ಕೆಳಕ್ಕೆ ಬೀಳಿಸಿ ಹಲ್ಲೆ ನಡೆಸಿದರು: ಜಾನ್ ಬ್ರಿಟ್ಟಾಸ್
ನವದೆಹಲಿ: ‘ಕನಾಟ್ ಪ್ಲೇಸ್ ಪ್ರದೇಶದಲ್ಲಿ ಮಾಧ್ಯಮದವರ ಜತೆ ಮಾತನಾಡುತ್ತಿದ್ದಾಗ ಅರೆಸೇನಾ ಪಡೆಯ ಕೆಲವು ಸಿಬ್ಬಂದಿ ಇದ್ದಕ್ಕಿದ್ದಂತೆ ಬಂದು ನನ್ನನ್ನು ಬಲವಂತವಾಗಿ ಕರೆದೊಯ್ದು ಬಸ್ನೊಳಗೆ ತಳ್ಳಿದರು. ಬಸ್ನ ಒಳಗಿಂದಲೇ ಮಾಧ್ಯಮಗಳೊಂದಿಗೆ ಮಾತನಾಡಲು ಪ್ರಯತ್ನಿಸಿದೆ. ಆಗ ಅವರಲ್ಲಿ ನಾಲ್ಕೈದು ಮಂದಿ ನನ್ನನ್ನು ಕೆಳಕ್ಕೆ ಬೀಳಿಸಿ ಹಲ್ಲೆ ನಡೆಸಿದರು’ ಎಂದು ಸಿಪಿಎಂನ ರಾಜ್

ನವದೆಹಲಿ: ‘ಕನಾಟ್ ಪ್ಲೇಸ್ ಪ್ರದೇಶದಲ್ಲಿ ಮಾಧ್ಯಮದವರ ಜತೆ ಮಾತನಾಡುತ್ತಿದ್ದಾಗ ಅರೆಸೇನಾ ಪಡೆಯ ಕೆಲವು ಸಿಬ್ಬಂದಿ ಇದ್ದಕ್ಕಿದ್ದಂತೆ ಬಂದು ನನ್ನನ್ನು ಬಲವಂತವಾಗಿ ಕರೆದೊಯ್ದು ಬಸ್ನೊಳಗೆ ತಳ್ಳಿದರು. ಬಸ್ನ ಒಳಗಿಂದಲೇ ಮಾಧ್ಯಮಗಳೊಂದಿಗೆ ಮಾತನಾಡಲು ಪ್ರಯತ್ನಿಸಿದೆ. ಆಗ ಅವರಲ್ಲಿ ನಾಲ್ಕೈದು ಮಂದಿ ನನ್ನನ್ನು ಕೆಳಕ್ಕೆ ಬೀಳಿಸಿ ಹಲ್ಲೆ ನಡೆಸಿದರು’ ಎಂದು ಸಿಪಿಎಂನ ರಾಜ್ಯಸಭಾ ಸದಸ್ಯ ಜಾನ್ ಬ್ರಿಟ್ಟಾಸ್ ಆರೋಪಿಸಿದ್ದಾರೆ.‘ಒಬ್ಬರು ನನ್ನ ಕುತ್ತಿಗೆಯನ್ನು ಬಿಗಿಯಾಗಿ ಹಿಡಿದುಕೊಂಡಿದ್ದರಿಂದ ಉಸಿರುಗಟ್ಟಿದಂತಾಯಿತು. ಬಸ್ನಲ್ಲಿದ್ದಸಜಾದ್ ಎಂಬವರು ಆ ಹಿಡಿತದಿಂದ ಬಿಡಿಸಿಕೊಳ್ಳಲು ನನಗೆ ಸಹಾಯ ಮಾಡಿದರು. ಈ ಘಟನೆ ನಡೆಯುತ್ತಿರುವಾಗಲೇ, ಹಿರಿಯ ಪೊಲೀಸ್ ಅಧಿಕಾರಿಯೊಬ್ಬರಿಂದ ನನಗೆ ಕರೆ ಬಂದಿತು. ನನ್ನನ್ನು ಬಿಡುಗಡೆ ಮಾಡುವಂತೆ ಭದ್ರತಾ ಸಿಬ್ಬಂದಿಗೆ ಹೇಳಿದೆ. ಅವರು ವಾಹನದಲ್ಲೇ ಕೆಲಹೊತ್ತು ಸುತ್ತಾಡಿಸಿ, ಜನಸಂಚಾರವಿಲ್ಲದ ಸ್ಥಳವೊಂದರಲ್ಲಿ ಹೊರಗೆ ತಳ್ಳಿದರು’ ಎಂದು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.