‘ತುಮಕೂರು ದಸರಾ’ಗೆ ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಚಾಲನೆ
ತುಮಕೂರು: ‘ತುಮಕೂರು ದಸರಾ’ಗೆ ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಭಾನುವಾರ ಚಾಲನೆ ದೊರೆಯಿತು.ಜಿಲ್ಲಾ ಆಡಳಿತದಿಂದ ಏರ್ಪಡಿಸಿರುವ ಮೂರನೇ ವರ್ಷದ ದಸರಾ ಸಂಭ್ರಮ ನಗರದಲ್ಲಿ ಮನೆ ಮಾಡಿದೆ. ಪುರಾತನ ದೇಗುಲದ ಮಾದರಿಯಲ್ಲಿ ಸಿದ್ಧಪಡಿಸಿರುವ ಧಾರ್ಮಿಕ ಮಂಟಪದಲ್ಲಿ ಮೊದಲ ದಿನದ ಪೂಜಾ ಕೈಂಕರ್ಯ ಜರುಗಿದವು. ಉಪಮುಖ್ಯಮಂತ್ರಿ ಜಿ.ಪರಮೇಶ್ವರ, ಕನ್ನಿಕಾ ಪರಮೇಶ್ವರಿ ದಂಪತಿ ಚಾಮು

ತುಮಕೂರು: ‘ತುಮಕೂರು ದಸರಾ’ಗೆ ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಭಾನುವಾರ ಚಾಲನೆ ದೊರೆಯಿತು.ಜಿಲ್ಲಾ ಆಡಳಿತದಿಂದ ಏರ್ಪಡಿಸಿರುವ ಮೂರನೇ ವರ್ಷದ ದಸರಾ ಸಂಭ್ರಮ ನಗರದಲ್ಲಿ ಮನೆ ಮಾಡಿದೆ. ಪುರಾತನ ದೇಗುಲದ ಮಾದರಿಯಲ್ಲಿ ಸಿದ್ಧಪಡಿಸಿರುವ ಧಾರ್ಮಿಕ ಮಂಟಪದಲ್ಲಿ ಮೊದಲ ದಿನದ ಪೂಜಾ ಕೈಂಕರ್ಯ ಜರುಗಿದವು. ಉಪಮುಖ್ಯಮಂತ್ರಿ ಜಿ.ಪರಮೇಶ್ವರ, ಕನ್ನಿಕಾ ಪರಮೇಶ್ವರಿ ದಂಪತಿ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.ಗಣ ಹೋಮ, ನವಗ್ರಹ ಹೋಮ, ಮೃತ್ಯುಂಜಯ ಹೋಮ, ದುರ್ಗಾ ಹೋಮ, ಪೂರ್ಣಾಹುತಿ ನೆರವೇರಿತು. ಧ್ವಜಾರೋಹಣ, ನಂದಿಧ್ವಜ ಪೂಜೆ ಮಾಡಲಾಯಿತು. ಚಂಡೆ, ಕೊಂಬು ಕಹಳೆ, ಪೂಜಾ ಕುಣಿತ, ಡೊಳ್ಳು ಕುಣಿತ ಇತರೆ ಕಲಾ ತಂಡಗಳು ಸಂಭ್ರಮದ ಮೆರುಗನ್ನು ದುಪ್ಪಟ್ಟು ಮಾಡಿದವು.ಸಂಸ್ಕೃತಿ, ಪರಂಪರೆ ಪರಿಚಯ: ಜಿ.ಪರಮೇಶ್ವರ ನಗಾರಿ ಬಾರಿಸುವ ಮೂಲಕ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ‘ಸಂಸ್ಕೃತಿ, ಪರಂಪರೆ ಮುಂದುವರಿಸಿಕೊಂಡು ಹೋಗುವ ಉದ್ದೇಶದಿಂದ ದಸರಾ ಆಚರಿಸಲಾಗುತ್ತಿದೆ. ಜಿಲ್ಲೆ ಸಾಹಿತ್ಯ, ರಂಗಭೂಮಿ, ಕ್ರೀಡೆ, ನಾಟಕಕ್ಕೆ ಪ್ರಸಿದ್ಧಿಯಾಗಿದೆ. ಹಬ್ಬದ ಮೂಲಕ ಇಂದಿನ ಪೀಳಿಗೆಗೆ ಇದನ್ನು ತಿಳಿಸಲಾಗುತ್ತಿದೆ’ ಎಂದರು.ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ, ‘ಹಬ್ಬಗಳು ಅಂತರಂಗ, ಬಹಿರಂಗ ಎರಡನ್ನೂ ಶುದ್ಧಗೊಳಿಸುತ್ತವೆ. 10 ದಿನ ಉಪವಾಸ, ವ್ರತ, ಪೂಜೆಯ ಮೂಲಕ ಕಾಯ, ವಾಚ, ಮನಸು ಶುದ್ಧವಾಗುತ್ತದೆ’ ಎಂದು ತಿಳಿಸಿದರು.ಎಲೆರಾಂಪುರ ಕುಂಚಿಟಿಗರ ಮಠದ ಹನುಮಂತನಾಥ ಸ್ವಾಮೀಜಿ, ಸಿದ್ಧರಬೆಟ್ಟದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ, ಶಾಸಕರಾದ ಟಿ.ಬಿ.ಜಯಚಂದ್ರ, ಕೆ.ಷಡಕ್ಷರಿ, ಜಿ.ಬಿ.ಜ್ಯೋತಿಗಣೇಶ್, ಎಚ್.ವಿ.ವೆಂಕಟೇಶ್, ಡಿ.ಟಿ.ಶ್ರೀನಿವಾಸ್, ಕಾಡುಗೊಲ್ಲ ನಿಗಮದ ಅಧ್ಯಕ್ಷ ಮಹೇಶ್ ಹಾರೋಗೆರೆ, ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಜಿ.ಚಂದ್ರಶೇಖರ್ಗೌಡ, ಬಿಎಂಟಿಸಿ ಉಪಾಧ್ಯಕ್ಷ ನಿಕೇತ್ ರಾಜ್ ಮೌರ್ಯ, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿ.ಪಂ ಸಿಇಒ ಬಿ.ವಿ.ಅಶ್ವಿಜ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್, ಹೆಚ್ಚುವರಿ ಜಿಲ್ಲಾಧಿಕಾರಿ ಎನ್.ತಿಪ್ಪೇಸ್ವಾಮಿ, ಮಹಾನಗರ ಪಾಲಿಕೆ ಆಯುಕ್ತೆ ಬಿ.ಶುಭ, ತಹಶಿಲ್ದಾರ್ ಪಿ.ಎಸ್.ರಾಜೇಶ್ವರಿ ಪಾಲ್ಗೊಂಡಿದ್ದರು.ಪರಮೇಶ್ವರ ಸಿಎಂ ಆಗಲಿ: ಸ್ವಾಮೀಜಿ‘ಪರಮೇಶ್ವರ ಮುಖ್ಯಮಂತ್ರಿಯಾದರೆ ಜಿಲ್ಲೆಯ ಅಭಿವೃದ್ಧಿಗೆ ಮತ್ತಷ್ಟು ಸಹಕಾರಿಯಾಗಲಿದೆ. ಅವರು ಸಿಎಂ ಆಗಲಿ’ ಎಂದು ಬೆಳ್ಳಾವಿ ಕಾರದ ಮಠದ ಕಾರದ ವೀರಬಸವ ಸ್ವಾಮೀಜಿ ಆಶಿಸಿದರು.