ಚಾಮರಾಜನಗರ ದಸರಾ: ವೈವಿಧ್ಯಗಳ ಆಗರ
ಚಾಮರಾಜನಗರ: ಜನಪದ ಕಲಾವಿದರ ಬಿಗಿಪಟ್ಟಿಗೆ ಮಣಿದ ರಾಜ್ಯ ಸರ್ಕಾರ ಕೊನೆಯ ಘಳಿಗೆಯಲ್ಲಿ ಜಿಲ್ಲಾ ದಸರಾ ಮಹೋತ್ಸವಕ್ಕೆ ಹಸಿರು ನಿಶಾನೆ ತೋರಿದ್ದು ಅ.17ರಿಂದ 19ರವರೆಗೆ ಮುಹೂರ್ತವೂ ನಿಗದಿಯಾಗಿದೆ.ಆದರೆ, ಜಿಲ್ಲಾ ದಸರಾ ಉತ್ಸವಕ್ಕೆ ಬೆರಳೆಣಿಕೆ ದಿನಗಳು ಮಾತ್ರ ಬಾಕಿ ಇರುವುದರಿಂದ ಉತ್ಸವವನ್ನು ಅಚ್ಚುಕಟ್ಟಾಗಿ ಆಯೋಜಿಸುವುದು ಜಿಲ್ಲಾಡಳಿತಕ್ಕೆ ಬಹುದೊಡ್ಡ ಸವಾಲಾಗಿ ಪರಿಣಮಿಸಿ

ಚಾಮರಾಜನಗರ: ಜನಪದ ಕಲಾವಿದರ ಬಿಗಿಪಟ್ಟಿಗೆ ಮಣಿದ ರಾಜ್ಯ ಸರ್ಕಾರ ಕೊನೆಯ ಘಳಿಗೆಯಲ್ಲಿ ಜಿಲ್ಲಾ ದಸರಾ ಮಹೋತ್ಸವಕ್ಕೆ ಹಸಿರು ನಿಶಾನೆ ತೋರಿದ್ದು ಅ.17ರಿಂದ 19ರವರೆಗೆ ಮುಹೂರ್ತವೂ ನಿಗದಿಯಾಗಿದೆ.ಆದರೆ, ಜಿಲ್ಲಾ ದಸರಾ ಉತ್ಸವಕ್ಕೆ ಬೆರಳೆಣಿಕೆ ದಿನಗಳು ಮಾತ್ರ ಬಾಕಿ ಇರುವುದರಿಂದ ಉತ್ಸವವನ್ನು ಅಚ್ಚುಕಟ್ಟಾಗಿ ಆಯೋಜಿಸುವುದು ಜಿಲ್ಲಾಡಳಿತಕ್ಕೆ ಬಹುದೊಡ್ಡ ಸವಾಲಾಗಿ ಪರಿಣಮಿಸಿದೆ. ಕಾರ್ಯಕ್ರಮದ ಯಶಸ್ಸಿಗೆ ಈಗಾಗಲೇ ಜಿಲ್ಲಾ ಮಟ್ಟದ ಅಧಿಕಾರಿಗಳ ನೇತೃತ್ವದಲ್ಲಿ ಹಲವು ಸಮಿತಿಗಳನ್ನು ರಚನೆ ಮಾಡಲಾಗಿದ್ದು ಪ್ರತಿ ಸಮಿತಿಗೂ ನಿರ್ಧಿಷ್ಟ ಜವಾಬ್ದಾರಿ ಹಂಚಿಕೆ ಮಾಡಲಾಗಿದ್ದು ಅವಧಿಯೊಳಗೆ ಜವಾಬ್ದಾರಿಯನ್ನು ಪೂರ್ಣಗೊಳಿಸವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.ಜಿಲ್ಲಾ ದಸರಾ ಉತ್ಸವಕ್ಕೆ ಐದು ದಿನಗಳಷ್ಟೆ ಬಾಕಿ ಉಳಿದಿದ್ದು ಅಷ್ಟರೊಳಗೆ ಇಡೀ ನಗರಕ್ಕೆ ವಿದ್ಯುತ್ ದೀಪಾಲಂಕಾರ, ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ, ಕಲಾ ಪ್ರದರ್ಶನಕ್ಕೆ ಸಹಸ್ರಾರು ಜನಪದ ಕಲಾವಿದರ ನೋಂದಣಿ, ಕಾರ್ಯಕ್ರಮಗಳ ಸಮಯ ನಿಗಧಿ ಸಹಿತ ಎಲ್ಲ ಸಿದ್ಧತೆಗಳು ಪೂರ್ಣಗೊಳಿಸಬೇಕಾದ ಸವಾಲು ಜಿಲ್ಲಾಡಳಿತ ಮುಂದಿದೆ.