ರಿಷಬ್ ಶೆಟ್ಟಿ ಫಿಲ್ಮ್ಸ್ನಿಂದ ಕಲಬುರಗಿ ಪ್ರತಿಭೆಗಳಿಗೆ ಅವಕಾಶ: ಆಡಿಷನ್ ಯಾವಾಗ?
ನಟ ರಿಷಬ್ ಶೆಟ್ಟಿ ಅವರು ತಮ್ಮ ಮುಂಬರುವ ಸಿನಿಮಾಗೆ ತಯಾರಿ ಆರಂಭಿಸಿದ್ದು, ನಟನೆಗಾಗಿ ಹೊಸ ಪ್ರತಿಭೆಗಳನ್ನು ಆಯ್ಕೆ ಮಾಡಲು ಆಡಿಷನ್ ಕರೆದಿದ್ದಾರೆ. ಈ ಕುರಿತು ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಂನಲ್ಲಿ ಪೋಸ್ಟರ್ ಹಂಚಿಕೊಂಡಿರುವ ಅವರು, ‘ಬೆಂಗಳೂರಿನ ನಂತರ, ಉತ್ತರ ಕರ್ನಾಟಕದ ಪ್ರತಿಭೆಗಳನ್ನು ಭೇಟಿಯಾಗಲು ನಮ್ಮ ಪ್ರಯಾಣ ಕಲಬುರಗಿಯತ್ತ’ ಎಂದು ಬರೆದುಕೊಂಡಿದ್ದಾರೆ.ಪೋಸ್ಟ

ನಟ ರಿಷಬ್ ಶೆಟ್ಟಿ ಅವರು ತಮ್ಮ ಮುಂಬರುವ ಸಿನಿಮಾಗೆ ತಯಾರಿ ಆರಂಭಿಸಿದ್ದು, ನಟನೆಗಾಗಿ ಹೊಸ ಪ್ರತಿಭೆಗಳನ್ನು ಆಯ್ಕೆ ಮಾಡಲು ಆಡಿಷನ್ ಕರೆದಿದ್ದಾರೆ. ಈ ಕುರಿತು ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಂನಲ್ಲಿ ಪೋಸ್ಟರ್ ಹಂಚಿಕೊಂಡಿರುವ ಅವರು, ‘ಬೆಂಗಳೂರಿನ ನಂತರ, ಉತ್ತರ ಕರ್ನಾಟಕದ ಪ್ರತಿಭೆಗಳನ್ನು ಭೇಟಿಯಾಗಲು ನಮ್ಮ ಪ್ರಯಾಣ ಕಲಬುರಗಿಯತ್ತ’ ಎಂದು ಬರೆದುಕೊಂಡಿದ್ದಾರೆ.ಪೋಸ್ಟರ್ ಹಂಚಿಕೊಂಡಿರುವ ಅವರು ಅಡಿಬರಹದಲ್ಲಿ, ‘ಕಲಬುರಗಿ, ನಿಮ್ಮ ಊರು, ನಿಮ್ಮ ಪ್ರತಿಭೆ, ನಮ್ಮ ವೇದಿಕೆ. ರಿಷಬ್ ಶೆಟ್ಟಿ ಫಿಲ್ಮ್ಸ್ನ ಹೊಸ ಸಿನಿಮಾದ ಭಾಗವಾಗಲು ಇದೊಂದು ಒಳ್ಳೆಯ ಅವಕಾಶ. ಹೊಸ ಮುಖಗಳು, ಹೊಸ ಕನಸುಗಳು, ಹೊಸ ಅವಕಾಶಗಳು’ ಎಂದು ತಿಳಿಸಿದ್ದಾರೆ.ಭೂತಗಳು ರಿಷಬ್ ಶೆಟ್ಟಿ ಸ್ವತ್ತಾಗಿವೆ; ಪುರುಷೋತ್ತಮ ಬಿಳಿಮಲೆ View this post on Instagram ‘ನಾನು, ಹನುಮಂತ ಇಬ್ಬರೂ ಕನ್ನಡಿಗರೇ’ : ನಟ ರಿಷಬ್ ಶೆಟ್ಟಿ ಆಡಿಷನ್ ಎಲ್ಲಿ ಮತ್ತು ಯಾವಾಗ?ಪೋಸ್ಟರ್ನಲ್ಲಿ ಉಲ್ಲೇಖಿಸಿರುವಂತೆ, ಪುರುಷರಿಗೆ 20 ರಿಂದ 65 ವರ್ಷ ಹಾಗೂ ಮಹಿಳೆಯರಿಗೆ 20 ರಿಂದ 60 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ಈ ವಯಸ್ಸಿನೊಳಗಿನ ಆಸಕ್ತ ಕಲಾವಿದರು ಮಾತ್ರ ಆಡಿಷನ್ನಲ್ಲಿ ಭಾಗವಹಿಸಬಹುದು.ಆಡಿಷನ್ನಲ್ಲಿ ಭಾಗಿಯಾಗುವ ಕಲಾವಿದರಿಗೆ ಸ್ಪಷ್ಟವಾಗಿ ಕನ್ನಡ ಮಾತನಾಡಲು ತಿಳಿದಿರಬೇಕು ಮತ್ತು ಉತ್ತರ ಕರ್ನಾಟಕದ ಭಾಷಾ ಸೊಗಡಿನ ಪರಿಚಯವಿರಬೇಕು. ಈ ಆಡಿಷನ್ ಅಕ್ಟೋಬರ್ 18ರಂದು ಬೆಳಿಗ್ಗೆ 9 ರಿಂದ ಸಂಜೆ 6 ಗಂಟೆಯವರೆಗೆ ಕಲಬುರಗಿಯ ಶರಣಬಸವ ವಿಶ್ವವಿದ್ಯಾಲಯದ ಆವರಣದಲ್ಲಿ ಆಯೋಜನೆಗೊಂಡಿದೆ ಎಂದು ಪೋಸ್ಟರ್ನಲ್ಲಿ ತಿಳಿಸಲಾಗಿದೆ.