ಜ್ಞಾನೇಶ್ ಕುಮಾರ್ ವಿರುದ್ಧ ಪ್ರತಿಭಟನೆ ಮುಂದುವರಿಯಲಿದೆ: ಸಿಜೆಪಿಯ ಸೌರವ್ ದಾಸ್
ನವದೆಹಲಿ (ಪಿಟಿಐ): ‘ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ವಿರುದ್ಧ ಪ್ರತಿಭಟನೆ ಮುಂದುವರಿಯಲಿದೆ ಮತ್ತು ಅದೀಗ ದೇಶದಾದ್ಯಂತ ವಿಸ್ತರಿಸಲಿದೆ’ ಎಂದು ಸಿಜೆಪಿ ನಾಯಕರು ಭಾನುವಾರ ಘೋಷಿಸಿದರು. ಬಂಧನದಿಂದ ಬಿಡುಗಡೆಯಾದ ಬೆನ್ನಲ್ಲೇ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಜೆಪಿಯ ಸಹ ಸಂಚಾಲಕ ಸೌರವ್ ದಾಸ್, ‘ಮೋದಿ ಸರ್ಕಾರವು ತುರ್ತು ಪರಿಸ್ಥಿತಿಯಂತಹ

ನವದೆಹಲಿ (ಪಿಟಿಐ): ‘ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ವಿರುದ್ಧ ಪ್ರತಿಭಟನೆ ಮುಂದುವರಿಯಲಿದೆ ಮತ್ತು ಅದೀಗ ದೇಶದಾದ್ಯಂತ ವಿಸ್ತರಿಸಲಿದೆ’ ಎಂದು ಸಿಜೆಪಿ ನಾಯಕರು ಭಾನುವಾರ ಘೋಷಿಸಿದರು. ಬಂಧನದಿಂದ ಬಿಡುಗಡೆಯಾದ ಬೆನ್ನಲ್ಲೇ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಜೆಪಿಯ ಸಹ ಸಂಚಾಲಕ ಸೌರವ್ ದಾಸ್, ‘ಮೋದಿ ಸರ್ಕಾರವು ತುರ್ತು ಪರಿಸ್ಥಿತಿಯಂತಹ ಸನ್ನಿವೇಶ ಸೃಷ್ಟಿಸಿದೆ’ ಎಂದು ಆರೋಪಿಸಿದರು. ‘ಪ್ರತಿಭಟನೆ ನಡೆಸಲು ಮುಂದಾದವರನ್ನು ತಡೆಯುವ ಬದಲು, ಮಾತುಕತೆಗೆ ನಿಯೋಗವೊಂದನ್ನು ಆಹ್ವಾನಿಸಬಹುದಿತ್ತು’ ಎಂದು ಅವರು ಹೇಳಿದರು.‘ಶಾಂತಿ ಕದಡಿದ್ದು ಮೋದಿ, ಶಾ’: ಬಿಡುಗಡೆ ಸಂದರ್ಭದಲ್ಲಿ ವಿಧಿಸಲಾದ ಷರತ್ತಿನ ಕುರಿತು ಪ್ರತಿಕ್ರಿಯಿಸಿದ ದಾಸ್, ‘ಒಂದು ವರ್ಷದವರೆಗೆ ಶಾಂತಿ ಕದಡಬಾರದು ಎಂದು ಹೇಳಲಾಗಿದೆ. ಆದರೆ ವಾಸ್ತವದಲ್ಲಿ ಶಾಂತಿ ಕದಡಿದ್ದು ನರೇಂದ್ರ ಮೋದಿ, ಅಮಿತ್ ಶಾ ಮತ್ತು ಜ್ಞಾನೇಶ್ ಕುಮಾರ್’ ಎಂದು ಅವರು ಆರೋಪಿಸಿದರು. ‘ಪ್ರತಿಭಟನೆಗಳು ನಡೆಯುತ್ತಿವೆ. ದೆಹಲಿಯಲ್ಲಿ ಅಷ್ಟೇ ಅಲ್ಲದೇ ಇಡೀ ದೇಶದಲ್ಲಿ ನಡೆಯಲಿವೆ. ಜ್ಞಾನೇಶ್ ರಾಜೀನಾಮೆ ನೀಡುವವರೆಗೂ ಅವು ನಿಲ್ಲುವುದಿಲ್ಲ’ ಎಂದು ಸಿಜೆಪಿ ಸಹ ಸಂಯೋಜಕ ಆಶುತೋಷ್ ರಾಂಕಾ ಪ್ರತಿಪಾದಿಸಿದರು.ಎಸ್ಎಫ್ಐ ಸಂಘಟನೆಯ ಜಂಟಿ ಕಾರ್ಯದರ್ಶಿ ಆಯಿಷಿ ಘೋಷ್ ಮಾತನಾಡಿ, ‘ನಿರ್ಬಂಧಗಳ ಹೊರತಾಗಿಯೂ ಪ್ರತಿಭಟನೆಗಳು ಮುಂದುವರಿಯಲಿವೆ. ಜಂತರ್ ಮಂತರ್ 2.0 ನಡೆಯುತ್ತಿದ್ದು, ನಾವು ಬೀದಿಗಿಳಿದಿದ್ದೇವೆ. ಬೀದಿಯಲ್ಲೇ ಇರುತ್ತೇವೆ. ಸಂವಿಧಾನಕ್ಕೆ ಬದ್ಧರಾಗಿರುತ್ತೇವೆ’ ಎಂದರು.