ಗೂಗಲ್ ಟ್ರೆಂಡಿಂಗ್: ಯಾರೀ ನೇಹಾ ಬೋರಾ? ಆಕೆಯ ಊರು, ವಿದ್ಯಾಭ್ಯಾಸ ಹುಡುಕಾಟ..
ನವದೆಹಲಿ: ಚುನಾವಣಾ ಅಕ್ರಮಗಳನ್ನು ಖಂಡಿಸಿ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಯ ನಡುವೆ, 29 ವರ್ಷದ ವಿದ್ಯಾರ್ಥಿ ನಾಯಕಿ ನೇಹಾ ಬೋರಾ ಬಗ್ಗೆ ಸಾಮೂಹಿಕ ಜಾಲತಾಣ ಹಾಗೂ ಗೂಗಲ್ ಸರ್ಚ್ನಲ್ಲಿ ಹೆಚ್ಚು ಹುಡುಕಾಟ ನಡೆಸಲಾಗಿದೆ.ಪ್ರತಿಭಟನೆಯ ವೇಳೆ ದೆಹಲಿ ಪೊಲೀಸರಿಂದ ವಶಕ್ಕೆ ಪಡೆಯಲ್ಪಟ್ಟ

ನವದೆಹಲಿ: ಚುನಾವಣಾ ಅಕ್ರಮಗಳನ್ನು ಖಂಡಿಸಿ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಯ ನಡುವೆ, 29 ವರ್ಷದ ವಿದ್ಯಾರ್ಥಿ ನಾಯಕಿ ನೇಹಾ ಬೋರಾ ಬಗ್ಗೆ ಸಾಮೂಹಿಕ ಜಾಲತಾಣ ಹಾಗೂ ಗೂಗಲ್ ಸರ್ಚ್ನಲ್ಲಿ ಹೆಚ್ಚು ಹುಡುಕಾಟ ನಡೆಸಲಾಗಿದೆ.ಪ್ರತಿಭಟನೆಯ ವೇಳೆ ದೆಹಲಿ ಪೊಲೀಸರಿಂದ ವಶಕ್ಕೆ ಪಡೆಯಲ್ಪಟ್ಟ ನೇಹಾ, ಇನ್ಸ್ಟಾಗ್ರಾಮ್ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಜನರಿಗೆ ಪ್ರತಿಭಟನೆಯ ಸಂದೇಶ ಸಾರಿದ್ದ ಆಕೆಯ ವಿಡಿಯೊಗಳು ಭಾರಿ ಸದ್ದು ಮಾಡಿವೆ. ಇದರ ಬೆನ್ನಲ್ಲೇ ಗೂಗಲ್ನಲ್ಲಿ ಆಕೆಯ ವಯಸ್ಸು, ಹುಟ್ಟೂರು, ಶಿಕ್ಷಣ ಹಾಗೂ ಹಿನ್ನೆಲೆಯ ಕುರಿತು ಹುಡುಕಾಟ ನಡೆಸುವವರ ಸಂಖ್ಯೆ ದಿಢೀರ್ ಏರಿಕೆಯಾಗಿದೆ.ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ | ಸಂಸ್ಕೃತಿಯ ಸಂಗಮವೋ, ರಾಜಕೀಯ ತಂತ್ರವೋ? ಅರಾಜಕತೆ ಸೃಷ್ಟಿಸುವ ನಾಯಕ: ರಾಹುಲ್ ವಿರುದ್ಧ ಬಿಜೆಪಿ ಸಂಸದ ಠಾಕೂರ್ ವಾಗ್ದಾಳಿ ಬೋರಾ ಉತ್ತರಾಖಂಡದ ಖತಿಮಾ ಮೂಲದವರಾಗಿದ್ದಾರೆ. ಅವರ ತಂದೆ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದರಿಂದ ಆಕೆಯ ಶಿಕ್ಷಣವು ಅನೇಕ ನಗರಗಳಲ್ಲಿ ನಡೆಯಿತು. ಶಾಲಾ ಶಿಕ್ಷಣವನ್ನು ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ಮುಗಿಸಿದರು. ದೆಹಲಿ ವಿಶ್ವವಿದ್ಯಾಲಯದ ಹಿಂದೂ ಕಾಲೇಜಿನಲ್ಲಿ ಸಮಾಜಶಾಸ್ತ್ರದಲ್ಲಿ ಬಿ.ಎ. ಪದವಿ ಪಡೆದರು. ದೆಹಲಿಯ ಡಾ.ಬಿ.