತ್ಯಾಸ ಆಗಿಲ್ಲ. ಕಂಬಳ ಸ್ಥಳೀಯವಾಗಿ ವಿರೋಧ ವ್ಯಕ್ತವಾಗಿರುವ ವಿಚಾರ. ಕಂಬಳ ಬೇರೆ ಸಮಯದಲ್ಲಿ ಮಾಡಿ, ದಸರಾದಲ್ಲೇ ಯಾಕೆ ಮಾಡುತ್ತಿದ್ದೀರಿ ಎಂಬುದು ಸಹಜವಾಗಿ ಎಲ್ಲರ ಪ್ರಶ್ನೆ. ದಸರಾ ಆಚರಣೆಯ ಸಮಯದಲ್ಲಿ ಕರಾವಳಿ ಭಾಗದ ಆಚರಣೆ ತಂದು ಇಲ್ಲಿ ಏನು ಉದ್ದೇಶ ಇಟ್ಟುಕೊಂಡು ಮಾಡುತ್ತೀದ್ದೀರಿ ಎಂಬುದು ನಮ್ಮ ಪ್ರಶ್ನೆ. ಸಮಾಜವನ್ನು ವಿಭಾಗ ಮಾಡಲು ಇದನ್ನು ಮಾಡುತ್ತಿದ್ದೀರಾ? ಕರಾವಳಿ ಮತ್ತು ಮೈಸೂರು ಭಾಗದಲ್ಲಿ ವಿಭಜನೆ ಮಾಡಲು ಇದನ್ನು ಮಾಡುತ್ತಿದ್ದೀರಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಸೌದಿ ವಿಮಾನ ನಿಲ್ದಾಣದ ಮೇಲೆ ಹೌತಿ ಕ್ಷಿಪಣಿ ದಾಳಿ – 12 ಮಂದಿ ಬಲಿ, 300ಕ್ಕೂ ಹೆಚ್ಚು ಜನರಿಗೆ ಗಾಯ ಇದರಿಂದ ಸಮಸ್ಯೆ ಆಗುತ್ತದೆ ಎಂಬುದು ನಮಗಿಂತ ಜಾಸ್ತಿ ಕಾಂಗ್ರೆಸ್ಗೆ ಚೆನ್ನಾಗಿ ಗೊತ್ತಿದೆ. ಉದ್ದೇಶಪೂರ್ವಕವಾಗಿ ಇದನ್ನು ಮಾಡುತ್ತಿರುವುದು ಖಂಡನೀಯ. ಹೊಸ ಪದ್ಧತಿ, ಹೊಸ ಪಾರಂಪರ್ಯೆಗಳು ಪ್ರಾರಂಭ ಮಾಡಿ. ಕರಾವಳಿ ಭಾಗದ ಬಗ್ಗೆ ನಮ್ಮ ಅತ್ಯಂತ ಗೌರವವಿದೆ. ದಸರಾ ಸಮಯದಲ್ಲೇ ಇದನ್ನ ಯಾಕೆ ಮಾಡಬೇಕು? ಇದು ನನಗಿಂತ, ನಮ್ಮ ಪಕ್ಷಕ್ಕಿಂತ ಸ್ಥಳೀಯರು ವಿರೋಧ ಮಾಡುತ್ತಿದ್ದಾರೆ. ಬಹುತೇಕ ಎಲ್ಲಾ ಸಂಘಟನೆಗಳು ನಿಮ್ಮ ಸಿದ್ಧಾಂತಕ್ಕೆ ಒಲವು ಹೊಂದಿವೆ. ಅವರೇ ಇದನ್ನು ವಿರೋಧ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಬೆಂಗಳೂರಿನ ರಸ್ತೆಗಳಿಗೆ ಎಐ ಸ್ಕ್ಯಾನಿಂಗ್ – 2,493 ಕಿ.ಮೀ ರಸ್ತೆಯಲ್ಲಿ 14,393 ಗುಂಡಿ ಪತ್ತೆ ನಮ್ಮ ಪಕ್ಷ ಆಡಳಿತದಲ್ಲಿರುವಾಗ ಒಳ್ಳೆಯ ಕೆಲಸ ಮಾಡುತ್ತಿದೆ ಅಂತ ತೋರಿಸಿಕೊಳ್ಳುವುದರಲ್ಲಿ ಏನೂ ತಪ್ಪಿಲ್ಲ. ಹಿಂದೆಯೂ ಅನೇಕ ವಸ್ತು ಪ್ರದರ್ಶನಗಳು ಆಗುತ್ತಿತ್ತು. ದೊಡ್ಡಮಟ್ಟದಲ್ಲಿ ಅಥವಾ ಸಣ್ಣಮಟ್ಟದಲ್ಲಿ ಮಾಡಬೇಕಾ ಎಂಬುದು ರಾಜ್ಯದ ಆರ್ಥಿಕ ಪರಿಸ್ಥಿತಿ ನೋಡಿಕೊಂಡು ಮಾಡಬೇಕು. ಅದರಿಂದ ನಮಗೇನು ಸಮಸ್ಯೆ ಇಲ್ಲ. ಇದು ಮೈಸೂರು ಜನತೆಗೆ ಮಾತ್ರವಲ್ಲದೇ ಕರಾವಳಿಗರಿಗೂ ಧಕ್ಕೆಯಾಗುವ ರೀತಿ ಮಾಡುತ್ತಿದ್ದಾರೆ. ಈ ಸಂಪ್ರದಾಯಗಳನ್ನು ಇಷ್ಟು ಲಘುವಾಗಿ ತೆಗೆದುಕೊಳ್ಳಬಾರದು. ಕಂಬಳದ ಸಮಯದಲ್ಲಿ ಕರಾವಳಿಯಲ್ಲಿ ದಸರಾ ಆಚರಣೆ ಮಾಡಿದರೇ ಅದನ್ನು ನಾನು ವಿರೋಧಿಸುತ್ತೇನೆ. ನಾವು ಮುಂದೆ ಎಲ್ಲಾ ಸಕಾರಾತ್ಮಕವಾಗಿ ಆಗಬೇಕಂದರೆ ಜನರ ಬೇಡಿಗಳಿಗೆ, ಅಹವಾಲುಗಳಿಗೆ ನೀವು ಸ್ಪಂದಿಸಬೇಕು ಎಂದರು. ಇದನ್ನೂ ಓದಿ: ಮೈಸೂರು ದಸರಾ ಮಹೋತ್ಸವಕ್ಕೆ ಇಂದು ಅದ್ಧೂರಿ ಚಾಲನೆ