ನವರಾತ್ರಿ ಸಂಭ್ರಮ: ಶೈಲಪುತ್ರಿಗೆ ಇಷ್ಟವಾದ ಈ ಸಿಹಿ ಪದಾರ್ಥದ ನೈವೇದ್ಯ ಅರ್ಪಿಸಿ
ಹಿಂದೂ ಧರ್ಮದಲ್ಲಿ ನವರಾತ್ರಿಗೆ ಅತ್ಯಂತ ಪವಿತ್ರವಾದ ಸ್ಥಾನವಿದೆ. ಅಕ್ಟೋಬರ್ 11ರಿಂದ ಪ್ರಾರಂಭವಾಗುವ ಈ ದಸರಾ ಮಹೋತ್ಸವದಲ್ಲಿ ಭಕ್ತರು ಪ್ರತಿದಿನವೂ ನವದುರ್ಗೆಯರನ್ನು ಅಪಾರ ಶ್ರದ್ಧಾಭಕ್ತಿಗಳಿಂದ ಆರಾಧಿಸುತ್ತಾರೆ. ನವರಾತ್ರಿಯ ಪ್ರತಿಯೊಂದು ದಿನಕ್ಕೂ ತನ್ನದೇ ಆದ ಪಾವಿತ್ರ್ಯತೆ ಇದ್ದು, ಆಯಾ ದಿನದ ದೇವತೆಗೆ ಇಷ್ಟವಾದ ವಿಶೇಷ ನೈವೇದ್ಯವನ್ನು ಅರ್ಪಿಸುವುದರಿಂದ ದೇವಿಯ ಕೃ

ಹಿಂದೂ ಧರ್ಮದಲ್ಲಿ ನವರಾತ್ರಿಗೆ ಅತ್ಯಂತ ಪವಿತ್ರವಾದ ಸ್ಥಾನವಿದೆ. ಅಕ್ಟೋಬರ್ 11ರಿಂದ ಪ್ರಾರಂಭವಾಗುವ ಈ ದಸರಾ ಮಹೋತ್ಸವದಲ್ಲಿ ಭಕ್ತರು ಪ್ರತಿದಿನವೂ ನವದುರ್ಗೆಯರನ್ನು ಅಪಾರ ಶ್ರದ್ಧಾಭಕ್ತಿಗಳಿಂದ ಆರಾಧಿಸುತ್ತಾರೆ. ನವರಾತ್ರಿಯ ಪ್ರತಿಯೊಂದು ದಿನಕ್ಕೂ ತನ್ನದೇ ಆದ ಪಾವಿತ್ರ್ಯತೆ ಇದ್ದು, ಆಯಾ ದಿನದ ದೇವತೆಗೆ ಇಷ್ಟವಾದ ವಿಶೇಷ ನೈವೇದ್ಯವನ್ನು ಅರ್ಪಿಸುವುದರಿಂದ ದೇವಿಯ ಕೃಪೆ ಹಾಗೂ ಸಕಲ ಸೌಭಾಗ್ಯಗಳು ಲಭಿಸುತ್ತವೆ ಎಂಬ ನಂಬಿಕೆಯಿದೆ. ಅಕ್ಟೋಬರ್ 11ರಿಂದ 20ರವರೆಗೆ ನಡೆಯುವ ಈ ಹತ್ತು ದಿನಗಳ ಪೂಜೆಯಲ್ಲಿ ಪ್ರಥಮ ದಿನ ಶೈಲಪುತ್ರಿಯಿಂದ ಆರಂಭಗೊಂಡು ಅಂತಿಮ ದಿನ ವಿಜಯದಶಮಿಯವರೆಗೆ ಪ್ರತಿಯೊಂದು ದಿನವೂ ನವದುರ್ಗೆಯರಿಗೆ ಪ್ರಿಯವಾದ ನೈವೇದ್ಯವನ್ನು ಮನೆಯಲ್ಲೇ ಮಾಡಿ ಅರ್ಪಿಸಬಹುದು.