ಆರ್. ಅಂಬೇಡ್ಕರ್ ವಿಶ್ವವಿದ್ಯಾಲಯದಲ್ಲಿ ರಂಗಭೂಮಿ ಅಧ್ಯಯನದಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದರು. ಪ್ರಸ್ತುತ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಆರ್ಟ್ಸ್ ಆಂಡ್ ಈಸ್ಥೆಟಿಕ್ಸ್ನಲ್ಲಿ ರಂಗಭೂಮಿ ಹಾಗೂ ಪ್ರದರ್ಶನ ಅಧ್ಯಯನ (Theatre and Performance Studies) ವಿಷಯದಲ್ಲಿ ಪಿಎಚ್ಡಿ ಅಧ್ಯಯನ ನಡೆಸುತ್ತಿದ್ದಾರೆ. ವಿದ್ಯಾರ್ಥಿ ರಾಜಕೀಯಕ್ಕೆ ಬಂದಿದ್ದು ಹೇಗೆ?ರಂಗಭೂಮಿಯ ಹಿನ್ನೆಲೆಯಿಂದ ಬಂದ ನೇಹಾ, 2019 ಮತ್ತು 2020ರಲ್ಲಿ ನಡೆದ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಹೋರಾಟದ ಮೂಲಕ ಸಕ್ರಿಯ ವಿದ್ಯಾರ್ಥಿ ರಾಜಕೀಯಕ್ಕೆ ಕಾಲಿಟ್ಟರು. ಎಡಪಂಥೀಯ ವಿದ್ಯಾರ್ಥಿ ಸಂಘಟನೆಯಾದ ಆಲ್ ಇಂಡಿಯಾ ಸ್ಟೂಡೆಂಟ್ಸ್ ಅಸೋಸಿಯೇಷನ್ (ಎಸಿಎಸ್ಎ) ಜತೆ ಗುರುತಿಸಿಕೊಂಡ ಅವರು, ಪ್ರಸ್ತುತ ಅದರ ರಾಷ್ಟ್ರೀಯ ಅಧ್ಯಕ್ಷೆಯಾಗಿ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ. ನೇಹಾ ಬೋರಾಸುಳ್ಳು ವದಂತಿ ಹರಡುವಿಕೆ: 300 ಪೋಸ್ಟ್ಗಳನ್ನು ಡಿಲೀಟ್ ಮಾಡಿದ ದೆಹಲಿ ಪೊಲೀಸ್ಸುದ್ದಿಗೋಷ್ಠಿಯಲ್ಲಿ AI ಬಳಕೆ ಆರೋಪ: ಟ್ರೋಲ್ಗೆ ಗುರಿಯಾದ CJP ನಾಯಕ ಸೌರವ್ ದಾಸ್ ದೆಹಲಿ ಪ್ರತಿಭಟನೆಯಲ್ಲಿ ಸಕ್ರಿಯ ಪಾತ್ರಶನಿವಾರ (ಅಕ್ಟೋಬರ್ 10) ದೆಹಲಿ ಪೊಲೀಸರು ಜಂತರ್ ಮಂತರ್ಗೆ ತೆರಳದಂತೆ ಪ್ರತಿಭಟನಾಕಾರರನ್ನು ತಡೆದಾಗ, ನೇಹಾ ಕಾರ್ಯಕರ್ತರನ್ನು 'ದೆಹಲಿ ಹಾತ್' ಪ್ರದೇಶದಲ್ಲಿ ಒಟ್ಟುಗೂಡುವಂತೆ ಕರೆ ನೀಡಿದ್ದರು. 'ನನ್ನನ್ನು ಬಂಧಿಸಿ ವಶದಲ್ಲಿ ಇಡಲಾಗಿದೆ, ಆದರೆ ಈ ಹೋರಾಟ/ಚಳವಳಿಯನ್ನಲ್ಲ. ಪೊಲೀಸರು ನಿಮ್ಮನ್ನು ಎಲ್ಲಿ ತಡೆಯುತ್ತಾರೋ, ಅದೇ ಸ್ಥಳದಲ್ಲಿ ಕುಳಿತು ಹೋರಾಟ ಮುಂದುವರಿಸಿ' ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ವಿಡಿಯೊ ಸಂದೇಶ ನೆಟ್ಟಿಗರ ಮನಗೆದ್ದಿದೆ.ಹಿಂದಿ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಸಂವಿಧಾನಿಕ ಹಕ್ಕುಗಳ ಕುರಿತು ಪ್ರಭಾವಶಾಲಿಯಾಗಿ ಮಾತನಾಡುವ ನೇಹಾ ಬೋರಾ, ಈಗಿನ ದೆಹಲಿ ಪ್ರತಿಭಟನೆಯ ಪ್ರಮುಖ ಆಕರ್ಷಣೆ ಆಗಿದ್ದಾರೆ.