ರಿಪ್ಪನ್ಪೇಟೆ: ವಿಜಯನಗರ ಕಾಲದ ಅಪರೂಪದ ವೀರಗಲ್ಲು ಪತ್ತೆ
ರಿಪ್ಪನ್ಪೇಟೆ: ಇಲ್ಲಿಗೆ ಸಮೀಪದ ನಂದಿಹೊಳೆ ಗ್ರಾಮದಲ್ಲಿ ಹುಲಿಯೊಂದಿಗೆ ಹೋರಾಡಿ ವೀರ ಮರಣವನ್ನಪ್ಪಿದ ವ್ಯಕ್ತಿ ಹಾಗೂ ಆತನೊಂದಿಗೆ ಪತ್ನಿ ಸಹಗಮನಗೈದ ಚಿತ್ರಣವಿರುವ ಅಪರೂಪದ ವೀರಗಲ್ಲು ಪತ್ತೆಯಾಗಿದೆ.ಸಂಶೋಧಕರಾದ ಆದಿತ್ಯ ನಂಜವಳ್ಳಿ ಮತ್ತು ವಡಗೆರೆ ಸುದರ್ಶನ್ ಸಿಂಗ್ ಅವರು ಇದನ್ನು ಪತ್ತೆ ಹಚ್ಚಿದ್ದಾರೆ.ಇದು ಸುಮಾರು ಎರಡು ಅಡಿ ಎತ್ತರ ಹಾಗೂ ಮೂರು ಅಡಿ ಅಗಲವಿದೆ. ಇದರಲ್

ರಿಪ್ಪನ್ಪೇಟೆ: ಇಲ್ಲಿಗೆ ಸಮೀಪದ ನಂದಿಹೊಳೆ ಗ್ರಾಮದಲ್ಲಿ ಹುಲಿಯೊಂದಿಗೆ ಹೋರಾಡಿ ವೀರ ಮರಣವನ್ನಪ್ಪಿದ ವ್ಯಕ್ತಿ ಹಾಗೂ ಆತನೊಂದಿಗೆ ಪತ್ನಿ ಸಹಗಮನಗೈದ ಚಿತ್ರಣವಿರುವ ಅಪರೂಪದ ವೀರಗಲ್ಲು ಪತ್ತೆಯಾಗಿದೆ.ಸಂಶೋಧಕರಾದ ಆದಿತ್ಯ ನಂಜವಳ್ಳಿ ಮತ್ತು ವಡಗೆರೆ ಸುದರ್ಶನ್ ಸಿಂಗ್ ಅವರು ಇದನ್ನು ಪತ್ತೆ ಹಚ್ಚಿದ್ದಾರೆ.ಇದು ಸುಮಾರು ಎರಡು ಅಡಿ ಎತ್ತರ ಹಾಗೂ ಮೂರು ಅಡಿ ಅಗಲವಿದೆ. ಇದರಲ್ಲಿ ವೀರ, ಆತನ ಪತ್ನಿ ಹಾಗೂ ಜೊತೆಗಾರನ ಚಿತ್ರಣವಿದೆ. ಸೂರ್ಯ, ಚಂದ್ರ, ಶಿವಲಿಂಗ, ಹಸು-ಕರು ಮತ್ತು ಬೇಟೆ ನಾಯಿಯ ಚಿತ್ರವನ್ನೂ ಕೆತ್ತಲಾಗಿದೆ.ರಾಜ್ಯ ಪುರಾತತ್ವ ಇಲಾಖೆಯ ನಿರ್ದೇಶಕ ಶೇಜೇಶ್ವರ ಪ್ರಕಾರ ಇದು ವಿಜಯನಗರೋತ್ತರ ಕಾಲಘಟ್ಟಕ್ಕೆ ಸೇರಿದ್ದಾಗಿದೆ.ಈ ವೀರಗಲ್ಲನ್ನು ನಂದಿಹೊಳೆ ಗ್ರಾಮದ ನದಿ ದಡದಲ್ಲಿ ಯಾರೋ ತಂದು ಹಾಕಿರುವ ಸಾಧ್ಯತೆಯೂ ಇದೆ ಎನ್ನಲಾಗಿದೆ.‘ಇದರ ಮೂಲ ಸ್ಥಳ, ನಿಖರ ಕಾಲಮಾನ ಮತ್ತು ಅದರ ಹಿಂದಿನ ಐತಿಹಾಸಿಕ ಘಟನೆಯ ಕುರಿತು ಹೆಚ್ಚಿನ ಅಧ್ಯಯನದ ಅಗತ್ಯವಿದೆ’ ಎಂದು ಸಂಶೋಧಕ ಆದಿತ್ಯ ನಂಜವಳ್ಳಿ ಅಭಿಪ್ರಾಯಪಟ್ಟಿದ್ದಾರೆ.261011-42-1874911187
Read the complete story at Prajavani