ಈ ಬಾರಿ ರೈತ ದಸರಾ, ಮಹಿಳಾ ದಸರಾ, ಯುವ ಸಂಭ್ರಮ, ಮ್ಯಾರಥಾನ್, ಪಾರಂಪರಿಕ ನಡಿಗೆ, ದಸರಾ ಓಟ, ರಸಮಂಜರಿ, ಆಹಾರ ಮೇಳ, ಪುಸ್ತಕ ಮೇಳ, ವಸ್ತು ಪ್ರದರ್ಶನ, ಫಲಪುಷ್ಪ ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮ, ಕವಿಗೋಷ್ಠಿ ಆಯೋಜಿಸಲು ನಿರ್ಧರಿಸಲಾಗಿದ್ದು ವಿಶೇಷ ಆಕರ್ಷಣೆಯಾಗಿ ಲೇಸರ್ ಶೋ, ಸಿಡಿಮದ್ದು ಪ್ರದರ್ಶನವನ್ನೂ ನಡೆಸಲು ತಯಾರಿಗಳು ನಡೆಯುತ್ತಿವೆ.ಹಾಲು ಕರೆಯುವ, ಶ್ವಾನ ಪ್ರದರ್ಶನ ಸ್ಪರ್ಧೆ: ಈ ಬಾರಿಯ ಜಿಲ್ಲಾ ದಸರಾ ಅಂಗವಾಗಿ ಜಿಲ್ಲಾಮಟ್ಟದ ಹಾಲು ಕರೆಯುವ ಸ್ಪರ್ಧೆ ಮತ್ತು ಶ್ವಾನ ಪ್ರದರ್ಶನ ಸ್ಪರ್ಧೆಯನ್ನು ಅ.17ರಂದು ನಗರದ ಡಾ.ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಗೆ ಕಾರ್ಯಕ್ರಮ ಆಯೋಜನೆಗೆ ಹೊಣೆಗಾರಿಕೆ ವಹಿಸಲಾಗಿದೆ.ಹಾಲು ಕರೆಯುವ ಸ್ಪರ್ಧೆಯು 17ರಂದು ಸಂಜೆ 4.30 ಗಂಟೆಗೆ ನಡೆಯಲಿದ್ದು ವಿಜೇತರಿಗೆ ಪ್ರಥಮ ಬಹುಮಾನವಾಗಿ ₹ 20,000, ದ್ವಿತೀಯ ಬಹುಮಾನವಾಗಿ ₹ 15000, ತೃತೀಯ ಬಹುಮಾನವಾಗಿ ₹ 10,000 ನಗದು ಪುರಸ್ಕಾರ ದೊರೆಯಲಿದೆ.ಶ್ವಾನ ಪ್ರದರ್ಶನ ಸ್ಪರ್ಧೆ ಅಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ನಡೆಯಲಿದ್ದು, ವಿಜೇತ ಶ್ವಾನಗಳ ಮಾಲೀಕರಿಗೆ ವಿಶೇಷ ಬಹುಮಾನ ನೀಡಲಾಗುವುದು.17 ರಿಂದ 