‘ಶಾಂತಿಯುತ ಪ್ರತಿಭಟನೆ ನಡೆಸುವುದು ಮೂಲಭೂತ ಹಕ್ಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ನಾನು ಬ್ಯಾರಿಕೇಡ್ ಹತ್ತಿರಕ್ಕೂ ಹೋಗಿರಲಿಲ್ಲ ಮತ್ತು ನಿಷೇಧಾಜ್ಞೆಯನ್ನು ಉಲ್ಲಂಘಿಸಿಲ್ಲ. ಇದು ಉದ್ದೇಶಪೂರ್ವಕ ಕೃತ್ಯದಂತೆ ತೋರುತ್ತದೆ. ದೆಹಲಿ ಪೊಲೀಸರು ನ್ಯಾಯದ ಪ್ರಜ್ಞೆಯನ್ನೇ ಕಳೆದುಕೊಂಡಿದ್ದಾರೆ ಎಂದು ಈಗ ಅನಿಸುತ್ತಿದೆ’ ಎಂದಿದ್ದಾರೆ.‘ಸುಪ್ರೀಂ ಕೋರ್ಟ್ ನಿರ್ದೇಶನಗಳಿದ್ದರೂ ಪೊಲೀಸರು ತೋರಿದ ದರ್ಪದ ವಿರುದ್ಧ ರಾಷ್ಟ್ರಪತಿ ಮತ್ತು ಭಾರತದ ಮುಖ್ಯ ನ್ಯಾಯಮೂರ್ತಿ ಅವರಿಗೆ ಪತ್ರ ಬರೆದಿದ್ದೇನೆ. ಆಸ್ಪತ್ರೆಗೆ ದಾಖಲಾದ ನನ್ನನ್ನು ಅಲ್ಲೇ ಉಳಿಯುವಂತೆ ಸಹೋದ್ಯೋಗಿಗಳು ಕೇಳಿಕೊಂಡರು. ಆದರೆ, ವೈದ್ಯರ ಸಲಹೆಯನ್ನು ಧಿಕ್ಕರಿಸಿ ಆಸ್ಪತ್ರೆಯಿಂದ ಹೊರಬಂದೆ. ದೆಹಲಿ ಪೊಲೀಸರು ಯಾವುದೇ ಕಠಿಣ ಕ್ರಮ ಕೈಗೊಂಡರೂ, ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ನಾವು ಪ್ರತಿಭಟನೆಯನ್ನು ಮುಂದುವರಿಸುತ್ತೇವೆ’ ಎಂದಿದ್ದಾರೆ.‘ನಮ್ಮ ಮೇಲೆ ಹಲ್ಲೆ ನಡೆದರೆ ಅಥವಾ ಉಸಿರುಗಟ್ಟಿಸಿ ಕೊಲ್ಲುವಂತಹ ಪರಿಸ್ಥಿತಿ ಎದುರಾದರೂ, ನಾವು ಹೆದರುವುದಿಲ್ಲ. ದೇಶದ ಪ್ರಜಾಪ್ರಭುತ್ವವನ್ನು ಮರುಸ್ಥಾಪಿಸುವ ಈ ಹೋರಾಟದಲ್ಲಿ ಗೆಲುವು ಸಾಧಿಸುವವರೆಗೂ ಮುನ್ನುಗ್ಗುತ್ತೇವೆ’ ಎಂದಿದ್ದಾರೆ.261012-42-1068748086