ಇಂದು ಅಕ್ಟೋಬರ್ 11 ನವರಾತ್ರಿಯ ಮೊದಲ ದಿನ. ಇಂದು ಭಕ್ತರು ಶೈಲಪುತ್ರಿ ದೇವಿಯ ಪೂಜೆ ಮಾಡುತ್ತಾರೆ. ಶೈಲಪುತ್ರಿ ದೇವಿಗೆ ಅತ್ಯಂತ ಪ್ರಿಯವಾದ ನೈವೇದ್ಯ ಎಂದರೆ ಶುದ್ಧ ಹಸುವಿನ ತುಪ್ಪ. ಈ ದೇವಿಗೆ ತುಪ್ಪ ಅಥವಾ ತುಪ್ಪದಿಂದ ತಯಾರಿಸಿದ ಗೋಧಿ ಹಲ್ವಾ ಅನ್ನು ಪ್ರಸಾದ ರೂಪದಲ್ಲಿ ಅರ್ಪಿಸಬಹುದು.ಗೋಧಿ ಹಲ್ವಾ ಮಾಡಲು ಬೇಕಾಗುವ ಪದಾರ್ಥಗಳು..ಗೋಧಿ ಹಿಟ್ಟು: 1 ಕಪ್ಶುದ್ಧವಾದ ಹಸುವಿನ ತುಪ್ಪ: 1/3 ಕಪ್ಸಕ್ಕರೆ: ಸಿಹಿಗೆ ತಕ್ಕಷ್ಟುನೀರು: 1 ರಿಂದ 2 ಕಪ್ಏಲಕ್ಕಿ ಪುಡಿ: 1/4 ಚಮಚಗೋಡಂಬಿ, ದ್ರಾಕ್ಷಿ, ಏಲಕ್ಕಿ ಪುಡಿಮಾಡುವ ವಿಧಾನ:ಮೊದಲು ಒಂದು ಬಾಣಲೆಯಲ್ಲಿ ಶುದ್ಧ ಹಸುವಿನ ತುಪ್ಪ ಹಾಕಿ ಗೋಡಂಬಿ ಮತ್ತು ದ್ರಾಕ್ಷಿಯನ್ನು ಬಂಗಾರದ ಬಣ್ಣ ಬರುವವರೆಗೆ ಹುರಿಯಿರಿ.ಅದೇ ಉಳಿದ ತುಪ್ಪಕ್ಕೆ 1 ಕಪ್ ಗೋಧಿ ಹಿಟ್ಟು ಹಾಕಿ. ಸಣ್ಣ ಉರಿಯಲ್ಲಿ ಹಿಟ್ಟಿನ ಬಣ್ಣ ಸ್ವಲ್ಪ ಬದಲಾಗಿ ಘಮ ಬರುವವರೆಗೂ ಚೆನ್ನಾಗಿ ಹುರಿಯಿರಿ.ಇನ್ನೊಂದು ಪಾತ್ರೆಯಲ್ಲಿ ಸಕ್ಕರೆ ಮತ್ತು ನೀರನ್ನು ಹಾಕಿ ಕರಗಿಸಿ. ಈ ಮಿಶ್ರಣವನ್ನು ಹುರಿದಿಟ್ಟ ಗೋಧಿ ಹಿಟ್ಟಿಗೆ ಸ್ವಲ್ಪ ಸ್ವಲ್ಪವೇ ಹಾಕುತ್ತಾ ಯಾವುದೇ ಗಂಟುಗಳಾಗದಂತೆ ತಿರುಗಿಸಿ.ಸಣ್ಣ ಉರಿಯಲ್ಲಿಯೇ ಮಿಶ್ರಣವು ಗಟ್ಟಿಯಾಗುವವರೆಗೆ ಹಾಗೂ ತುಪ್ಪ ಬಿಟ್ಟುಕೊಳ್ಳುವವರೆಗೂ ಚೆನ್ನಾಗಿ ಬೇಯಿಸಿ.ಕೊನೆಯಲ್ಲಿ ಏಲಕ್ಕಿ ಪುಡಿ ಹಾಗೂ ಹುರಿದಿಟ್ಟುಕೊಂಡ ಗೋಡಂಬಿ, ದ್ರಾಕ್ಷಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈಗ ಶೈಲಪುತ್ರಿಗೆ ಇಷ್ಟವಾದ ಶುದ್ಧ ಹಸುವಿನ ತುಪ್ಪ ಹಾಕಿ ಮಾಡಿದ ಗೋಧಿ ಹಲ್ವಾದ ನೈವೇದ್ಯವನ್ನು ಅರ್ಪಿಸಬಹುದು.