19ರವರೆಗೆ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಕಲಾ ತಂಡಗಳ ಹಾಗೂ ಕಲಾವಿದರ ನೋಂದಣಿ ಪ್ರಕ್ರಿಯೆ ನಡೆಯುತ್ತಿದ್ದು ಭಾನುವಾರದವರೆಗೆ 189 ಕಲಾತಂಡಗಳು ನೋಂದಣಿ ಮಾಡಿಸಿಕೊಂಡಿವೆ. ಕೊನೆಯ ದಿನವಾದ ಅ.12ರೊಳಗೆ 500 ಕಲಾ ತಂಡಗಳ ನೋಂದಣಿ ನಿರೀಕ್ಷೆ ಇದ್ದು 4,000ಕ್ಕೂ ಹೆಚ್ಚು ಕಲಾವಿದರು ಪ್ರದರ್ಶನ ನೀಡುವ ನಿರೀಕ್ಷೆ ಇದೆ ಎನ್ನುತ್ತಾರೆ ಅಧಿಕಾರಿಗಳು.ಹೆಲಿ ರೈಡ್ ವಿಶೇಷ ಆಕರ್ಷಣೆಈ ಬಾರಿಯ ಜಿಲ್ಲಾ ದಸರಾದಲ್ಲಿ ಆಕಾಶದಿಂದ ಚೆಲುವ ಚಾಮರಾಜನಗರದ ಸೌಂದರ್ಯವನ್ನು ಕಣ್ತುಂಬಿಕೊಳ್ಳುವ ಅವಕಾಶವನ್ನು ಸ್ಥಳೀಯರಿಗೆ ಒದಗಿಸಲು ಜಿಲ್ಲಾಡಳಿತ ಮೊದಲ ಬಾರಿಗೆ ‘ಹೆಲಿರೈಡ್’ ಆಯೋಜಿಸಲು ಸಿದ್ಧತೆ ಮಾಡಿಕೊಂಡಿದ್ದು ಖಾಸಗಿ ಸಂಸ್ಥೆಯ ಜೊತೆಗೆ ಮಾತುಕತೆ ಅಂತಿಮ ಹಂತದಲ್ಲಿದೆ. ಫಲಪ್ರದವಾದರೆ ಜಿಲ್ಲೆಯ ಜನರು ಹೆಲಿಕಾಪ್ಟರ್ನಲ್ಲಿ ಕುಳಿತು ನಗರದ ಸುತ್ತಮುತ್ತಲಿನ ಸೌಂದರ್ಯವನ್ನು ಸವಿಯಬಹುದು.ಜಿಲ್ಲಾಡಳಿತ ಸಜ್ಜು: ಜಿಲ್ಲಾಧಿಕಾರಿಕಡಿಮೆ ಅವಧಿಯಲ್ಲಿ ಜಿಲ್ಲಾ ದಸರಾ ಮಹೋತ್ಸವವನ್ನು ಅಚ್ಚುಕಟ್ಟಾಗಿ ನಡೆಸಲು ಜಿಲ್ಲಾಡಳಿತ ಸಕಲ ರೀತಿಯಲ್ಲಿ ಸಜ್ಜಾಗಿದೆ. ಎಲ್ಲ ಅಧಿಕಾರಿಗಳು ಬಿಡುವಿಲ್ಲದೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಬಾರಿ ಜಿಲ್ಲೆಯ ಜನರಿಗೆ ಹೆಲಿರೈಡ್ನ ವಿಶಿಷ್ಟ ಅನುಭವ ನೀಡಲು ತಯಾರಿ ಮಾಡಿಕೊಳ್ಳಲಾಗುತ್ತಿದೆ. ಇದಲ್ಲದೆ ಲೇಸರ್ ಶೋ, ಸಿಡಿಮದ್ದು ಪ್ರದರ್ಶನ ಆಯೋಜಿಸುವ ಬಗ್ಗೆಯೂ ಚಿಂತನೆ ನಡೆದಿದೆ.–ಶ್ರೀರೂಪಾ, ಜಿಲ್ಲಾಧಿಕಾರಿ261012-37-828012642