ಸ್ವಾಮೀಜಿ ಹೇಳಿಕೆ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಪರಮೇಶ್ವರ, ‘ಸ್ವಾಮೀಜಿಗಳು ಆಶೀರ್ವದಿಸುವುದು, ಜನ ಅಭಿಪ್ರಾಯ ವ್ಯಕ್ತಪಡಿಸುವುದು ಸಹಜ. ರಾಜಕೀಯ ಕ್ಷೇತ್ರದಲ್ಲಿ ತನ್ನದೇ ಆದ ಪದ್ಧತಿ, ನಿಯಮ ಇದೆ. ಪ್ರಸ್ತುತ ಮುಖ್ಯಮಂತ್ರಿ ಸ್ಥಾನ ಖಾಲಿ ಇಲ್ಲ. ಈಗ ಅಂತಹ ಪ್ರಶ್ನೆ ಎದುರಾಗುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.ವಿರೋಧದ ಮಧ್ಯೆ ಹೆಲಿ ರೈಡ್ ಆರಂಭವಿದ್ಯಾರ್ಥಿಗಳು, ಪ್ರಾಧ್ಯಾಪಕರ ವಿರೋಧದ ಮಧ್ಯೆ ವಿಶ್ವವಿದ್ಯಾಲಯದ ಆವರಣದಲ್ಲಿ ಹೆಲಿಕಾಪ್ಟರ್ ಹಾರಾಟ ಪ್ರಾರಂಭವಾಯಿತು.ಅ.11ರ ವರೆಗೆ ಹೆಲಿಕಾಪ್ಟರ್ ಸಂಚಾರ ಇರಲಿದೆ. ಒಬ್ಬರಿಗೆ ₹4,100 ಶುಲ್ಕ ನಿಗದಿ ಪಡಿಸಲಾಗಿದೆ. 7 ನಿಮಿಷ ಹೆಲಿಕಾಪ್ಟರ್ನಲ್ಲಿ ಹಾರಾಡಬಹುದು.‘ಆವರಣದಲ್ಲಿ ಹೆಲಿಕಾಪ್ಟರ್ ಹಾರಾಟದಿಂದ ಬೋಧನೆ, ಕಲಿಕೆಗೆ ಅಡ್ಡಿಯಾಗುತ್ತಿದೆ. ಸ್ಥಳ ಬದಲಾಯಿಸುವಂತೆ’ ವಿದ್ಯಾರ್ಥಿಗಳು ಮನವಿ ಸಲ್ಲಿಸಿದ್ದರು. ಹೆಲಿ ರೈಡ್ ವಿರೋಧಿಸಿ ಎಬಿವಿಪಿ ಪದಾಧಿಕಾರಿಗಳು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದ್ದರು.ದಸರಾದಲ್ಲಿ ಇಂದುದೇವಿಗೆ ಬ್ರಹ್ಮಚಾರಿಣಿ ಅಲಂಕಾರ, ಜೂನಿಯರ್ ಕಾಲೇಜು ಮೈದಾನದಲ್ಲಿ ಸಂಜೆ 4 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ, ಶ್ರೀದೇವಿ ವಿದ್ಯಾ ಮಂದಿರದಿಂದ ಭರತ ನಾಟ್ಯ, ಜೈನ್ ಪಬ್ಲಿಕ್ ಶಾಲೆ ಮಕ್ಕಳಿಂದ ರಾಜ್ಯ ಇತಿಹಾಸದ ಕುರಿತು ರೂಪಕ, ಎಂಪ್ರೆಸ್ ಕಾಲೇಜು ವಿದ್ಯಾರ್ಥಿಗಳಿಂದ ಜಾನಪದ ನೃತ್ಯ, ವಿಶ್ವವಿದ್ಯಾಲಯದಿಂದ ವೀರಗಾಸೆ, ಅಯ್ಯಪ್ಪ ಭಜನಾ ಮಂಡಳಿಯಿಂದ ಭಕ್ತಿಭಾವ ರಂಜನಿ, ರೇವತಿ ನೃತ್ಯ ಕಲಾ ಮಂದಿರದಿಂದ ರೂಪಕ, ನಾಗಭೂಷಣ್ ಮತ್ತು ತಂಡದಿಂದ ವಾದ್ಯ ವೈವಿಧ್ಯ, ನರಸಿಂಹದಾಸ್ ತಂಡದಿಂದ ಗಿರಿಜಾ ಕಲ್ಯಾಣ ಕಥಾ ಕೀರ್ತನ261012-17-1182559596