ಪೂರ್ವ ಆಫ್ರಿಕಾ ಕರಾವಳಿಯಲ್ಲಿ ದೋಣಿ ಮುಳುಗಿ ಘೋರ ದುರಂತ – 109 ವಲಸಿಗರು ದುರ್ಮರಣ
ಸನಾ: ಪೂರ್ವ ಆಫ್ರಿಕಾ ಕರಾವಳಿಯಲ್ಲಿ ಘೋರ ದುರಂತ ನಡೆದಿದೆ. ಯೆಮೆನ್ಗೆ ತೆರಳುತ್ತಿದ್ದ ದೋಣಿ ಮುಳುಗಿ 15 ಮಕ್ಕಳು ಸೇರಿದಂತೆ ಬರೋಬ್ಬರಿ 109 ಮಂದಿ ಮೃತಪಟ್ಟಿದ್ದಾರೆ. 305 ಮಂದಿ ಪ್ರಯಾಣಿಸುತ್ತಿದ್ದ ದೋಣಿ ಜಿಬೂಟಿಯಿಂದ ಯೆಮೆನ್ಗೆ ತೆರಳುತ್ತಿದ್ದಾಗ ಶುಕ್ರವಾರ ಬೆಳಗ್ಗೆ ವೇಳೆ ದುರಂತಕ್ಕೀಡಾಗಿದೆ ಎಂದು ಅಂತಾರಾಷ್ಟ್ರೀಯ ವಲಸೆ ಸಂಸ್ಥೆ (IOM) ತಿಳಿಸಿದೆ. ಈ ಘಟನೆ ತಡವ

ಸನಾ: ಪೂರ್ವ ಆಫ್ರಿಕಾ ಕರಾವಳಿಯಲ್ಲಿ ಘೋರ ದುರಂತ ನಡೆದಿದೆ. ಯೆಮೆನ್ಗೆ ತೆರಳುತ್ತಿದ್ದ ದೋಣಿ ಮುಳುಗಿ 15 ಮಕ್ಕಳು ಸೇರಿದಂತೆ ಬರೋಬ್ಬರಿ 109 ಮಂದಿ ಮೃತಪಟ್ಟಿದ್ದಾರೆ. 305 ಮಂದಿ ಪ್ರಯಾಣಿಸುತ್ತಿದ್ದ ದೋಣಿ ಜಿಬೂಟಿಯಿಂದ ಯೆಮೆನ್ಗೆ ತೆರಳುತ್ತಿದ್ದಾಗ ಶುಕ್ರವಾರ ಬೆಳಗ್ಗೆ ವೇಳೆ ದುರಂತಕ್ಕೀಡಾಗಿದೆ ಎಂದು ಅಂತಾರಾಷ್ಟ್ರೀಯ ವಲಸೆ ಸಂಸ್ಥೆ (IOM) ತಿಳಿಸಿದೆ. ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಸೌದಿ ವಿಮಾನ ನಿಲ್ದಾಣದ ಮೇಲೆ ಹೌತಿ ಕ್ಷಿಪಣಿ ದಾಳಿ – 12 ಮಂದಿ ಬಲಿ, 300ಕ್ಕೂ ಹೆಚ್ಚು ಜನರಿಗೆ ಗಾಯ ಈ ದುರಂತದಲ್ಲಿ 52 ಪುರುಷರು, 42 ಮಹಿಳೆಯರು ಮತ್ತು 15 ಮಕ್ಕಳು ಮೃತಪಟ್ಟಿದ್ದು, 80ಕ್ಕೂ ಹೆಚ್ಚು ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. 116 ಮಂದಿ ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ. ಉದ್ಯೋಗ ಮತ್ತು ಭದ್ರತಾ ದೃಷ್ಟಿಯಿಂದ ಹಾರ್ನ್ ಆಫ್ ಆಫ್ರಿಕಾ ಪ್ರದೇಶದ ಸಾವಿರಾರು ವಲಸಿಗರು ಜಿಬೂಟಿ ಮೂಲಕ ಬಾಬ್-ಎಲ್-ಮಂಡೇಬ್ ಜಲಸಂಧಿ ದಾಟಿ ಗಲ್ಫ್ ರಾಷ್ಟ್ರಗಳತ್ತ ಪ್ರಯಾಣಿಸುತ್ತಿದ್ದರು. ಈ ವೇಳೆ ದುರಂತ ಸಂಭವಿಸಿದೆ. ಯೆಮೆನ್ನಲ್ಲಿ ಹಿಂಸಾಚಾರ ನಡೆಯುತ್ತಿದ್ದರೂ ಈ ವಲಸೆ ಪ್ರಕ್ರಿಯೆ ಮುಂದುವರಿದಿದೆ. ಇದನ್ನೂ ಓದಿ: ಟ್ರಂಪ್ ಯೂ-ಟರ್ನ್ | ಭಾರತದ ಮೇಲೆ ಸುಂಕ ಹೇರಿ ರಷ್ಯಾದಿಂದಲೇ ಡೀಸೆಲ್ ಖರೀದಿಗೆ ಮುಂದಾದ ಅಮೆರಿಕ